ನವದೆಹಲಿ: ಉಕ್ರೇನ್‌ನಲ್ಲಿ (Ukraine) ಹೆಚ್ಚುತ್ತಿರುವ ಘರ್ಷಣೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ (India) ಸೋಮವಾರ ಉಕ್ರೇನ್‌ಗೆ ತೆರಳುವ ಹಾಗೂ ಉಕ್ರೇನ್‌ನಲ್ಲಿ ಇರುವ ತನ್ನ ನಾಗರಿಕರಿಗೆ (Citizens) ಅನಿವಾರ್ಯವಲ್ಲದ ಎಲ್ಲಾ ರೀತಿಯ ಪ್ರಯಾಣವನ್ನು ತಪ್ಪಿಸುವಂತೆ ಸಲಹೆ ನೀಡಿದೆ.
ಕೀವ್ (Kyiv) ಸೇರಿದಂತೆ ಉಕ್ರೇನ್‌ನ ಹಲವು ಪ್ರಮುಖ ನಗರಗಳಲ್ಲಿ ರಷ್ಯಾ (Russia) ಇಂದು ಭೀಕರವಾಗಿ ದಾಳಿ ನಡೆಸಿದೆ. ಇಂದು ಉಕ್ರೇನ್‌ನಾದ್ಯಂತ ನಡೆದ ದಾಳಿಗಳಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆ ಭಾರತ ತನ್ನ ನಾಗರಿಕರಿಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಕೇಳಿಕೊಂಡಿದೆ.
Advertisement
Advertisement
ಉಕ್ರೇನ್‌ನಲ್ಲಿ ಪ್ರಸ್ತುತ ಉಲ್ಬಣಗೊಳ್ಳುತ್ತಿರುವ ಹಗೆತನದ ದೃಷ್ಟಿಯಿಂದ, ಭಾರತೀಯ ಪ್ರಜೆಗಳು ಉಕ್ರೇನ್‌ಗೆ ಹಾಗೂ ಯುದ್ಧಪೀಡಿತ ದೇಶದೊಳಗೆ ಅನಿವಾರ್ಯವಲ್ಲದ ಎಲ್ಲಾ ರೀತಿಯ ಪ್ರಯಾಣವನ್ನು ತಪ್ಪಿಸಿ. ಉಕ್ರೇನ್ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ನೀಡಿರುವ ಸುರಕ್ಷತೆ ಮತ್ತು ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಂಘರ್ಷ ಉಲ್ಬಣ- ಕಳವಳ ವ್ಯಕ್ತಪಡಿಸಿದ ಭಾರತ
Advertisement
ಭಾರತೀಯ ಪ್ರಜೆಗಳು ಉಕ್ರೇನ್‌ನಲ್ಲಿ ತಮ್ಮ ಉಪಸ್ಥಿತಿಯ ಬಗ್ಗೆ ರಾಯಭಾರ ಕಚೇರಿಗೆ ತಿಳಿಸಲು ವಿನಂತಿಸಲಾಗಿದೆ. ಇದರಿಂದ ಅಗತ್ಯವಿರುವಲ್ಲಿ ರಾಯಭಾರ ಕಚೇರಿ ಅವರನ್ನು ತಲುಪಲು ಸಹಾಯವಾಗಲಿದೆ.
Advertisement
ಉಕ್ರೇನ್‌ನಲ್ಲಿ ಹೆಚ್ಚುತ್ತಿರುವ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಹಗೆತನವನ್ನು ಹೆಚ್ಚಿಸುವುದು ಯಾರ ಹಿತಾಸಕ್ತಿಯೂ ಅಲ್ಲ. ಪರಿಸ್ಥಿತಿಯನ್ನು ಸರಿಪಡಿಸುವ ಗುರಿ ಹೊಂದಿರುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೇಡಿಗೆ ಸೇಡು – ಇರಾನ್ ಡ್ರೋನ್ ಬಳಸಿ ರಷ್ಯಾ, ಉಕ್ರೇನ್ ಮೇಲೆ ದಾಳಿ