Connect with us

International

ಸಿನಿಮಾದಲ್ಲಿ ಗರ್ಲ್‍ಫ್ರೆಂಡ್‍ ಗೆ ನಂಬರ್ ಕೊಟ್ಟ ಹೀರೋ: ಫಜೀತಿಗೆ ಸಿಲುಕಿದ ರಿಯಲ್ ಆಟೋ ಡ್ರೈವರ್!

Published

on

ಢಾಕಾ: ಸಿನಿಮಾದಲ್ಲಿ ನಟರೊಬ್ಬರು ಫೋನ್ ನಂಬರ್ ಬಳಸಿದ್ದರಿಂದ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆಟೋ ಡ್ರೈವರ್ ಈಗ ಫಜೀತಿಗೆ ಸಿಕ್ಕಿಕೊಂಡಿದ್ದಾರೆ.

ಹೌದು. ಬಾಂಗ್ಲಾದೇಶದ ಪ್ರಸಿದ್ಧ ನಟ ಶಕೀಬ್ ಖಾನ್ ಅವರು ಅಭಿನಯಿಸಿದ್ದ ‘ರಾಜನೀತಿ’ ಸಿನಿಮಾ ಜೂನ್ ನಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಶಕೀಬ್ ಖಾನ್ ಅವರು ತಮ್ಮ ಸ್ನೇಹಿತೆಗೆ ಒಂದು ನಂಬರ್ ಕೊಟ್ಟಿದ್ದರು. ಆ ನಂಬರ್ ಇಜಜುಲ್ ಮಿಯಾ ಎಂಬವರ ಮೊಬೈಲ್ ನಂಬರ್ ಆಗಿದ್ದು ಈಗ ದಿನಕ್ಕೆ ನೂರಕ್ಕೂ ಅಧಿಕ ಕರೆಗಳು ಬರುತ್ತಿದೆ.

ಚಿತ್ರದಲ್ಲಿ ನನ್ನ ಫೋನ್ ನಂಬರ್ ಬಳಸಿದರಿಂದ ನನ್ನ ಜೀವನ ಹಾಳಾಗಿ ಹೋಗಿದೆ. ಹಲೋ, ಶಕೀಬ್ ನಾನು ನಿಮ್ಮ ಅಭಿಮಾನಿ. ನಾನು ನಿಮ್ಮ ಜೊತೆ ಎರಡು ನಿಮಿಷ ಮಾತಾಡಬೇಕು ಎಂದು ಹೇಳಿ ಶಕೀಬ್ ಅವರ ಮಹಿಳಾ ಅಭಿಮಾನಿಗಳಿಂದ ನನಗೆ ದಿನಕ್ಕೆ 100 ಕರೆಗಳು ಬರುತ್ತಿದೆ ಎಂದು ಇಜಜುಲ್ ಮಿಯಾ ಹೇಳಿದ್ದಾರೆ.

ಚಿತ್ರ ಬಿಡುಗಡೆಯಾದ ನಂತರ ಮಹಿಳೆಯರಿಂದ ಕರೆಗಳು ಬರುತ್ತಿರುವುದನ್ನು ಗಮನಿಸಿದ ನನ್ನ ಪತ್ನಿ ನನಗೆ ಅಕ್ರಮ ಸಂಬಂಧವಿದೆ ಎಂದು ತಿಳಿದು ನನ್ನನ್ನು ತೊರೆಯಲು ಮುಂದಾಗಿದ್ದಳು ಎಂದು ಅವರು ನೋವನ್ನು ತೋಡಿಕೊಂಡಿದ್ದಾರೆ.

ಸಮಸ್ಯೆಯಾದರೂ ಹೊಸ ಫೋನ್ ನಂಬರ್ ತೆಗೆದುಕೊಳ್ಳಬಹುದಿತ್ತಲ್ಲ ಎನ್ನುವ ಪ್ರಶ್ನೆಗೆ, ಬಹಳ ವರ್ಷಗಳಿಂದ ಈ ಫೋನ್ ನಂಬರ್ ಬಳಸುತ್ತಿದ್ದು, ಗ್ರಾಹಕರಿಗೆ ಈ ನಂಬರ್ ನೀಡಿದ್ದೇನೆ. ನಂಬರ್ ಬದಲಾಯಿಸಿದರೆ ನನ್ನ ಉದ್ಯೋಗಕ್ಕೆ ಸಮಸ್ಯೆಯಾಗಬಹುದು ಎನ್ನುವ ಕಾರಣಕ್ಕೆ ಹೊಸ ನಂಬರ್ ತೆಗೆದುಕೊಳ್ಳಲಿಲ್ಲ ಎಂದು ಮಿಯಾ ಉತ್ತರಿಸಿದ್ದಾರೆ.

ಹೊಸದಾಗಿ ನಾನು ಮದುವೆಯಾಗಿದ್ದು ಹಾಗೂ ನನಗೆ ಒಬ್ಬಳು ಹೆಣ್ಣು ಮಗಳು ಕೂಡ ಇದ್ದಾಳೆ. ಈ ಹಿಂದೆ ನಾನು ಶಕೀಬ್ ಎಂದು ತಿಳಿದುಕೊಂಡು ಒಬ್ಬ ಅಭಿಮಾನಿ ನಾನು ಇರುವ ಜಾಗ ತಿಳಿದುಕೊಂಡು 500 ಕಿ.ಮಿ ಫಾಲೋ ಮಾಡಿದ್ದ ಎಂದು ತಿಳಿಸಿದರು.

ತನಗೆ ಆಗುತ್ತಿರುವ ಮಾನಸಿಕ ಕಿರುಕುಳದಿಂದ ಬೇಸತ್ತು ಹೋಗಿರುವ ಇಜಜುಲ್ ಮಿಯಾ ಅವರು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ಸೂವ್ ಖಾನ್ ವಿರುದ್ಧ ಕೋರ್ಟ್ ಮೊರೆಹೋಗಿದ್ದು, 50 ಲಕ್ಷ ಟಕಾ(ಅಂದಾಜು 39.38 ಲಕ್ಷ ರೂ.) ಪರಿಹಾರ ನೀಡಲು ಆದೇಶಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಮಿಯಾ ಪರ ವಕೀಲ ಮಜೀದ್ ಅವರು ಪ್ರತಿಕ್ರಿಯಿಸಿ, ಈ ವಾರ ನಾನು ಕಕ್ಷಿದಾರರ ಪರವಾಗಿ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದೇನೆ. ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲು ಜಿಲ್ಲಾ ನ್ಯಾಯಾಧಿಶರು ಹಿಂದೇಟು ಹಾಕಿದರು. ಆದರೆ ಫೋನ್ ಕರೆಯಿಂದ ಮಿಯಾ ಅವರ ಜೀವನ ಹೇಗೆ ಹಾಳಾಗಿದೆ ಎಂಬುದಕ್ಕೆ ಸಾಕ್ಷ್ಯವನ್ನು ಸಲ್ಲಿಸಿದ ಬಳಿಕ ಜಡ್ಜ್ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *