ನವದೆಹಲಿ: ಬಜೆಟ್‌ನಲ್ಲಿ (Union Budget 2024) ವಿರೋಧ ಪಕ್ಷಗಳ ಆಡಳಿತ ರಾಜ್ಯಗಳಿಗೆ ತಾರತಮ್ಯ ಮಾಡಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಇಂಡಿಯಾ ಒಕ್ಕೂಟದ ಪಕ್ಷಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯೆಯಾಗಿ ದೇಶಾದ್ಯಂತ ಸಭೆ ನಡೆಸಿ ಬಜೆಟ್ ಮತ್ತು ಜನಸಾಮಾನ್ಯರಿಗೆ ಅದರ ಲಾಭಗಳನ್ನು ಮನವರಿಕೆ ಮಾಡಲು ಬಿಜೆಪಿ (BJP) ನಿರ್ಧರಿಸಿದೆ.
ಸಂಸತ್ ಅಧಿವೇಶನದ ನಡುವೆ ಶನಿವಾರ ಮತ್ತು ಭಾನುವಾರ ಈ ಜಾಗೃತಿ ಸಭೆಗಳನ್ನು ನಡೆಸಲು ಬಿಜೆಪಿ ನಿರ್ಧರಿಸಿದೆ. ಕೇಂದ್ರ ಸಚಿವರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ವಿವಿಧ ಪ್ರಮುಖ ಪ್ರದೇಶಗಳಲ್ಲಿ ಸಭೆ ನಡೆಸಿ ಬಜೆಟ್ ಬಗ್ಗೆ ಜನರೊಂದಿಗೆ ಚರ್ಚಿಸಲಿದ್ದಾರೆ. ಸಂಸದರು ಆಯಾ ಕ್ಷೇತ್ರಗಳಲ್ಲಿ ಸಭೆ ನಡೆಸಲು ಸೂಚಿಸಲಾಗಿದೆ. ಇದನ್ನೂ ಓದಿ: ರಾಯಧನ ವಿಚಾರದಲ್ಲಿ ರಾಜ್ಯಗಳಿಗೆ ಬಹುದೊಡ್ಡ ಜಯ – ಸುಪ್ರೀಂ ಕೋರ್ಟ್ ಹೇಳಿದ್ದೇನು?
Advertisement
Advertisement
ಚಿಂತಕರ ಸಭೆಗಳನ್ನು ಆಯೋಜಿಸಲಾಗುವುದು, ಇದರಲ್ಲಿ PHD ಚೇಂಬರ್ ಆಫ್ ಕಾಮರ್ಸ್‌ನ ಜನರನ್ನು ಆಹ್ವಾನಿಸಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ನಿರ್ದೇಶನದಂತೆ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ. ಕಾರ್ಯಕ್ರಮಗಳು ಬಡವರು, ರೈತರು, ಎಸ್‌ಸಿ-ಎಸ್‌ಟಿಗಳು ಮತ್ತು ಎಂಎಸ್‌ಎಂಇಗಳಲ್ಲಿ ಉದ್ಯೋಗದಲ್ಲಿರುವವರಿಗೆ ಬಜೆಟ್‌ನ ಪ್ರಯೋಜನಗಳನ್ನು ಎತ್ತಿ ತೋರಿಸಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.
Advertisement
Advertisement
ಇಷ್ಟೇ ಅಲ್ಲದೇ ಪಕ್ಷದ ರಾಜ್ಯ ಘಟಕಗಳಿಗೆ ಪದಾಧಿಕಾರಿಯನ್ನು ನೇಮಿಸಲು ಮತ್ತು ಪ್ರಚಾರ ಪೂರ್ಣಗೊಂಡ ನಂತರ ವರದಿಯನ್ನು ಸಲ್ಲಿಸಲು ಹೇಳಿದೆ. ತಮ್ಮ ವೈಯಕ್ತಿಕ ಮತ್ತು ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬಜೆಟ್‌ನ ವಿವಿಧ ಅಂಶಗಳನ್ನು ಹೈಲೈಟ್ ಮಾಡಲು ನಾಯಕರನ್ನು ಸೂಚಿಸಿದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಸಿಎಂಗಳಿಗೆ ಸುದ್ದಿಗೋಷ್ಠಿ ನಡೆಸಲು ತಿಳಿಸಿದೆ. ಇದನ್ನೂ ಓದಿ: ಜೈಲಿಂದ ಹೊರಬಂದ ಬಳಿಕ ಹೆಚ್‌ಡಿಕೆ ಭೇಟಿಯಾದ ದೇವರಾಜೇಗೌಡ – ಪೆನ್‌ಡ್ರೈವ್ ಕೇಸ್ ಬಗ್ಗೆ ಮಾತುಕತೆ