ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆಯು ಸರಾಸರಿ ನೂರು ಇಂಚಿನ ಗಡಿ ದಾಟಿದ್ದು, ಇನ್ನೂ ಮುಂದುವರೆಯುತ್ತಿದೆ. ಜನವರಿಯಿಂದ ಸೆ.1ರ ತನಕ ಜಿಲ್ಲೆಯಲ್ಲಿ ಸರಾಸರಿ 102.28 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆಯ ಪ್ರಮಾಣ 51.97 ಇಂಚು ಹೆಚ್ಚಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಸರಾಸರಿ ಮಳೆ 50.31 ಇಂಚುಗಳಷ್ಟಾಗಿತ್ತು.
ಜಿಲ್ಲೆಯಲ್ಲಿ ಮಡಿಕೇರಿ (Madikeri) ತಾಲೂಕಿನಲ್ಲಿ ಇತರ ತಾಲೂಕುಗಳಿಗಿಂತ ಹೆಚ್ಚಿನ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ 147.21 ಇಂಚುಗಳಷ್ಟು ದಾಖಲೆಯ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ತಾಲೂಕಿನಲ್ಲಿ 86.93 ಇಂಚು ಮಳೆಯಾಗಿದ್ದು, ಈ ಬಾರಿ 60.27 ಇಂಚು ಹೆಚ್ಚಾಗಿದೆ.ಇದನ್ನೂ ಓದಿ: ನನ್ನ ಫ್ಯಾನ್ಸ್ ಯಾವತ್ತೂ ಕಳಂಕ ತರುವ ಕೆಲಸ ಮಾಡಲ್ಲ: ಅಭಿಮಾನಿಗಳ ಬಗ್ಗೆ ಕಿಚ್ಚನ ಅಕ್ಕರೆಯ ಮಾತು
Advertisement
Advertisement
ವಿರಾಜಪೇಟೆ (Virajpete) ತಾಲೂಕಿನಲ್ಲೂ ಪ್ರಸಕ್ತ ವರ್ಷ 54.74 ಇಂಚುಗಳಷ್ಟು ಅಧಿಕ ಮಳೆಯಾಗಿದೆ. ಈ ತಾಲೂಕಿನಲ್ಲಿ ಕಳೆದ ವರ್ಷ ಜನವರಿಯಿಂದ ಈತನಕ 39.15 ಇಂಚು ಮಾತ್ರ ಮಳೆಯಾಗಿದ್ದರೆ, ಈ ಬಾರಿ 93.90 ಇಂಚು ಮಳೆ ಸುರಿದಿದೆ.
Advertisement
ಪೊನ್ನಂಪೇಟೆ (Ponnampete) ತಾಲೂಕಿನಲ್ಲಿ ಈ ವರ್ಷ 96.63 ಇಂಚು ಮಳೆಯಾಗಿದೆ. ಕಳೆದ ವರ್ಷ 41.40 ಇಂಚು ಮಳೆ ದಾಖಲಾಗಿದ್ದು, ಈ ಬಾರಿ 55.22 ಇಂಚು ಅಧಿಕ ಕಂಡುಬಂದಿದೆ.
Advertisement
ಸೋಮವಾರಪೇಟೆ (Somavarapete) ತಾಲೂಕಿನಲ್ಲೂ ಈ ಬಾರಿ ಹೆಚ್ಚಿನ ಮಳೆಯಾಗಿದೆ. ಈ ತಾಲೂಕಿನಲ್ಲಿ 2023ರಲ್ಲಿ ಜನವರಿಯಿಂದ 55.56 ಇಂಚು ಮಳೆಯಾಗಿತ್ತು. ಆದರೆ ಈ ಬಾರಿ 114.68 ಇಂಚು ದಾಖಲಾಗಿದ್ದು, ಕಳೆದ ವರ್ಷಕ್ಕಿಂತ 59.12 ಇಂಚು ಹೆಚ್ಚಾಗಿದೆ.
ಕುಶಾಲನಗರ (Kushalanagar) ತಾಲೂಕಿನಲ್ಲಿಯೂ ಈ ಬಾರಿ ಮಳೆ ಹೆಚ್ಚಾಗಿದೆ. ಕಳೆದ ವರ್ಷ 32.13 ಇಂಚು ಮಳೆಯಾಗಿದ್ದರೆ, ಈ ಬಾರಿ 61.76 ಇಂಚು ಸುರಿದಿದ್ದು, 29.63 ಇಂಚುಗಳಷ್ಟು ಅಧಿಕ ಪ್ರಮಾಣದಲ್ಲಿದೆ.ಇದನ್ನೂ ಓದಿ: ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದ್ವೆಯಾದ ತರುಣ್, ಸೋನಲ್
ವಿವಿಧ ಹೋಬಳಿಗಳು ಹಾಗೂ ಆಯಾ ಹೋಬಳಿಗಳ ಗ್ರಾಮಗಳಲ್ಲಿ ಮಳೆಯ ಪ್ರಮಾಣ ಈ ಬಾರಿ ಇನ್ನಷ್ಟು ಹೆಚ್ಚಾಗಿದೆ. ಅಧಿಕ ಮಳೆಯಿಂದಾಗಿ ಹಲವು ಅನಾಹುತಗಳು ಸಂಭವಿಸಿದೆ. ಕಾಫಿ ಬೆಳೆಯ ಮೇಲೂ ಮಳೆ ಈ ಬಾರಿ ವ್ಯತಿರಿಕ್ತ ಪರಿಣಾಮವನ್ನುಂಟುಮಾಡಿದೆ. ಇನ್ನೂ ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಎಡೆಬಿಡದೇ ಮಳೆ ಸುರಿಯುತ್ತಿದ್ದು. ಇದರಿಂದಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ.