ಮಂಡ್ಯ: ವಿಶ್ವಪ್ರಸಿದ್ಧ ಕೆಆರ್‍ಎಸ್ ಅಣೆಕಟ್ಟೆಯಲ್ಲಿ ನಡೆದಿದ್ದ ಪುನಶ್ಚೇತನ ಕಾಮಗಾರಿಗೆ ಇದೀಗ ಉತ್ಕೃಷ್ಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
84 ವರ್ಷ ಹಳೆಯ 2.6 ಕಿ.ಮೀ ಉದ್ದದ ಕಟ್ಟೆಯಲ್ಲಿ ನೀರಿನ ಸೆಳೆತದಿಂದಾಗಿ ಗಾರೆಗೆ ಬಳಸಿದ್ದ ಮಣ್ಣು ಕಸಿದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಭದ್ರತೆ ದೃಷ್ಟಿಯಿಂದ ತಜ್ಞರ ಸಲಹೆ ಮೇರೆಗೆ ಪುನಶ್ಚೇತನ ಕಾಮಗಾರಿ ಮಾಡಲಾಯಿತು.
Advertisement
Advertisement
ವಿಶ್ವಬ್ಯಾಂಕ್ ನಿಂದ 36.6 ಕೋಟಿ ರೂಪಾಯಿ ಸಾಲ ಪಡೆದು 2016ರ ಜುಲೈನಲ್ಲಿ ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಯಿತು. 2017ರ ಮಾರ್ಚ್ ನಲ್ಲಿ ಕಾಮಗಾರಿ ಪೂರ್ಣಗೊಳಿಸಲಾಯಿತು. ಮಧ್ಯಪ್ರದೇಶ ಮೂಲದ ಕಂಪನಿಯೊಂದು ಈ ಕಾಮಗಾರಿಗೆ ಪುನಶ್ಚೇತನದ ಗುತ್ತಿಗೆ ಪಡೆದಿತ್ತು. ಕಾಮಗಾರಿ ನಡೆಯುವ ವೇಳೆ ಮತ್ತು ನಂತರ ವಿಶ್ವಬ್ಯಾಂಕ್, ಡಿಆರ್‍ಐಪಿ ಅಧಿಕಾರಿಗಳು ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿದ್ರು. ಕಾಮಗಾರಿಯ ಗುಣಮಟ್ಟ ಉತ್ತಮವಾಗಿ ನಡೆದಿರೋ ಹಿನ್ನೆಲೆಯಲ್ಲಿ “ಉತ್ಕೃಷ್ಟ ಪುನಶ್ಚೇತನ” ಪ್ರಶಸ್ತಿ ನೀಡಲಾಗಿದೆ.
Advertisement
ಮೇ 30ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ಪ್ರಭಾಕರ್, ರಾಜ್ಯ ಅಣೆಕಟ್ಟೆ ಪುನಶ್ಚೇತನ ಕಾಮಗಾರಿ ನಿದೇರ್ಶಕ ಮಾಧವ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.
Advertisement