ಲಕ್ನೋ: ರಾಮನೂರು ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬ ಒಂದು ದಿನ ಮುಂಚಿತವಾಗಿಯೇ ದೀಪೋತ್ಸವ (Ayodhya Deepotsav 2022) ನಡೆದಿದೆ. ದೀಪೋತ್ಸವಕ್ಕೆ ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಿದ್ದು, 18 ಲಕ್ಷ ದೀಪಗಳನ್ನು ಬೆಳಗುವ ಮೂಲಕ ದಾಖಲೆ ಸೃಷ್ಟಿಸಲಾಯಿತು.
Advertisement
ಅಯೋಧ್ಯೆಯ (Ayodhya) ಸರಯೂ ತಟದಲ್ಲಿ ಅದ್ಧೂರಿ ದೀಪೋತ್ಸವಕ್ಕೆ ಮೋದಿ ಚಾಲನೆ ನೀಡಿದರು. 18 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಲಾಯಿತು. ದೀಪದ ಹೊಂಬೆಳಕಿನಲ್ಲಿ ಸರಯೂ ನದಿ ತೀರದ 40 ಘಾಟ್‌ಗಳು ಮಿಂದೆದ್ದಿದ್ದು, ಗಿನ್ನಿಸ್ ದಾಖಲೆಯನ್ನೂ ಬರೆದಿದೆ. ಪವಿತ್ರ ಸರಯೂ ನದಿಗೆ ಮಹಾ ಆರತಿ ಬೆಳಗಲಾಗಿದೆ. ಮ್ಯೂಸಿಕಲ್ ಲೇಸರ್ ಶೋ ಮೂಲಕ ರಾಮಾಯಣ ಪ್ರಸ್ತುತಿಪಡಿಸಲಾಯ್ತು. ಈ ಸಂಭ್ರಮಕ್ಕೆ ರಷ್ಯಾ, ಮಾಲ್ಡೀವ್ಸ್, ಶ್ರೀಲಂಕಾ ಪ್ರತಿನಿಧಿಗಳ ಜೊತೆ ಪ್ರಧಾನಿ ಮೋದಿ ಸಾಕ್ಷಿಯಾದರು. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಸೂಪರ್; `ಕಾಂತಾರ’ ಸಿನಿಮಾಗೆ ಇಂಡೋ-ಪಾಕ್ ಕದನ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್
Advertisement
Advertisement
ಸಂಜೆ ಐದು ಗಂಟೆಗೆ ರಾಮಲೀಲ್ಲಾ (Ramaleela) ದರ್ಶನ ಮಾಡಿದ ಮೋದಿ, ನಂತರ ನಿರ್ಮಾಣ ಹಂತದ ರಾಮಮಂದಿರವನ್ನು ಪರಿಶೀಲಿಸಿದ್ರು. ರಾಮಕಥಾ ಉದ್ಯಾನಕ್ಕೂ ಭೇಟಿ ನೀಡಿದ್ರು. 4 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಇದೇ ವೇಳೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಇದನ್ನೂ ಓದಿ: ಗುಲಾಮಿ ಮನಸ್ಥಿತಿಯಿಂದ ಆಚೆ ಬರಲು ರಾಮನ ಪ್ರೇರಣೆ ಪಡೆಯಬೇಕು: ಮೋದಿ
Advertisement
ಇದೇ ವೇಳೆ, ಕೊರಿಯಾ ದೇಶದ ಜೊತೆಗಿನ ಬಾಂಧವ್ಯದ ದ್ಯೋತಕವಾಗಿ ಪ್ರಧಾನಿ ಕೋರಿಯಾ ಪಾರ್ಕ್ (Coria Park) ಉದ್ಘಾಟಿಸಿದ್ರು. ಶತಮಾನಗಳ ಹಿಂದೆ ಅಯೋಧ್ಯೆ ಯುವರಾಣಿ, ಕೊರಿಯಾ ಯುವರಾಜನನ್ನು ವರಿಸಿದ್ದರು. ಅಂದಹಾಗೇ, ದೇಗುಲಗಳನ್ನು ಸಿಂಗರಿಸಲು 2,500 ಟನ್ ಹೂಗಳನ್ನು ಬಳಸಲಾಗಿದೆ. 22 ಸಾವಿರ ಸ್ವಯಂ ಸೇವಕರು ದಾಖಲೆಯ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.
2021 ರಲ್ಲಿ ಅಯೋಧ್ಯೆ ಆಡಳಿತವು ದೀಪೋತ್ಸವದಲ್ಲಿ 9,41,551 ದೀಪ ಬೆಳಗಿಸುವ ಮೂಲಕ ವಿಶ್ವದಾಖಲೆ ಮಾಡಿತ್ತು. ಆದರೆ ಉಜ್ಜಯಿನಿ ದೇವಸ್ಥಾನದಲ್ಲಿ ಮಹಾಶಿವರಾತ್ರಿಯಂದು 11,71,078 ದೀಪಗಳನ್ನು ಬೆಳಗಿಸಿ ಈ ದಾಖಲೆ ಮುರಿಯಲಾಗಿತ್ತು. ಇದೀಗ 18 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಅಯೋಧ್ಯೆ ಮತ್ತೊಂದು ಗಿನ್ನಿಸ್ ದಾಖಲೆ ಮಾಡಿದೆ.