ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾವಿರಾರು ಆಟೋ, ಕ್ಯಾಬ್ ಚಾಲಕರು ಸಾರಿಗೆ ಇಲಾಖೆ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿದ್ರು. ಸಾವಿರಾರು, ಆಟೋ ಕ್ಯಾಬ್‍ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಶಾಂತಿನಗರದ ಬಿಟಿಎಸ್ ರೋಡ್ ಬ್ಲಾಕ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ರು.
ಆರ್‌ಟಿಓ ಕಚೇರಿಗೆ ನುಗ್ಗಿದ ಚಾಲಕರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯ್ತು. ಪೊಲೀಸರನ್ನೇ ತಳ್ಳಿ ಸಾರಿಗೆ ಕಚೇರಿಗೆ ನುಗ್ಗಲು ಯತ್ನಿಸಿದ್ರು. ಸರ್ಕಾರ ಫೆಬ್ರವರಿಯಲ್ಲೇ ಒನ್ ಸಿಟಿ ಒನ್ ರೇಟ್ ಆದೇಶ ಹೊರಡಿಸಿದ್ದು, ಯಾವುದೇ ಅಗ್ರಿಗೇಟರ್ ಕಂಪನಿಗಳು ಆದೇಶ ಪಾಲನೆ ಮಾಡುತ್ತಿಲ್ಲ. ಆರ್‍ಟಿಓ ಅಧಿಕಾರಿಗಳು ಆದೇಶ ಪಾಲನೆ ಮಾಡದ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚಾಲಕರು ಕಿಡಿಕಾರಿದ್ರು.
ಓಲಾ- ಉಬರ್ ಸೇರಿದಂತೆ ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪನಿಗಳು ದುಪ್ಪಟ್ಟು ಲಾಭ ಪಡೆಯುತ್ತಿವೆ. ಆದರೆ ಚಾಲಕರಿಗೆ ಯಾವುದೇ ಲಾಭ ಸಿಗುತ್ತಿಲ್ಲ ಅಂತ ಕಿಡಿಕಾರಿದ್ರು. ಆಟೋ-ಕ್ಯಾಬ್‍ಗಳನ್ನು ರೋಡ್‍ಗೆ ಅಡ್ಡಲಾಗಿ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಪ್ರತಿಭಟನೆ ಬೆನ್ನಲ್ಲೇ ಸಾರಿಗೆ ಇಲಾಖೆ 11 ವಿಶೇಷ ತಂಡ ರಚಿಸಿದ್ದು, ನಾಳೆಯಿಂದ ಬೈಕ್ ಟ್ಯಾಕ್ಸಿ ಮೇಲೆ ರೇಡ್ ಮಾಡಲಿದೆ. ಇದನ್ನೂ ಓದಿ: ಜು.8 ರಿಂದ ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಬಿಡುಗಡೆ: ಚಲುವರಾಯಸ್ವಾಮಿ
ಆಟೋ ಚಾಲಕರ ಬೇಡಿಕೆಗಳೇನು..?
1. ಒನ್ ಸಿಟಿ ಒನ್ ಫೇರ್ ಜಾರಿಯಾಗಬೇಕು
2. ರ್ಯಾಪಿಡೋ ಬೈಕ್ ಟ್ಯಾಕ್ಸಿ ನಿಲ್ಲಬೇಕು
3. ಆರ್‌ಟಿಓ ಅಧಿಕಾರಿಗಳು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಕಾರ್ಯಾಚರಣೆ ಮಾಡಬೇಕು
4. ಪೋರ್ಟರ್ ಕಂಪನಿಯನ್ನು ಬ್ಯಾನ್ ಮಾಡಬೇಕು
5. ಸ್ಕೂಲ್ ವಾಹನಗಳಿಗೆ ಪರ್ಮಿಟ್ ನೀಡಬೇಕು