ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ಶ್ರೀಮನ್ನಾರಾಯಣನಾಗಿ ತೆರೆಯ ಮೇಲೆ ಬರಲು ಸಿದ್ಧಗೊಂಡಿದ್ದಾರೆ. ಬಹುದಿನಗಳ ಬಳಿಕ ಫೇಸ್‍ಬುಕ್ ಲೈವ್ ಬಂದಿದ್ದ ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕುರಿತ ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು.
ಸದ್ಯ ಸಿನಿಮಾದ ಡಬ್ಬಿಂಗ್, ಬ್ಯಾಕ್‍ಗ್ರೌಂಡ್ ಮ್ಯೂಸಿಕ್, ಗ್ರಾಫಿಕ್ಸ್ ಕೆಲಸ ನಡೆಯುತ್ತಿದೆ. ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲಿಯೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ. ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಕೆಲಸ ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಒಂದೇ ಸಿನಿಮಾದ ಮೇಲೆ ಕೆಲಸ ಮಾಡುತ್ತಿದ್ದರಿಂದ ಅಭಿಮಾನಿಗಳು ಚಿತ್ರ ಯಾವಾಗ ರಿಲೀಸ್ ಎಂಬ ಪ್ರಶ್ನೆ ಕೇಳುತ್ತಿರುತ್ತಾರೆ. ನನಗೂ ನಿಮ್ಮೊಂದಿಗೆ ಕುಳಿತು ಸಿನಿಮಾ ನೋಡಬೇಕೆಂಬ ಆಸೆ ಇದೆ ಎಂದು ರಕ್ಷಿತ್ ಶೆಟ್ಟಿ ತಿಳಿಸಿದರು.
Advertisement
Advertisement
ಟ್ರೈಲರ್ ನೋಡಿದ ಮೇಲೆ ಅವನೇ ಶ್ರೀಮನ್ನಾರಾಯಣ ಸಿನಿಮಾದ ಬಗ್ಗೆ ಸ್ಪಷ್ಟತೆ ಸಿಗಲಿದೆ. ಉಳಿದವರು ಕಂಡಂತೆ ಸಿನಿಮಾದಂತೆ ಒಳ್ಳೆಯ ಕಥೆಯನ್ನು ಅವನೇ ಶ್ರೀಮನ್ನಾರಾಯಣ ಹೊಂದಿದೆ. ಚಿತ್ರ ಯಶಸ್ವಿಯಾಗಲಿದೆ ಎಂಬ ನಂಬಿಕೆಯೂ ನನಗಿದೆ. ಅವನೇ ಶ್ರೀಮನ್ನಾರಾಯಾಣ ಚಿತ್ರ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಹಾಗಾಗಿ ಎಲ್ಲ ಭಾಷೆಯ ವಿತರಕರೊಂದಿಗೆ ಮಾತನಾಡಿ ಟ್ರೈಲರ್ ರಿಲೀಸ್ ಮಾಡುತ್ತೇವೆ ಎಂದರು.
Advertisement
ಸಿನಿಮಾ ಬಿಡುಗಡೆಯ ದಿನಾಂಕ ನಿಗದಿಯಾದ ಕೂಡಲೇ ಎಲ್ಲ ಐದು ಭಾಷೆಗಳ ಟ್ರೈಲರ್, ಹಾಡುಗಳನ್ನು ಬಿಡುಗಡೆ ಮಾಡುತ್ತವೆ. ಸಿನಿಮಾ ಬಿಡುಗಡೆಯ 45 ದಿನ ಮೊದಲು ಟ್ರೈಲರ್ ನಿಮ್ಮ ಮುಂದೆ ಬರಲಿದೆ. ಟ್ರೈಲರ್ ನಿಮ್ಮಲ್ಲರಿಗೂ ಖಂಡಿತ ಇಷ್ಟವಾಗುತ್ತದೆ. ಪುಣ್ಯಕೋಟಿ ಮತ್ತು ಚಾರ್ಲಿ ಸಿನಿಮಾದ ಕೆಲಸ ಸಹ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಎರಡು ಸಿನಿಮಾಗಳ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
Advertisement
https://www.facebook.com/therakshitshetty/videos/349356869274878/