ಬೆಂಗಳೂರು: ನಮ್ಮ ಮೆಟ್ರೋ (Namma Metro) ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ಬೆಂಗಳೂರು (Bengaluru) ಆಟೋ ರಿಕ್ಷಾ (Auto Rickshaw) ಚಾಲಕರ ಒಕ್ಕೂಟ ನೀಡಿದೆ. ನಿಲ್ದಾಣದಿಂದ ಹೊರ ಬಂದ್ಮೇಲೆ ಕರೆದಲ್ಲಿ ಆಟೋ ಚಾಲಕರು ಬರುವುದಿಲ್ಲ. ಸಮಸ್ಯೆಗಳೇ ಹೆಚ್ಚಾಗಿದೆ ಎನ್ನುತ್ತಿದ್ದ ಬೆಂಗಳೂರಿಗರಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಮೆಟ್ರೋ ನಿಲ್ದಾಣಗಳಿಂದ ನಾವು ತಲುಪುವ ಸ್ಥಳಗಳಿಗೆ ಹೋಗಲು ಸಮಸ್ಯೆಯಾಗುತ್ತಿದೆ. ಆಟೋ ಚಾಲಕರು ನಾವು ಕರೆದ ಕಡೆ ಬರಲ್ಲ. ಹೆಚ್ಚಿಗೆ ಹಣ ಪೀಕುತ್ತಿದ್ದಾರೆ ಎನ್ನುವುದು ಮೆಟ್ರೋ ಪ್ರಯಾಣಿಕರ ದೂರುಗಳಾಗಿತ್ತು. ಇದಕ್ಕೆ ಸ್ವತಃ ಆಟೋ ಚಾಲಕರೇ ಪರಿಹಾರವನ್ನ ಒದಗಿಸುತ್ತಿದ್ದಾರೆ. ಅದೇ ಈ ‘ಮೆಟ್ರೋ ಮಿತ್ರ’ ಅಪ್ಲಿಕೇಷನ್. ಇದರ ಮೂಲಕ ಕೊನೆಯ ಮೆಟ್ರೋ ನಿಲ್ದಾಣ/ಸ್ಥಳಗಳಿಗೂ ಸಂಪರ್ಕ ಕಲ್ಪಿಸುತ್ತವೆ. ‘ನಮ್ಮ ಯಾತ್ರಿ’ ಆನ್‌ಲೈನ್ ಆಟೋ ರಿಕ್ಷಾ ಬುಕ್ಕಿಂಗ್ ಅಪ್ಲಿಕೇಶನ್ ಈಗಾಗಲೇ ಯಶಸ್ವಿಯಾಗಿದೆ. ಇದಾದ ಬಳಿಕ ‘ಮೆಟ್ರೋ ಮಿತ್ರ’ ಆ್ಯಪ್ ಅನ್ನು ವಿವಿಧ ಪ್ರದೇಶಗಳಿಗೆ ಮತ್ತು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲೆಂದೇ ರಚನೆ ಮಾಡಲಾಗಿದೆ. ಈ ಆಪ್ ಬುಧವಾರ ಲೋಕಾರ್ಪಣೆಗೊಳ್ಳುವ ಮೂಲಕ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ಇದನ್ನೂ ಓದಿ: KRSನಿಂದ 7ನೇ ದಿನವೂ ತಮಿಳುನಾಡಿಗೆ ನೀರು – ಮಂಡ್ಯದಲ್ಲಿ ಮುಂದುವರಿದ ಪ್ರತಿಭಟನೆಗಳು
Advertisement
Advertisement
ರಾಜ್ಯ ಸರ್ಕಾರ ನಿಗದಿಪಡಿಸಿರುವ ಮೀಟರ್ ದರದ ಜೊತೆಗೆ 10 ರೂಪಾಯಿ ಹೆಚ್ಚುವರಿ ಹಣವನ್ನು ತಂತ್ರಜ್ಞಾನ ನಿರ್ವಹಣೆಗೆ ವಿಧಿಸಲಾಗಿದೆ ಎಂದು ಯೂನಿಯನ್ ತಿಳಿಸಿದೆ. ಇದೇ ಬುಧವಾರ ಜಯನಗರ ಮೆಟ್ರೋ ನಿಲ್ದಾಣದಲ್ಲಿ ಅಧಿಕೃತ ಆ್ಯಪ್ ಅನಾವರಣವಾಗಲಿದೆ. ಮೆಟ್ರೋ ಮಿತ್ರವು ಮೆಟ್ರೋ ಬಳಕೆದಾರರಿಗೆ ಮಾತ್ರ. ಸದ್ಯ ಜಯನಗರ ಮತ್ತು ಆರ್‌ವಿ ರಸ್ತೆ ನಿಲ್ದಾಣಗಳಲ್ಲಿ ಮೆಟ್ರೋ ಮಿತ್ರ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತೆ ಎಂದು ‘ಪಬ್ಲಿಕ್ ಟಿವಿ’ಗೆ ಎಆರ್‌ಡಿಯು ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದ್ದಾರೆ.
Advertisement
ಈ ಅಪ್ಲಿಕೇಶನ್‌ನಡಿ ಸಂಚಾರ ಸೇವೆ ನೀಡಲು ನೋಂದಾಯಿತ ಆಟೋಗಳ ದರಗಳು ಸರ್ಕಾರ ನಿಗದಿಪಡಿಸಿದ ಆಟೋ ದರಗಳ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಿವೆ. ಹೀಗಾಗಿ ಇನ್ನು ಮುಂದೆ ಯಾವುದೇ ತೊಂದರೆ, ವಿಳಂಬ, ಹೆಚ್ಚಿನ ಹಣ ನೀಡದೇ ನೀವು ಮೆಟ್ರೋ ನಿಲ್ದಾಣದಿಂದ ನಿಮ್ಮ ಮನೆ, ಇನ್ನಿತರ ಸ್ಥಳಗಳಿಗೆ ತೆರಳಬಹುದಾಗಿದೆ. ಇದನ್ನೂ ಓದಿ: ಡಿಎಂಕೆ ನಾಯಕ ಅಳಗಿರಿ ಆಪ್ತನ ಮೇಲೆ ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್
Advertisement
ಏನಿದು ಮೆಟ್ರೋ ಮಿತ್ರ?
* ಬೆಂಗಳೂರಿನ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್, ಬಿಎಂಆರ್‌ಸಿಎಲ್ ಸಹಕಾರದಲ್ಲಿ ಮೆಟ್ರೋ ಮಿತ್ರ
* ನಮ್ಮ ಮೆಟ್ರೋ ಪ್ರಯಾಣಿಕರು ಮೆಟ್ರೋ ಮಿತ್ರ ಮೂಲಕ ಆಟೋಗಳನ್ನು ಬುಕ್ ಮಾಡಬಹುದು
* ಆಟೋ ಬುಕ್ ಮಾಡಿಕೊಂಡು ಸಂಚರಿಸಲು ಅನುಕೂಲವಾಗುವಂತೆ ಅಪ್ಲಿಕೇಷನ್ ಸಿದ್ಧತೆ
* ಇದು ಬೆಂಗಳೂರಿನ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಬಳಕೆಗೆ ಲಭ್ಯವಿರುತ್ತದೆ
ಮೆಟ್ರೋ ಮಿತ್ರ ಬಳಸೋದು ಹೇಗೆ?
* ನೀವು ಈ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ
* ಮೆಟ್ರೋ ನಿಲ್ದಾಣಗಳ ಹೊರಗಡೆ ಅಳವಡಿಸಲಾದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು
* ಬಳಿಕ ಅಪ್ಲಿಕೇಷನ್ ಜೊತೆ ಕೈ ಜೋಡಿಸಿರುವ ಆಟೋಗಳ ಮಾಹಿತಿ ಲಭ್ಯವಾಗುತ್ತದೆ
* ಮೆಟ್ರೋ ನಿಲ್ದಾಣದ ಸಮೀಪದ 5 ಕಿ.ಮೀ.ನಲ್ಲಿ ಆಟೋಗಳ ಲಭ್ಯತೆ ಕಾಣಿಸುತ್ತದೆ
* ಆ ಪಟ್ಟಿ ನೋಡಿಕೊಂಡು ನೀವು ಆಟೋ ಬುಕ್ ಮಾಡಿಕೊಳ್ಳಬೇಕು.
Web Stories