ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟವು ಬಹುಮತದೊಂದಿಗೆ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ.
ಆಕ್ಸಿಸ್ ಮೈ ಇಂಡಿಯಾ
ಮಹಾಯುತಿ 178-200, ಎಂವಿಎ 82-102, ವಿಬಿಎ 0, ಇತರೆ 6-12
ಟುಡೇಸ್ ಚಾಣಕ್ಯ
ಬಿಜೆಪಿ+ 175 (11 ಪ್ಲಸ್ or ಮೈನಸ್), ಕಾಂಗ್ರೆಸ್+ 100 (11 ಪ್ಲಸ್ or ಮೈನಸ್), ಇತರೆ 13 (5 ಪ್ಲಸ್ or ಮೈನಸ್)
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಬಹುಮತಕ್ಕೆ 145 ಸ್ಥಾನಗಳು ಬೇಕು. 2019 ರ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆದ್ದಿತ್ತು. ಅವಿಭಜಿತ ಶಿವಸೇನೆ 62, ಕಾಂಗ್ರೆಸ್ 39 ಮತ್ತು ಎನ್‌ಸಿಪಿ 50 ಸ್ಥಾನಗಳನ್ನು ಗೆದ್ದಿದ್ದವು. ಆಗ ಶಿವಸೇನೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಸೇರಿಕೊಂಡು ಸರ್ಕಾರ ರಚಿಸಿತ್ತು. ಬಳಿಕ ಶಿವಸೇನೆ ವಿಭಜನೆಗೊಂಡು (ಉದ್ಧವ್ ಠಾಕ್ರೆ ಬಣ ಮತ್ತು ಏಕನಾಥ್ ಶಿಂಧೆ ಬಣ) ಶಿಂಧೆ ಬಣ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಿತ್ತು.