ಮುಂಬೈ: ಅನೇಕ ದಿನಗಳಿಂದ ಮುಂಬೈ ನಗರಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಚಾಲಕನೊಬ್ಬ ಆಟೋವನ್ನು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲೇ ಓಡಿಸಿಕೊಂಡು ಹೋಗಿರುವ ಘಟನೆ ಶಹಾದ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಆಟೋ ರೈಲ್ವೆ ಪ್ಲಾಟ್‌ಫಾರ್ಮ್‌ಗೆ ಬಂದ ದೃಶ್ಯವನ್ನು ಕೆಲವು ಪ್ರಯಾಣಿಕರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Advertisement
ಚಾಲಕ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಆಟೋವನ್ನು ಓಡಿಸಿಕೊಂಡು ಬಂದಿದ್ದಾನೆ. ವಿಡಿಯೋವನ್ನು ಜೂಮ್ ಮಾಡಿ ನೋಡಿದಾಗ ಅದರಲ್ಲಿ ಪ್ರಯಾಣಿಕರಿರುವುದನ್ನು ಕಾಣಬಹುದಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಇತರೆ ಪ್ರಯಾಣಿಕರು ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
Advertisement
#MahalaxmiExpress rescue operation: Passengers being brought to Badlapur. 500 people have been rescued so far. #Maharashtra pic.twitter.com/cxU2jBnY9N
— ANI (@ANI) July 27, 2019
Advertisement
ಇದನ್ನು ವಿಡಿಯೋ ಮಾಡಿದವರು, “ಬಹುಶಃ ರಿಕ್ಷಾವನ್ನು ರೈಲಿನಲ್ಲಿ ಲಗೇಜ್‍ನಂತೆ ತುಂಬಿಕೊಂಡು ಹೋಗುತ್ತಾನೆಂದು ಕಾಣುತ್ತದೆ” ಎಂದು ಹೇಳಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಬಹುಶ: ಮುಂಬೈನಲ್ಲಿ ಮಳೆಯಾಗುತ್ತಿರುವ ಕಾರಣ ಪ್ರಯಾಣಿಕರನ್ನು ರೈಲಿನ ಬಾಗಿಲಿನ ಬಳಿಯೇ ಬಿಡಲು ಕರೆದುಕೊಂಡು ಬಂದಿರಬಹುದು.
Advertisement
ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಆಟೋರಿಕ್ಷಾ ಓಡಿಸಿದರೂ ರೈಲ್ವೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಅಧಿಕಾರಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರಯಾಣಿಕರು ಆರೋಪ ಮಾಡಿದ್ದಾರೆ.
ಮಳೆಯಿಂದ ಮುಂಬೈನಿಂದ ಕೊಲ್ಹಾಪುರಕ್ಕೆ ಹೊರಟಿದ್ದ ಮಹಾಲಕ್ಷ್ಮೀ ಎಕ್ಸ್ ಪ್ರೆಸ್ ರೈಲು ಶುಕ್ರವಾರ ರಾತ್ರಿಯಿಂದ ಠಾಣೆಯ ಬದಲಾಪುರದ ಬಳಿ ಪ್ರವಾಹದ ನೀರಿನಲ್ಲಿ ಸಿಲುಕಿತ್ತು. ನಂತರ ಎನ್‍ಡಿಆರ್‍ಎಫ್, ವಾಯುಪಡೆ ಮತ್ತು ನೌಕಾಪಡೆಗಳ ಯೋಧರು ಕಾರ್ಯಾಚರಣೆ ನಡೆಸಿದ್ದರು. ಹೆಲಿಕಾಪ್ಟರ್ ಮತ್ತು ಬೋಟ್‍ಗಳ ನೆರವಿನಿಂದ 9 ಗರ್ಭಿಣಿಯರು, ಮಹಿಳೆಯರು ಮಕ್ಕಳು ಸೇರಿ ರೈಲಿನಲ್ಲಿದ್ದ ಎಲ್ಲ 1050 ಪ್ರಯಣಿಕರನ್ನು ರಕ್ಷಿಸಿದ್ದಾರೆ.
https://www.youtube.com/watch?time_continue=3&v=envn-T6ptX4