LatestMain PostNational

ಹಾರ್ನ್ ಹಾಕುವುದನ್ನು ಕಮ್ಮಿ ಮಾಡಿ – 32 ವರ್ಷಗಳಿಂದ ಸಂದೇಶ ಸಾರ್ತಿದ್ದಾರೆ ಸೈಲೆಂಟ್ ಕ್ರುಸೇಡರ್

ಕೋಲ್ಕತ್ತಾ: ನಮ್ಮಲ್ಲಿ ಟ್ರಾಫಿಕ್ ಇದ್ದಾಗ ಯಾರಿಗೆ ತಾನೇ ತಾಳ್ಮೆ ಇರುತ್ತೆ? ಅರ್ಜೆಂಟ್ ಇಲ್ಲ ಅಂದ್ರೂ ಹಾರ್ನ್ ಹಾಕಿ ಗದ್ದಲ ಮಾಡಿ ಇತರ ಪ್ರಯಾಣಿಕರಿಗೂ ಕಿರಿಕಿರಿ ಮಾಡುವ ಚಟ ನಮ್ಮಲ್ಲಿ ಹೆಚ್ಚಿನವರಿಗೆ ಇದೆ. ಇಲ್ಲೊಬ್ಬ ವ್ಯಕ್ತಿ ಹಾರ್ನ್ ಹಾಕುವುದನ್ನು ಕಡಿಮೆ ಮಾಡಿ ಎಂಬ ಸಂದೇಶದೊಂದಿಗೆ ಓಡಾಡುತ್ತಿದ್ದು ಗಮನ ಸೆಳೆದಿದ್ದಾರೆ.

ಅನವಶ್ಯಕ ಹಾರ್ನ್ ಮಾಡುವುದನ್ನು ನಿಲ್ಲಿಸಿ ಎಂಬ ಸಂದೇಶದೊಂದಿಗೆ ಓಡಾಡುತ್ತಿರುವ ಕೋಲ್ಕತ್ತಾದ ಉದ್ಯಮಿ ಕೈಲಾಶ್ ಮೆಹ್ತಾ ಕಳೆದ 32 ವರ್ಷಗಳಿಂದ ಸಂದೇಶವನ್ನು ಸಾರುತ್ತಿದ್ದಾರೆ. ಮೆಹ್ತಾ ತನ್ನನ್ನು ತಾನು ಸೈಲೆಂಟ್ ಕ್ರುಸೇಡರ್ ಎಂದು ಕರೆದಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಕೈಲಾಶ್ ಹಾರ್ನ್ ಮಾಡದೇ ಸ್ಕೂಟರ್ ಅನ್ನು ಓಡಿಸುತ್ತಿದು, ಹಾರ್ನ್ ಹಾಕುವುದನ್ನು ಕಡಿಮೆ ಮಾಡಿ ಎಂಬ ಪೋಸ್ಟರ್ ಕೂಡಾ ಬೆನ್ನಿಗೆ ಹಾಕಿಕೊಂಡು ಓಡಾಡುತ್ತಿದ್ದಾರೆ. ತಮ್ಮ ದ್ವಿಚಕ್ರ ವಾಹನವನ್ನು ನೋ ಹಾಂಕಿಂಗ್ ಟ್ಯಾಬ್ಲೋ ಆಗಿ ಪರಿವರ್ತಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭದ್ರತೆಗಾಗಿ 12 ಕೋಟಿಯ ದುಬಾರಿ ಕಾರು- ವಿಶೇಷತೆ ಏನು..?

ಹಾರ್ನ್ ಮಾಡುವುದರಿಂದ ಟ್ರಾಫಿಕ್ ಕಡಿಮೆಯಾಗುತ್ತದೆಯೇ? ಇಲ್ಲ. ನಿಯಮಗಳನ್ನು ಅನುಸರಿಸಿದರೆ ಟ್ರಾಫಿಕ್ ಅನ್ನು ಪರಿಹರಿಸಬಹುದು. ಹಾರ್ನ್ ಮಾಡಬೇಡಿ. ಆದರೆ ಬ್ರೇಕ್ ಹಾಕಿ ಎಂದು ಮೆಹ್ತಾ ಹೇಳುತ್ತಾರೆ.

ವಾಹನ ಚಾಲಕರು ಹಾರ್ನ್ ಮಾಡುವುದನ್ನು ಕಡಿಮೆ ಮಾಡಿದರೆ ನಗರ ಹೆಚ್ಚು ನಾಗರಿಕ ಹಾಗೂ ವಾಸಯೋಗ್ಯವಾಗುತ್ತದೆ. ಅತಿಯಾದ ಹಾರ್ನ್ ಶಬ್ಧದಿಂದ ಜನರಲ್ಲಿ ಒತ್ತಡ ಹೆಚ್ಚುತ್ತದೆ. ಹೃದಯದ ಸಮಸ್ಯೆಗೂ ಕಾರಣವಾಗುತ್ತದೆ. ಹೀಗೆ ಹಾರ್ನ್ ಮಾಡುವುದರ ದುಷ್ಪರಿಣಾಮಗಳ ಬಗ್ಗೆ ನಾಗರಿಕರಿಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಇಂತಹ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಕಛೇರಿಯಲ್ಲಿ ಶೇ.50, ಮದುವೆಗೆ 20 ಜನ ಮಾತ್ರ ಅವಕಾಶ – ಹೊಸ ನಿಯಮ ಜಾರಿಗೊಳಿಸಿದ ದೆಹಲಿ ಸರ್ಕಾರ

ನಾನು ಅಮೆರಿಕಾದಲ್ಲಿ ವಾಸಮಾಡಿದ್ದೆ. ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ಚೀನಾಗೂ ಪ್ರಯಾಣಿಸಿ ಓಡಾಡಿದ್ದೇನೆ. ಅವರು ಅನಗತ್ಯ ಹಾರ್ನ್ ಮಾಡುವುದಿಲ್ಲ. ಅಂತಹ ದೇಶದವರಿಗೆ ಸಾಧ್ಯವಿದ್ದರೆ, ನಮ್ಮ ದೇಶದಲ್ಲಿ ಏಕೆ ಸಾಧ್ಯವಿಲ್ಲ ಎಂದು ಮೆಹ್ತಾ ಸವಾಲು ಹಾಕಿದ್ದಾರೆ.

Leave a Reply

Your email address will not be published.

Back to top button