– ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಐತಿಹಾಸಿಕ ಸಾಧನೆ
ನವದೆಹಲಿ: ‘ಆಕ್ಸಿಯಂ-4’ (Axiom 4) ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ನ (SpaceX) ‘ಫಾಲ್ಕನ್-9’ ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿತು.
ಇಂದು ಮಧ್ಯಾಹ್ನ 12:03ರ ಸುಮಾರಿಗೆ ಆಕ್ಸಿಯಂ-4 ನೌಕೆ ಯಶಸ್ವಿಯಾಗಿ ಉಡಾವಣೆ ಆಯಿತು. ಅಮೆರಿಕದ ಕಮಾಂಡರ್ ಪೆಗ್ಗಿ ವಿಟ್ಸನ್ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ. ಭಾರತದ IAF ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮಿಷನ್ ಪೈಲಟ್ ಆಗಿ ಮತ್ತು ಹಂಗೇರಿಯನ್ ಗಗನಯಾತ್ರಿ ಟಿಬೋರ್ ಕಾಪು ಮತ್ತು ಪೋಲೆಂಡ್ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮಿಷನ್ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಇಂದು ಮಧ್ಯಾಹ್ನ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ
Nothing like a liftoff 🚀@Axiom_Space‘s #Ax4 mission, riding atop a @SpaceX Falcon 9 rocket, launched from @NASAKennedy at 2:31am ET (0631 UTC). pic.twitter.com/RuvVZ9shT6
— NASA (@NASA) June 25, 2025
ಈ ಐತಿಹಾಸಿಕ ಕ್ಷಣಕ್ಕೆ ಭಾರತೀಯರು ಸೇರಿದಂತೆ ಕೋಟ್ಯಂತರ ಮಂದಿ ಸಾಕ್ಷಿಯಾದರು. ಶುಭಾಂಶು ಶುಕ್ಲಾ ಅವರ ತಂದೆ-ತಾಯಿ ಕೂಡ ಪುತ್ರನಿಗೆ ಶುಭ ಹಾರೈಸಿದರು. ನೌಕೆ ಯಶಸ್ವಿಯಾಗಿ ಉಡಾವಣೆ ಆಗುತ್ತಿದ್ದಂತೆ ಖುಷಿ ವ್ಯಕ್ತಪಡಿಸಿದರು.
ಆಕ್ಸಿಯಮ್ -4 ಗಗನಯಾತ್ರಿಗಳು ಸುಮಾರು 28 ಗಂಟೆಗಳ ಕಕ್ಷೆಯ ಪ್ರಯಾಣದ ನಂತರ ನಾಳೆ ಸಂಜೆ 4:30 ರ ಸುಮಾರಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಲಿದ್ದಾರೆ.
Spacecraft separation confirmed 🚀
Flying free in their @SpaceX Dragon spacecraft, the crew of #Ax4 are one step closer on their journey to the @Space_Station. pic.twitter.com/T2tQVcVyhd
— NASA (@NASA) June 25, 2025
ಭಾರತೀಯ ವಾಯುಪಡೆಯ ಪೈಲಟ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಬಾಹ್ಯಾಕಾಶಕ್ಕೆ ಹಾರಿದ ಫಾಲ್ಕನ್ 9 ರಾಕೆಟ್ನಲ್ಲಿ ಸ್ಪೇಸ್ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿದ್ದಾರೆ. 1969 ರಲ್ಲಿ ನೀಲ್ ಆರ್ಮ್ಸ್ಟ್ರಾಂಗ್ ಅಪೋಲೋ 11 ರಲ್ಲಿ ಚಂದ್ರನತ್ತ ಹಾರಿದ ಅದೇ ಲಾಂಚ್ಪ್ಯಾಡ್ ಇದಾಗಿದೆ. ಇದನ್ನೂ ಓದಿ: ಯಾವ ಭಾರತೀಯನು ಎಂದಿಗೂ ಮರೆಯುವುದಿಲ್ಲ: ತುರ್ತು ಪರಿಸ್ಥಿತಿ ಕರಾಳತೆ ನೆನೆದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
1984 ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶ ಪ್ರಯಾಣ ಮಾಡಿದ ನಾಲ್ಕು ದಶಕಗಳ ನಂತರ, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿರುವ ಎರಡನೇ ಭಾರತೀಯ ಗಗನಯಾತ್ರಿ.
ಹವಾಮಾನ ಮತ್ತು ತಾಂತ್ರಿಕ ದೋಷಗಳಿಂದಾಗಿ ಆಕ್ಸಿಯಮ್ -4 ಉಡಾವಣೆಯು ಹಲವು ಬಾರಿ ವಿಳಂಬವಾಗಿತ್ತು. ಕೊನೆಗೆ ಆರನೇಯ ಅಂತಿಮ ಪ್ರಯತ್ನದ ಭಾಗವಾಗಿ ಜೂ.25ಕ್ಕೆ ಉಡಾವಣೆ ನಾಸಾ ಉಡಾವಣೆ ದಿನಾಂಕ ಘೋಷಿಸಿತ್ತು.