Connect with us

Karnataka

ಬಿಎಸ್‍ವೈ ಹೋರಿ, ರಾಘವೇಂದ್ರ ಕರು- ಆಯನೂರು ಮಂಜುನಾಥ್

Published

on

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋರಿ, ಸಂಸದ ಬಿ.ವೈ.ರಾಘವೇಂದ್ರ ಕರು ಇದ್ದಂತೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೋಲಿಸಿದ್ದಾರೆ.

ನಗರದಲ್ಲಿ ನೂತನ ರೈಲು ಚಾಲನೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಎಸ್‍ವೈ ಹೋರಿ, ರಾಘವೇಂದ್ರ ಕರು ಇದ್ದಂತೆ. ಜಿಲ್ಲೆಯಲ್ಲಿ ಇಬ್ಬರೂ ಉತ್ತಮ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪನವರನ್ನು ನೆಮ್ಮದಿಯಾಗಿ ಆಡಳಿತ ಮಾಡಲು ಬಿಟ್ಟರೆ ಶಿವಮೊಗ್ಗ ರಾಜ್ಯದಲ್ಲೇ ನಂಬರ್ ಒನ್ ಅಭಿವೃದ್ಧಿ ಜಿಲ್ಲೆಯಾಗಲಿದೆ. ಮಾತ್ರವಲ್ಲದೆ, ರಾಜ್ಯದ ಚಿತ್ರಣವನ್ನೇ ಬದಲಾವಣೆ ಮಾಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ರಾಘವೇಂದ್ರ ಸಂಸದರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಶಾಶ್ವತ ಸಂಸದರಾಗಿ ಇರಬೇಕು. ಏಕೆಂದರೆ ಈ ರೈಲು ಓಡುತ್ತಿವೆ, ಮುಂದೆ ವಿಮಾನ ಹಾರುತ್ತದೆ. ಅಲ್ಲದೆ ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್ ಬರಬಾರದು. ಏಕೆಂದರೆ ಮುಂದಿನ ಸಿಎಂ ನಾನಾಗಬೇಕು ಎಂದುಕೊಂಡಿದ್ದೇನೆ. ಹೀಗಾಗಿ ರಾಘವೇಂದ್ರ ದೆಹಲಿಗೆ ಹೋಗಲಿ ಎಂದು ನಗೆ ಚಟಾಕಿ ಹಾರಿಸಿದರು.

Click to comment

Leave a Reply

Your email address will not be published. Required fields are marked *