LatestLeading NewsMain PostNational

ಆಧಾರ್ ಹಂಚಿಕೊಳ್ಳುವಾಗ ಮಾಸ್ಕ್‌ಡ್ ಆಧಾರ್ ಬಳಸಿ: ಕೇಂದ್ರದ ಸಲಹೆ

ನವದೆಹಲಿ: ಆಧಾರ್ ಕಾರ್ಡ್ ದುರುಪಯೋಗವನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ನಾಗರಿಕರಿಗೆ ಸಂಪೂರ್ಣ ಮಾಹಿತಿ ಇರುವ ಆಧಾರ್ ಕಾರ್ಡ್‌ಗಳನ್ನು ಹಂಚಿಕೊಳ್ಳುವ ಬದಲು ಮಾಸ್ಕ್‌ಡ್ ಆಧಾರ್ ಕಾರ್ಡ್‌ಗಳನ್ನು ಹಂಚಿಕೊಳ್ಳಲು ಸಲಹೆ ನೀಡಿದೆ.

ನಿಮ್ಮ ಆಧಾರ್ ಕಾರ್ಡ್‌ನ ಪ್ರತಿಗಳನ್ನು ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಡಿ. ಏಕೆಂದರೆ ಅದು ದುರುಪಯೋಗವಾಗುವ ಸಾಧ್ಯತೆ ಇದೆ. ಇದಕ್ಕೆ ಪರ್ಯಾಯವಾಗಿ ನಿಮ್ಮ ಆಧಾರ್ ಕಾರ್ಡ್‌ನ ಕೊನೆಯ 4 ಅಂಕೆಗಳನ್ನು ಮಾತ್ರವೇ ಪ್ರದರ್ಶಿಸುವ ಮಾಸ್ಕ್‌ಡ್ ಆಧಾರ್ ಅನ್ನು ಮಾತ್ರವೇ ಬಳಸಿ ಎಂದು ಕೇಂದ್ರ ಸರ್ಕಾರ ಭಾನುವಾರ ಸಲಹೆ ನೀಡಿದೆ. ಇದನ್ನೂ ಓದಿ: ಟೈಟಾನ್ಸ್ Vs ರಾಯಲ್ಸ್ ಫೈನಲ್ – ಯಾರಾಗ್ತಾರೆ ಚಾಂಪಿಯನ್?

ಕೇಂದ್ರ ಸರ್ಕಾರದ ಸಲಹೆಯೊಂದಿಗೆ, ಪರವಾನಗಿ ಪಡೆಯದ ಖಾಸಗಿ ಸಂಸ್ಥೆಗಳು, ಚಲನಚಿತ್ರ ಮಂದಿರಗಳು ಹಾಗೂ ಹೋಟೆಲ್‌ಗಳಲ್ಲಿ ಆಧಾರ್ ಕಾರ್ಡ್ ಪ್ರತಿಗಳನ್ನು ಸಂಗ್ರಹಿಸಲು ಹಾಗೂ ಇರಿಸಿಕೊಳ್ಳಲು ಅನುಮತಿ ಇಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಐಎಐ)ದಿಂದ ಪರವಾನಗಿ ಪಡೆದ ಸಂಸ್ಥೆಗಳು ಮಾತ್ರವೇ ಜನರ ಗುರುತನ್ನು ತಿಳಿಯಲು ಆಧಾರ್ ಬಳಸಬಹುದು. ಜನರು ತಮ್ಮ ಆಧಾರ್ ಕಾರ್ಡ್ ಪ್ರತಿಯನ್ನು ಹಂಚಿಕೊಳ್ಳುವ ಮೊದಲು ಆ ಸಂಸ್ಥೆ ಯುಐಡಿಐಎಐ ನಿಂದ ಪರವಾನಗಿ ಪಡೆದಿದೆಯೇ ಎಂಬುದನ್ನು ಪರಿಶೀಲಿಸಲು ಸರ್ಕಾರ ನಾಗರಿಕರಲ್ಲಿ ಕೇಳಿಕೊಂಡಿದೆ. ಇದನ್ನೂ ಓದಿ: ವಿಶ್ವದಲ್ಲೇ ಅತೀ ವೇಗದ ಚಾರ್ಜಿಂಗ್ ಬ್ಯಾಟರಿ – ಬೆಂಗಳೂರು ಸ್ಟಾರ್ಟ್ಅಪ್ ಸಂಶೋಧನೆ

ಜನರು ತಮ್ಮ ಆಧಾರ್ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು ಇಂಟರ್‌ನೆಟ್ ಕೆಫೆಗಳಲ್ಲಿ ಸಾರ್ವಜನಿಕ ಕಂಪ್ಯೂಟರ್‌ಗಳನ್ನು ಬಳಸದಂತೆ ಎಚ್ಚರಿಸಿದೆ. ಒಂದು ವೇಳೆ ಬಳಸಿದರೂ ಡೌನ್‌ಲೋಡ್ ಮಾಡಿದ ಎಲ್ಲಾ ಇ-ಆಧಾರ್ ಪ್ರತಿಗಳನ್ನು ಶಾಶ್ವತವಾಗಿ ಅಳಿಸಲು ಸೂಚನೆ ನೀಡಿದೆ.

Leave a Reply

Your email address will not be published.

Back to top button