ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಳೆಯಿಂದ (ಆ.1) ಆಟೋ ದರ ಏರಿಕೆಯಾಗಲಿದೆ. ಬೆಂಗಳೂರು ನಗರ ಡಿಸಿ ಆಟೋ ದರ ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಮೊದಲು ಆಟೋ ಚಾಲಕರು ಜಿಲ್ಲಾಧಿಕಾರಿಯವರಿಗೆ ಪ್ರಯಾಣ ದರ ಏರಿಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಆಲಿಸಿದ ಡಿಸಿಯವರು ಅಸ್ತು ಎಂದಿದ್ದಾರೆ.ಇದನ್ನೂ ಓದಿ: ಪತಿ ಜೊತೆ ಜಗಳ| ಚಹಾಗೆ ಇಲಿ ಪಾಷಾಣ ಬೆರೆಸಿ ಮಗು ಜೊತೆ ಕುಡಿದ್ಳು – ಪುತ್ರಿ ಸಾವು, ತಾಯಿ ಗಂಭೀರ
ಆ.1ರಿಂದ ಆಟೋ ದರ ಏರಿಕೆಯಾಗಲಿದ್ದು, ಕೆಲವು ಸೂಚನೆಗಳನ್ನು ನೀಡಿದ್ದಾರೆ. ಈ ಪೈಕಿ ಆಟೋ ದರ ಏರಿಕೆ ಬಳಿಕ ಹೆಚ್ಚುವರಿ ಹಣವನ್ನು ಪಡೆಯುವಂತಿಲ್ಲ. ಒಂದು ವೇಳೆ ಹೆಚ್ಚುವರಿ ಹಣ ಪಡೆದರೆ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆಟೋ ಪ್ರಯಾಣ ಎಷ್ಟು ದುಬಾರಿ?
– ಕನಿಷ್ಟ ಮೊದಲ 2 ಕಿ.ಮೀಗೆ 36ರೂ.
– ನಂತರದ ಪ್ರತಿ ಕಿ.ಮೀಗೆ 18 ರೂ.
– ಮೊದಲ ಐದು ನಿಮಿಷ ಕಾಯುವಿಕೆ ಉಚಿತ.
– ಪ್ರತಿ ಹದಿನೈದು ನಿಮಿಷ ಕಾಯುವಿಕೆ ದರ 10 ರೂ.
– 20 ಕೆ.ಜಿ ಲಗೇಜಿಗೆ ಉಚಿತ
– 20 ಕೆ.ಜಿ ಗಿಂತ ಹೆಚ್ಚಿದ್ದರೇ 10ರೂ. ಲಗೇಜ್ ಶುಲ್ಕ
– ರಾತ್ರಿ ವೇಳೆಯ ಪ್ರಯಾಣಕ್ಕೆ ಒಂದೂವರೆ ಪಟ್ಟು ದರ
– ರಾತ್ರಿ 10ರಿಂದ ಬೆಳಗಿನ ಜಾವ 5ಗಂಟೆಯವರೆಗೆ ಒಂದೂವರೆ ಪಟ್ಟು ದರ
– ಹೊಸ ದರ ಪಟ್ಟಿ ಆಟೋದ ಮೇಲೆ ಕಡ್ಡಾಯ ಹಾಕಬೇಕು
– ಪರಿಷ್ಕೃತ ದರದ ಹೊಸ ಮೀಟರ್ ಆ.31ರೊಳಗೆ ಹಾಕಿಸಬೇಕು.ಇದನ್ನೂ ಓದಿ: Malegaon Blast Case | ಪ್ರಜ್ಞಾ ಠಾಕೂರ್ ಸೇರಿ 7 ಆರೋಪಿಗಳು ಖುಲಾಸೆ