ಬಳ್ಳಾರಿ: ಎಕ್ಸೆಲ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾ ಪಲ್ಟಿಯಾಗಿ ಯುವಕನೋರ್ವ ಮೃತ ಪಟ್ಟರುವ ಘಟನೆ ಕಂಪ್ಲಿಯ (Kampli) ತುಂಗಭದ್ರಾ ಸೇತುವೆ (Tungabhadra Bridge) ಮೇಲೆ ನಡೆದಿದೆ.
ಕಂಪ್ಲಿಯ ಎನ್.ಆಸ್ಲಾಂ(24) ಮೃತಪಟ್ಟಿರುವ ಯುವಕ. ಗಂಗಾವತಿಯಿಂದ ಕಂಪ್ಲಿಗೆ ತುಂಗಭದ್ರಾ ನದಿ ಸೇತುವೆ ಮೇಲೆ ಬರುತ್ತಿದ್ದಾಗ ರಿಕ್ಷಾದ ಎಕ್ಸೆಲ್ ತುಂಡಾಗಿದೆ. ಪರಿಣಾಮ ರಿಕ್ಷಾ ನಿಯಂತ್ರಣ ತಪ್ಪಿ ನೆಲಕ್ಕೆ ವಾಲಿದ್ದರಿಂದ ಪ್ರಯಾಣಿಕರು ಕೆಳಗೆ ಬಿದ್ದು ಗಾಯಗೊಂಡಿದ್ದರು. ಇದನ್ನೂ ಓದಿ: ಯಲ್ಲಾಪುರ ಅಪಘಾತ| ಸಾವಿನ ಸಂಖ್ಯೆ 10ಕ್ಕೆ ಏರಿಕೆ – ಮೃತರು ಯಾರು? ವಯಸ್ಸು ಎಷ್ಟು?
ಎನ್.ಆಸ್ಲಾಂ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಂಗಾವತಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಆಮೀನಾಬೀ ಎನ್ನುವ ವೃದ್ಧೆಯ ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು ಬಳ್ಳಾರಿಯ ವಿಮ್ಸ್ ಗೆ ದಾಖಲಿಸಲಾಗಿದೆ.