ಹುಬ್ಬಳ್ಳಿ: ಮಹಿಳಾ ಪ್ರಯಾಣಿಕರೊಬ್ಬರು ಬ್ಯಾಗ್ ಸಮೇತ ಬಿಟ್ಟು ಹೋಗಿದ್ದ ಬಂಗಾರದ ಒಡವೆಗಳನ್ನು ಆಟೋ ಚಾಲಕರೊಬ್ಬರು ಮರಳಿ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ನಗರದಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಹಜರತ್ ಅಲಿ (19) ಪ್ರಯಾಣಿಕರು ಮರೆತು ಬಿಟ್ಟು ಹೋಗಿದ್ದ ಬಂಗಾರದ ಒಡವೆಗಳನ್ನು ವಾಪಸ್ ನೀಡಿದ್ದಾರೆ.
ನೇಕಾರನಗರದ ನಿವಾಸಿ ಆಗಿರುವ ಹಜರತ್ ಅಲಿ ಅವರ ಆಟೋ ಹತ್ತಿದ್ದ ಆನಂದ ನಗರದ ನಿವಾಸಿ ಶೋಭಾ ಕೊಳ್ಳಿ ಅವರು ಆಟೋದಲ್ಲಿ ಬ್ಯಾಗ್ ಬಿಟ್ಟು ಇಳಿದಿದ್ದರು. ಆ ಬಳಿಕ ಆಟೋದಲ್ಲಿ ಪ್ರಯಾಣಿಕರ ಬ್ಯಾಗ್ ಇರುವುದನ್ನು ಗಮನಿಸಿದ್ದ ಹಜರತ್ ಅಲಿ ಅವರು ಉಪನಗರ ಠಾಣೆಯ ಪೊಲೀಸರ ಸಮ್ಮುಖದಲ್ಲಿ ಆಭರಣ ಹಾಗೂ ಬ್ಯಾಗ್ ಮರಳಿಸಿದ್ದಾರೆ.
ಶೋಭಾ ಅವರು ತಮ್ಮ ಬ್ಯಾಗ್ ನಲ್ಲಿ ಸುಮಾರು ಒಂದು ಲಕ್ಷ ರೂ. ಅಧಿಕ ಮೌಲ್ಯದ ಬಂಗಾರದ ಆಭರಣಗಳು ಇಟ್ಟಿದ್ದರು. ಸದ್ಯ ಆಭರಣವಿದ್ದ ಬ್ಯಾಗ್ ಮರಳಿಸಿ ಸಿಕ್ಕ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಶೋಭಾ ಅವರ ಕುಟುಂಬ ಹಜರತ್ ಅಲಿ ಅವರಿಗೆ ಸನ್ಮಾನ ಮಾಡಿ ಅಭಿನಂದಿಸಿದ್ದಾರೆ.