ಮುಂಬೈ: ಭಾರತ-ಶ್ರೀಲಂಕಾ (INDvsSL) ನಡುವಿನ ಟಿ20 ಸರಣಿಯ 2ನೇ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸಿದ ಟೀಂ ಇಂಡಿಯಾ (Team India) ಆಟಗಾರ ಅಕ್ಷರ್ ಪಟೇಲ್ (Axar Patel), ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರ ದಾಖಲೆಯನ್ನು ಸರಿಗಟ್ಟಿದ್ದು, ಹೊಸ ದಾಖಲೆ ನಿರ್ಮಿಸಿದ್ದಾರೆ.
FIFTY for @akshar2026 – his first in T20Is ????????
A 20-ball half-century ⚡️ ⚡️
Follow the match ▶️ https://t.co/Fs33WcZ9ag #TeamIndia | #INDvSL pic.twitter.com/Pgiqm0SUe3
— BCCI (@BCCI) January 5, 2023
Advertisement
ಹೌದು. ಶ್ರೀಲಂಕಾ (SriLanka) ವಿರುದ್ಧದ 2ನೇ ಪಂದ್ಯದಲ್ಲಿ 209.67 ಸ್ಟ್ರೈಕ್‌ರೇಟ್ ನಲ್ಲಿ ಬ್ಯಾಟ್ ಬೀಸಿದ ಅಕ್ಷರ್ ಪಟೇಲ್ 20 ಎಸೆತಗಳಲ್ಲಿ ಸ್ಫೋಟಕ ಅರ್ಧ ಶತಕ ಸಿಡಿಸಿದ್ದಾರೆ. ಇದರಲ್ಲಿ 6 ಸಿಕ್ಸರ್, 2 ಬೌಂಡರಿಗಳು ಸೇರಿವೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ (T20I Cricket) 7ನೇ ಕ್ರಮಾಂಕದಲ್ಲಿ ಸ್ಫೋಟಕ ಅರ್ಧ ಶತಕ ಸಿಡಿಸಿ, ರವೀಂದ್ರ ಜಡೇಜಾ ಅವರ ದಾಖಲೆಯನ್ನ ಮುರಿದಿದ್ದಾರೆ. ರವೀಂದ್ರ ಜಡೇಜಾ 2020ರಲ್ಲಿ 7ನೇ ಕ್ರಮಾಂಕದಲ್ಲಿ ಬಂದು 44 ರನ್ ಸಿಡಿಸಿದ್ದರು.
Advertisement
Advertisement
ಇಷ್ಟೇ ಅಲ್ಲದೇ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಭಾರತದ 5ನೇ ಆಟಗಾರ ಎನ್ನಿಸಿಕೊಂಡಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) 2007 T20 ವಿಶ್ವಕಪ್‌ನಲ್ಲಿ (ICC World) ಇಂಗ್ಲೆಂಡ್ (England) ವಿರುದ್ಧ ಕೇವಲ 12 ಎಸೆತಗಳಲ್ಲಿ 50 ರನ್ ಚಚ್ಚಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ ಆಟ – ಆರಂಭದಲ್ಲಿ ಹಿನ್ನಡೆಯಾದ್ರೂ ಹೋರಾಡಿ ಸೋತ ಭಾರತ
Advertisement
ಆ ನಂತರ ಕೆ.ಎಲ್.ರಾಹುಲ್ (KL Rahul) 18 ಎಸೆತಗಳಲ್ಲಿ, ಸೂರ್ಯಕುಮಾರ್ ಯಾದವ್ (Suryakumar Yadav) 18 ಎಸೆತಗಳಲ್ಲಿ ಹಾಗೂ ಗೌತಮ್ ಗಂಭೀರ್ 19 ಎಸೆತಗಳಲ್ಲಿ ಸ್ಫೋಟಕ 50 ರನ್ ಸಿಡಿಸಿದ್ದಾರೆ. ಇದೀಗ ಈ ಸಾಲಿನಲ್ಲಿ ಅಕ್ಷರ್ ಪಟೇಲ್ ಸಹ ಸ್ಥಾನ ಪಡೆದಿದ್ದಾರೆ. 20 ಎಸತೆಗಳಲ್ಲಿ 50 ರನ್ (6 ಸಿಕ್ಸರ್, 2 ಬೌಂಡರಿ) ಪೂರೈಸಿ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ನೋಬಾಲ್ ಎಸೆಯುವುದು ಅಪರಾಧ – ಅರ್ಶ್‍ದೀಪ್ ಸಿಂಗ್ ತಪ್ಪಿಗೆ ಚಾಟಿ ಬೀಸಿದ ಪಾಂಡ್ಯ
ಗುರುವಾರ ಭಾರತ ಶ್ರೀಲಂಕಾ ನಡುವಿನ ಟಿ20 ಸರಣಿಯ 2ನೇ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 207 ರನ್‌ಗಳ ಗುರಿ ಬೆನ್ನತ್ತಿದ ಭಾರತ 8 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಈ ಪಂದ್ಯದಲ್ಲಿ 20 ಎಸೆತಗಳಲ್ಲಿ 50 ರನ್ ಚಚ್ಚಿದ ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 65 ರನ್ ಗಳಿಸಿ ಔಟಾದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k