ಬೆಂಗಳೂರು: ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯರೇ ಆಕ್ರೋಶಗೊಂಡು, ತರಾಟಗೆ ತೆಗೆದುಕೊಂಡ ಘಟನೆ ಇಂದು ವಿಧಾನ ಪರಿಷತ್‌ನಲ್ಲಿ (Karnataka Legislative Assembly Session) ನಡೆಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸದಸ್ಯ ಸಂಕನೂರು, ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B.C.Nagesh) ಅವರು ಆರ್ಥಿಕ ಇಲಾಖೆ ಕಡೆ ಬೊಟ್ಟು ಮಾಡಿ ತೋರಿಸಿದರು. ಇದನ್ನೂ ಓದಿ: ಅಕ್ಟೋಬರ್ ಅಂತ್ಯಕ್ಕೆ ರಾಜ್ಯದಲ್ಲಿ ನಮ್ಮ ಕ್ಲಿನಿಕ್ ಸಂಪೂರ್ಣ ಪ್ರಾರಂಭ: ಸುಧಾಕರ್
Advertisement
Advertisement
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ (Ayanur Manjunath), ಸಚಿವರ ವಿರುದ್ದ ಕಿಡಿಕಾರಿದರು. ಎಲ್ಲಾ ಪ್ರಶ್ನೆಗೂ ಆರ್ಥಿಕ ಇಲಾಖೆ ಅನುಮತಿ ಬೇಕು ಅನ್ನೋದು ಯಾಕೆ? ಹಾಗಾದ್ರೆ ಸಚಿವರು ಯಾಕೆ ಕೆಲಸ ಮಾಡಬೇಕು. ಮತ್ತೆ ಸಚಿವರು ಹೀಗೆ ಬೇಜವಾಬ್ದಾರಿ ಉತ್ತರ ಕೊಡಬಾರದು ಅಂತ ಕಿಡಿಕಾರಿದರು.
Advertisement
ಯಾವುದೇ ಇಲಾಖೆಗೆ ಅರ್ಥಿಕ ಇಲಾಖೆ ಬಳಿ ಹಣ ಪಡೆಯೋದು ನಿಮ್ಮ ಕರ್ತವ್ಯ. ಅದು ಬಿಟ್ಟು ಇಲಾಖೆ ಮೇಲೆ ಬೊಟ್ಟು ತೋರಿಸಿದ್ರೆ ಹೇಗೆ? ಇದು ಸರಿಯಾದ ಉತ್ತರ ಅಲ್ಲ. ಇನ್ಯಾವತ್ತೂ ಆರ್ಥಿಕ ಇಲಾಖೆ ಅನುಮತಿ ಅಂತ ಹೇಳಬಾರದು. ಈ ಬಗ್ಗೆ ಸಚಿವರು ಸರಿಯಾಗಿ ಅರ್ಥ ಮಾಡಿಕೊಂಡು ಉತ್ತರ ಕೊಡಬೇಕು ಎಂದು ಸಚಿವರ ಮೇಲೆ ಗರಂ ಆದರು. ಇದನ್ನೂ ಓದಿ: ಡಿಸೆಂಬರ್ ವೇಳೆಗೆ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ: ಬಿ.ಸಿ.ನಾಗೇಶ್
Advertisement
ಸಂಕನೂರು ಪ್ರಶ್ನೆಗೂ ಮುನ್ನ ಆರೋಗ್ಯ ಸಚಿವರಿಗೆ ಆಯನೂರು ಕೇಳಿದಾಗಲೂ, ಆರ್ಥಿಕ ಇಲಾಖೆ ಜೊತೆ ಚರ್ಚೆ ಆಗಬೇಕು ಎಂದು ಸುಧಾಕರ್ (Dr. K.Shudhakar) ಹೇಳಿದ್ದರು. ಈ ಹಿನ್ನಲೆಯಲ್ಲಿ ಸಿಟ್ಟಾಗಿ ಸಚಿವರ ಮೇಲೆ ಅಸಮಾಧಾನ ಹೊರ ಹಾಕಿದರು.