ಬೆಂಗಳೂರು: ಆಟೋಚಾಲಕರ ಸಂಘವು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಮನವಿಯೊಂದನ್ನು ಮಾಡಿದೆ.
ಶಕ್ತಿ ಯೋಜನೆ ರದ್ದು ಮಾಡಿ ಎಂದು ಆಟೋ ಚಾಲಕರು (Auto Drivers) ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಸಿಎಂಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ನಾಳೆಯಿಂದಲೇ ಜಾರಿ – ಸಚಿವ ಮುನಿಯಪ್ಪ
Advertisement
ಶಕ್ತಿ ಯೋಜನೆಯಿಂದ (Shakthi Scheme) ನಮಗೆ ಲಾಸ್ ಆಗ್ತಿದೆ. ಜೀವನ ನಿರ್ವಹಣೆಗೆ ಕಷ್ಟ ಆಗ್ತಿದೆ. ಶಕ್ತಿ ಯೋಜನೆ ಮುಂದುವರೆಸಿದ್ರೆ ನಮ್ಮ ಜೀವನ ಬೀದಿಗೆ ಬರುತ್ತದೆ. ಹೀಗಾಗಿ ಶಕ್ತಿ ಯೋಜನೆ ರದ್ದು ಮಾಡಿ. ಅಥವಾ ಆಟೋ ಚಾಲಕರಿಗೂ ಅರ್ಥಿಕ ಸಹಾಯ ಮಾಡಿ ಎಂದು ªಮನವಿ ವೇಳೆ ಆಟೋ ಚಾಲಕರು ತಿಳಿಸಿದ್ದಾರೆ.
Advertisement
Advertisement
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯು ಬಡಕುಟುಂಬಗಳ ಮಹಿಳೆಯರು ತಮ್ಮ ಜೀವನ ನಿರ್ವಹಣೆಗೆ ಊರಿಂದ ಊರಿಗೆ ಹೋಗಿ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಿದೆ. ಇನ್ನೂ ಹಲವು ಮಹಿಳೆಯರು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಹೀಗೆ ಕ್ಷೇತ್ರ ಭೇಟಿ ಮಾಡುತ್ತಿದ್ದಾರೆ.
Advertisement
Web Stories