ರಾಮನಗರ: ರಸ್ತೆ ತಿರುವಿನಲ್ಲಿ ಆಟೋ (Auto) ಪಲ್ಟಿಯಾಗಿ ಆಟೋದಲ್ಲಿದ್ದ ಪ್ರಯಾಣಿಕರ ಗಾಯಗೊಂಡ ಹಿನ್ನೆಲೆ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna) ತಕ್ಷಣ ಗಾಯಾಳುಗಳ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.
ಮದ್ದೂರಿನ (Maddur) ತಿಮ್ಮದಾಸ್ ಹೋಟೆಲ್ ಮುಂಭಾಗ ಕುಣಿಗಲ್ ರಸ್ತೆಯ ತಿರುವಿನಲ್ಲಿ ಪ್ಯಾಸೆಂಜರ್ ಆಟೋವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಅದೇ ಮಾರ್ಗವಾಗಿ ಮದ್ದೂರಿನ ಕಡೆಗೆ ಹೋಗುತ್ತಿದ್ದ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ, ತಕ್ಷಣ ತಾವೇ ಕಾರಿನಿಂದ ಇಳಿದು ಸ್ಥಳೀಯರ ಸಹಾಯದಿಂದ ಆಟೋವನ್ನು ಮೇಲಕ್ಕೆ ಎತ್ತಿದ್ದಾರೆ. ಬಳಿಕ ಆಟೋದಲ್ಲಿದ್ದ 6 ಮಂದಿ ಪ್ರಯಾಣಿಕರನ್ನು ಸಮಾಧಾನ ಪಡಿಸಿ ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಅಡಿಗೆ 10 ರೂ. ಬದಲು 1,000 ರೂ. ವಸೂಲಿ – ಕಿವಿ ಓಲೆ ಅಡ ಇಟ್ಟು ಸುಂಕ ಕಟ್ಟಿದ ಅಜ್ಜಿ
Advertisement
Advertisement
ಅಲ್ಲದೇ ಕೂಡಲೇ ಪಿಡಬ್ಲ್ಯೂಡಿ ಎಂಜಿನಿಯರ್‌ಗೆ ಕರೆಮಾಡಿ ತಿರುವಿನ ರಸ್ತೆಗೆ ಹಂಪ್ ನಿರ್ಮಾಣ ಮಾಡುವಂತೆ ಸೂಚನೆ ನೀಡಿದ್ದಾರೆ. ಶಾಸಕ ಹೆಚ್.ಸಿ.ಬಾಲಕೃಷ್ಣ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುದ್ದಿನ ಬೆಕ್ಕು ಸಾವು – ಮೃತದೇಹದ ಜೊತೆ 2 ದಿನ ಕಳೆದು ಮಹಿಳೆ ನೇಣಿಗೆ ಶರಣು
Advertisement