Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗ್ಯಾಸ್ ಅಭಾವದಿಂದ ನಲುಗಿದ ಆಟೋ ಚಾಲಕರು – ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ.. ಮನವಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಗ್ಯಾಸ್ ಅಭಾವದಿಂದ ನಲುಗಿದ ಆಟೋ ಚಾಲಕರು – ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ.. ಮನವಿ

Bengaluru City

ಗ್ಯಾಸ್ ಅಭಾವದಿಂದ ನಲುಗಿದ ಆಟೋ ಚಾಲಕರು – ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ.. ಮನವಿ

Public TV
Last updated: April 7, 2026 8:46 am
Public TV
Share
Auto Gas
SHARE

– ಏ.10ಕ್ಕೆ ಬಂಕ್ ಮಾಲೀಕರೊಂದಿಗೆ ಸಭೆ ಭರವಸೆ

ಬೆಂಗಳೂರು: ಅತ್ತ ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ನಡುವಿನ ಸಂಘರ್ಷ ನಿಲ್ಲುತ್ತಿಲ್ಲ. ಇತ್ತ ರಾಜ್ಯದಲ್ಲಿ ಬಡ ಆಟೋ ಚಾಲಕರಿಗೆ ಎದುರಾಗಿರುವ ಎಲ್‌ಪಿಜಿ (LPG) ಅಭಾವ ನೀಗುತ್ತಿಲ್ಲ. ಈ ಮಧ್ಯೆ ಜನಪ್ರತಿನಿಧಿಗಳು ಚಾಲಕರಿಗೆ ದನಿ ಆಗಿ ನಿಲ್ಲುತ್ತಿಲ್ಲ. ಬಂಕ್‌ಗಳ ಎದುರು ಕಿಲೋ ಮೀಟರ್ ಉದ್ದಕ್ಕೆ ಕ್ಯೂ ನಿಂತು ಬೇಸತ್ತ ಆಟೋ ಚಾಲಕರು ಇವತ್ತು ಬೆಳ್ಳಂಬೆಳಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ (KH Muniyappa) ನಿವಾಸಕ್ಕೆ ಮುತ್ತಿಗೆ ಹಾಕಿದ್ರು. ಸಚಿವರ ಮನೆ ಮುಂಭಾಗಕ್ಕೆ ಆಟೋಗಳನ್ನು ತಂದು ನಿಲ್ಲಿಸಿದ ಚಾಲಕರು ಆಕ್ರೋಶ ಹೊರಹಾಕಿದ್ರು.

Auto Gas 3

ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಿದ ಆಟೋ ಚಾಲಕರು, ಗ್ಯಾಸ್ ಅಭಾವಕ್ಕೆ (Gas Shortage) ಪರಿಹಾರ ಕೊಡುವಂತೆ ಆಗ್ರಹಿಸಿದ್ರು. ಬೆಂಗಳೂರಿನಲ್ಲಿ (Bengaluru) ಎಲ್ಲೂ ಎಲ್‌ಪಿಜಿ ಗ್ಯಾಸ್ ಸಿಗುತ್ತಿಲ್ಲ. ಇದರಿಂದ ಹಗಲು ರಾತ್ರಿ ಎನ್ನದೇ ಬಂಕ್‌ಗಳ ಎದುರು ಕ್ಯೂ ನಿಲ್ಲಬೇಕಾದ ಸ್ಥಿತಿ ಬಂದಿದೆ. ಆದರೂ ಗ್ಯಾಸ್ ಸಿಗುತ್ತಿಲ್ಲ. ಅಲ್ಲದೇ ಕೆಲ ಬಂಕ್‌ಗಳು ಮನಬಂದಂತೆ ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ. ಪ್ರತಿ ಲೀಟರ್‌ಗೆ 90 ರೂಪಾಯಿಯಿಂದ 135 ರೂಪಾಯಿ ನಿಗದಿ ಮಾಡಿದ್ದಾರೆ. ಇದರಿಂದ ಚಾಲಕರ ಬದುಕು ದುಸ್ತರವಾಗಿದೆ. ಬಂಕ್‌ಗಳಲ್ಲಿ ಸಮರ್ಪಕ ಗ್ಯಾಸ್ ಪೂರೈಕೆ ಮತ್ತು ಬಂಕ್ ದರಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ

ಆಟೋ ಚಾಲಕರ ಮನವಿಗೆ ಸಚಿವರ ಸ್ಪಂದನೆ
ಆಟೋ ಚಾಲಕರ (Auto Drivers) ಆಕ್ರೋಶದ ಮನವಿಯನ್ನ ಸ್ವೀಕರಿಸಿದ ಸಚಿವ ಮುನಿಯಪ್ಪ. ಸರ್ಕಾರ ಯಾವುದೇ ದರ ಏರಿಕೆ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ನಿತ್ಯ ಸುಮಾರು 3 ಸಾವಿರ ಸಿಲಿಂಡರ್‌ಗಳನ್ನು ಒದಗಿಸಲಾಗ್ತಿದೆ. ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಆದರೆ ಖಾಸಗಿ ಗ್ಯಾಸ್ ಬಂಕ್‌ಗಳಲ್ಲಿ ಹೆಚ್ಚುವರಿ ದರ ವಸೂಲಿ ಮಾಡ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು.. ಸಂಬಂಧ ಪಟ್ಟ ಬಂಕ್ ಮಾಲೀಕರನ್ನು ಕರೆದು ಸಭೆ ನಡೆಸೋದಾಗಿ ಹೇಳಿದ್ರು. ಇದನ್ನೂ ಓದಿ: ಶೃಂಗೇರಿ ವಿಧಾನಸಭಾ ಚುನಾವಣೆಯ ಪೋಸ್ಟಲ್ ಬ್ಯಾಲೆಟ್ ಮತ ಮರುಪರಿಶೀಲಿಸಿ, ಹೊಸದಾಗಿ ಫಲಿತಾಂಶ ಪ್ರಕಟಿಸುವಂತೆ ಹೈಕೋರ್ಟ್ ಆದೇಶ

Auto Gas 2

ಕೇಂದ್ರದತ್ತ ಬೊಟ್ಟು ಮಾಡಿದ ಸಚಿವ ಮುನಿಯಪ್ಪ
ರಾಜ್ಯದಲ್ಲಿ ಆಟೋ ಗ್ಯಾಸ್ ಸಮಸ್ಯೆ ಬಗೆಹರಿಸೋ ಬದಲು ಕೆಸರೆರಚಾಟ ಶುರುವಾಗಿದೆ. ಬೆಳಗ್ಗೆಯಷ್ಟೇ ಕೇಂದ್ರ ಸಮರ್ಪಕವಾಗಿ ಇಂಧನ ಪೂರೈಕೆ ಮಾಡುತ್ತಿದ್ದು, ಯಾವುದೇ ವ್ಯತ್ಯಯವಾಗಿಲ್ಲ ಅಂತ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದರು. ಆದ್ರೆ, ಸಂಜೆ ಹೊತ್ತಿಗೆ ಮುನಿಯಪ್ಪ ಉಲ್ಟಾ ಹೊಡೆದಿದ್ದಾರೆ. ಕರ್ನಾಟಕಕ್ಕೆ ಗ್ಯಾಸ್ ಹಂಚಿಕೆಯಲ್ಲಿ ಭಾರೀ ಅನ್ಯಾಯವಾಗಿದ್ದು, ಕೇಂದ್ರ ತಾರತಮ್ಯ ಮಾಡುತ್ತಿದೆ ಅಂತ ಅಂತ ದೂರಿದ್ದಾರೆ. ಎಲ್‌ಪಿಜಿ ಗ್ಯಾಸ್, ವಾಣಿಜ್ಯ ಸಿಲಿಂಡರ್, ಸಿಎನ್‌ಜಿ, ಪೆಟ್ರೋಲ್ ಹಾಗೂ ಡೀಸೆಲ್ ಎಲ್ಲವೂ ಕೇಂದ್ರದ ನಿಯಂತ್ರಣದಲ್ಲಿದ್ದು, ಕರ್ನಾಟಕಕ್ಕೆ ತಾರತಮ್ಯ ನೀಡಿ ಅನುಸರಿಸುತ್ತಿರೋದ್ರಿಂದ ಸಾರ್ವಜನಿಕರಿಗೆ ಸಂಕಷ್ಟ ಉಂಟಾಗಿದೆ ಅಂತ ಆರೋಪಿಸಿದ್ದಾರೆ. ಬೇರೆ ರಾಜ್ಯಗಳ ತರಹ ಕರ್ನಾಟಕಕ್ಕೂ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ಕೇಂದ್ರಕ್ಕೂ ಪತ್ರ ಬರೆದಿದ್ದಾರೆ.

ಇನ್ನೂ ಸಚಿವ ಮುನಿಯಪ್ಪರೊಂದಿಗೆ ಸಭೆ ಬಳಿಕ ಆಟೋ ಚಾಲಕರು ಆಕ್ರೋಶ ಹೊರಹಾಕಿದ್ದಾರೆ. ಬೈ ಎಲೆಕ್ಷನ್ ಮುಗಿಯೋವರೆಗೂ ಇವರಿಗೆ ನಮ್ಮ ಕಷ್ಟ ತಿಳಿಯಲ್ಲ. ಗ್ಯಾಸ್‌ಗಾಗಿ ನಾವು ರಸ್ತೆಯಲ್ಲಿ ಮಲಗಿದ್ದೇವೆ. ಸಚಿವರು ಅಸಡ್ಡೆ ಉತ್ತರ ಕೊಟಿದ್ದಾರೆ. ನಮ್ಮ ಕಷ್ಟ ಕೇಳೋಕೆ ಸರ್ಕಾರಕ್ಕೆ ಟೈಂ ಇಲ್ಲವಾಗಿದೆ. ಎಲೆಕ್ಷನ್ ಆಗೋವರೆಗೂ ಇವರು ಏನೂ ಮಾಡೋಲ್ಲ.. ದರ ಏರಿಕೆಯಾದ್ರೂ ಯಾರೂ ಬಂಕ್ ಅವರನ್ನ ಕೇಳ್ತೀಲ್ಲ.. ಆಟೋ ದರ ಹೆಚ್ಚು ಕೇಳಿದ್ರೇ ನಮ್ಮನ್ನ ವಿಲನ್ ಮಾಡ್ತಾರೆ ಎಂದು ಆಕ್ರೋಶ ಹೊರಹಾಕಿದ್ರು. ಇದನ್ನೂ ಓದಿ: ಮಕ್ಕಳ ಭವಿಷ್ಯಕ್ಕಾಗಿ ಅಡಿಕೆ ತೋಟ ಬೆಳೆಸಿದ ಸರ್ಕಾರಿ ಶಾಲೆ – ವಿದ್ಯಾರ್ಥಿಗಳನ್ನ ವಿಮಾನದಲ್ಲಿ ಕರೆದೊಯ್ಯಬೇಕೆಂಬ ಆಸೆ

Auto Gas 4

ಇನ್ನು ಮಹಿಳಾ ಆಟೋ ಚಾಲಕರು ಸಹ ತಮ್ಮ ಅಳಲು ತೋಡಿಕೊಂಡಿದ್ದಾರೆ. ಗಂಡ ಹೆಂಡತಿ ಇಬ್ಬರೂ ಆಟೋ ಚಾಲಕರಾಗಿದ್ದೇವೆ. ಪುಟ್ಟ ಮಕ್ಕಳನ್ನ ಮನೆಯಲ್ಲಿ ಬಿಟ್ಟು ಗ್ಯಾಸ್ ಬಂಕ್ ಅಲ್ಲಿ ಕಾಯುವಂತಾಗಿದೆ. ಗಂಡ ಒಂದು ಬಂಕ್ ಅಲ್ಲಿ ಕಾದ್ರೇ, ಹೆಂಡತಿ ಒಂದು ಬಂಕ್ ಅಲ್ಲಿ ಕಾಯುವಂತಾಗಿದೆ. ದಯವಿಟ್ಟು ನಮಗೆ ಎಲ್‌ಪಿಜಿ ಸಿಗುವಂತೆ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ರು.

ಒಟ್ಟಾರೆ. ಆಟೋ ಗ್ಯಾಸ್‌ಗಾಗಿ ಬಳಲಿ ಬೆಂಡಾಗಿರುವ ಚಾಲಕರು ಸಚಿವರಿಗೆ ಮನವಿ ಮಾಡಿದ್ದಾರೆ. ಆದರೆ. ಏಪ್ರಿಲ್ 10ರ ನಂತರ ಸಭೆ ನಡೆಸೋದಾಗಿ ಸಚಿವರು ಭರವಸೆ ನೀಡಿದ್ದಾರೆ. ಅತ್ತ ಗ್ಯಾಸ್ ಸಮಸ್ಯೆಗೆ ಕೇಂದ್ರವೇ ಕಾರಣ ಎನ್ನುತ್ತಿದ್ದಾರೆ. ಈ ಗ್ಯಾಸ್ ಸಮಸ್ಯೆಗೆ ಪರಿಹಾರ ಯಾವಾಗ ಸಿಗುತ್ತೆ ಕಾದುನೋಡಬೇಕಿದೆ.

TAGGED:Auto DriversAuto GasbengaluruKH MuniyappalpgPetrol Bankಆಟೋ ಗ್ಯಾಸ್‌ಎಲ್‍ಪಿಜಿಕೆ.ಹೆಚ್ ಮುನಿಯಪ್ಪಪೆಟ್ರೋಲ್‍ ಬಂಕ್ಬೆಂಗಳೂರು
Share This Article
Facebook Whatsapp Whatsapp Telegram

Cinema news

Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories
Tamil Actress Subashini
ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
Cinema Latest Main Post South cinema
shreyas manju
ಶ್ರೇಯಸ್ ಮಂಜುಗೆ ʻದಿಲ್‌ದಾರ್ʼ ಬರ್ತ್‌ಡೇ ಟೀಸರ್ ಗಿಫ್ಟ್‌!
Cinema Latest Sandalwood

You Might Also Like

America China AI
Latest

ಯುಎಸ್ ಸೇನೆ ಮಾಹಿತಿ ಇರಾನ್‌ಗೆ ಮಾರಿದ ಚೀನಾ: ಅಮೆರಿಕ

Public TV
By Public TV
11 minutes ago
Tolll
Latest

ಏ.10 ರಿಂದ ಟೋಲ್‌ಗಳಲ್ಲಿ ನಗದು ಸ್ವೀಕಾರ ಸಂಪೂರ್ಣ ಬಂದ್‌!

Public TV
By Public TV
13 minutes ago
Chikkamagaluru School 2
Chikkamagaluru

ಮಕ್ಕಳ ಭವಿಷ್ಯಕ್ಕಾಗಿ ಅಡಿಕೆ ತೋಟ ಬೆಳೆಸಿದ ಸರ್ಕಾರಿ ಶಾಲೆ – ವಿದ್ಯಾರ್ಥಿಗಳನ್ನ ವಿಮಾನದಲ್ಲಿ ಕರೆದೊಯ್ಯಬೇಕೆಂಬ ಆಸೆ

Public TV
By Public TV
21 minutes ago
Chitradurga Nirmithi Kendra Former Accountant Lokayukta Raid
Chitradurga

ಚಿತ್ರದುರ್ಗದಲ್ಲಿ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಮನೆ ಮೇಲೆ ಲೋಕಾಯುಕ್ತ ದಾಳಿ

Public TV
By Public TV
46 minutes ago
Israel Strikes Iran
Latest

ಕದನ ವಿರಾಮಕ್ಕೆ ಒಪ್ಪದ ಇರಾನ್‌ ಮೇಲೆ ಮಿಸೈಲ್‌ ಮಳೆಗರೆದ ಇಸ್ರೇಲ್‌ – ಹಲವೆಡೆ ಸ್ಫೋಟ

Public TV
By Public TV
1 hour ago
Aviation Indian Airlines
Latest

ಇರಾನ್, ಇಸ್ರೇಲ್-ಅಮೆರಿಕ ವಾರ್ ಎಫೆಕ್ಟ್ – ಭಾರತದ ವಿಮಾನಯಾನ ಉದ್ಯಮಕ್ಕೆ 2,500 ಕೋಟಿ ನಷ್ಟ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?