ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯು ಬೆಂಗಳೂರಿನಲ್ಲಿ ಆಟೊ ರಿಕ್ಷಾ ಪ್ರಯಾಣ ದರವನ್ನು ಏರಿಕೆ ಮಾಡಿದ್ದು, ಡಿಸೆಂಬರ್ 1 ರಿಂದ ಹೊಸ ದರ ಜಾರಿಯಾಗಲಿದೆ.
ಪ್ರಸ್ತುತ ಎರಡು ಕಿಲೋ ಮೀಟರ್‌ಗೆ 25 ರೂಪಾಯಿ ಇದ್ದ ಆಟೋ ದರವನ್ನು ಇದೀಗ 30 ರೂಪಾಯಿಗೆ ಏರಿಸಲಾಗಿದೆ. ಪ್ರಸ್ತುತ ಪ್ರತಿ ಕಿಲೋಮೀಟರ್‌ಗೆ ಆಟೋ ದರ 12.50 ರೂಪಾಯಿ ಇತ್ತು. ಆದರೆ ಇನ್ನೂ ಮುಂದೆ ಆಟೋ ದರವನ್ನು 15 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಬೆಂಗಳೂರು ನಗರ ಜಿಲ್ಲೆಯಿಂದ ಆದೇಶ ಜಾರಿಗೊಳಿಸಿದೆ. ಅಲ್ಲದೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಆಟೋರಿಕ್ಷಾಗಳಿಗೂ ಇದೇ ದರ ಅನ್ವಯವಾಗುತ್ತದೆ. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಗೆದ್ದು ಬಂದವರು ತಮ್ಮ ಕಥೆಗಳನ್ನು ಹೇಳಬೇಕು: ಮನಿಷಾ ಕೊಯಿರಾಲಾ
ರಾತ್ರಿ ವೇಳೆಯಲ್ಲಿ ಅಂದರೆ ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆವರೆಗೆ ಆಟೋ ದರ+ ಆಟೋದರದ ಅರ್ಧಪಟ್ಟು ಹೆಚ್ಚು ಹಣ ನೀಡಬೇಕು ಮತ್ತು 90 ದಿನಗಳ ಒಳಗೆ ಹೊಸ ಪರಿಷ್ಕೃತ ದರವನ್ನು ಆಟೋ ಮೀಟರ್‌ಗಳಲ್ಲಿ ಅಳವಡಿಸಬೇಕು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಗುಂಡು ಹಾರಿಸಿ ತಂದೆ, ಮಗನ ಹತ್ಯೆ – ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸರ ಅಮಾನತು