ಚೆನ್ನೈ: ಕಮರ್ಷಿಯಲ್ ವಾಹನ ಮಾರಾಟ ಇಳಿಕೆಯಾದ ಹಿನ್ನೆಲೆಯಲ್ಲಿ ಘನ ವಾಹನ ಉತ್ಪಾದಕ ಕಂಪನಿ ಅಶೋಕ್ ಲೇಲ್ಯಾಂಡ್ 13 ದಿನ ಉತ್ಪಾದನೆ ನಿಲ್ಲಿಸಿದೆ. ಅ.2 ರಿಂದ 15 ರವರೆಗೆ ವಾಹನ ಉತ್ಪಾದನೆಯನ್ನು ನಿಲ್ಲಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ಜುಲೈ ತಿಂಗಳಿನಿಂದ ಮಾರಾಟ ಗಣನೀಯವಾಗಿ ಇಳಿಕೆಯಾಗುತ್ತಿದ್ದು, 2018ರ ಸೆಪ್ಟೆಂಬರ್ ಗೆ ಹೋಲಿಸಿದರೆ ಶೇ.50 ರಷ್ಟು ಮಾರಾಟ ಇಳಿಕೆಯಾಗಿದೆ.
Advertisement
ದೇಶದ ವಿವಿಧ ಕಡೆ ಇರುವ ಘಟಕದಲ್ಲಿ ಅ.2 ರಿಂದ 15 ರವರೆಗೆ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಅಶೋಕ್ ಲೇಲ್ಯಾಂಡ್ ಕಂಪನಿ ನ್ಯಾಷನಲ್ ಸ್ಟಾಕ್ ಎಕ್ಸ್ ಚೆಂಜ್ (ಎನ್‍ಎಸ್‍ಇ) ಶುಕ್ರವಾರ ತಿಳಿಸಿದೆ
Advertisement
Advertisement
ಚೆನ್ನೈ ಕೇಂದ್ರ ಸ್ಥಳವನ್ನು ಹೊಂದಿರುವ ಅಶೋಕ್ ಲೇಲ್ಯಾಂಡ್ ಕಳೆದ 4 ತಿಂಗಳಿನಿಂದ ಉತ್ಪಾದನೆ ಕಡಿತ ಮಾಡಿದೆ. ಕಳೆದ ತಿಂಗಳು ಚೆನ್ನೈನ ಎನ್ನೋರ್, ಉತ್ತಾರಖಂಡದ ಪಂತ್ ನಗರ್, ತಮಿಳುನಾಡಿನ ಹೊಸೂರು, ರಾಜಸ್ಥಾನದ ಅಲ್ವಾರ್ ಮತ್ತು ಮಹಾರಾಷ್ಟ್ರದ ಭಂಡಾರ ಘಟಕದಲ್ಲಿ 7 ದಿನಗಳ ಕಾಲ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು.
Advertisement
ಸೆಪ್ಟೆಂಬರ್ ತಿಂಗಳಿನಲ್ಲಿ ಮಾಧ್ಯಮ ಮತ್ತು ಭಾರೀ ವಾಹನಗಳ ಮಾರಾಟ ಇಳಿಕೆಯಾಗಿದ್ದು, ಟಾಟಾ ಮೋಟಾರ್ಸ್ ಶೇ.47 ರಷ್ಟು ಇಳಿಕೆ ಕಂಡಿದ್ದರೆ ಅಶೋಕ್ ಲೇಲ್ಯಾಂಡ್ ಶೇ.55 ರಷ್ಟು ಇಳಿಕೆ ಕಂಡಿದೆ.