ನವದೆಹಲಿ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ 26 ವರ್ಷದ ವ್ಯಕ್ತಿಯೋರ್ವ ಕುಕ್ಕರ್ ಹಾಗೂ ಸಿಲಿಂಡರ್‍ನಿಂದ ಹೊಡೆದು ಹತ್ಯೆಗೈದಿರುವ ಘಟನೆ ಆಗ್ನೇಯ ದೆಹಲಿಯ ತುಘಲಕಾಬಾದ್ ಎಕ್ಸ್‌ಟೆನ್ಶನ್ ಏರಿಯಾದಲ್ಲಿ ನಡೆದಿದೆ.
ಆರೋಪಿಯನ್ನು ತುಘಲಕಾಬಾದ್ ಎಕ್ಸ್‌ಟೆನ್ಶನ್ ನಿವಾಸಿ ಹಾಸಿಂ ಖಾನ್ ಎಂದು ಗುರುತಿಸಲಾಗಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೋಗಿದ್ದು, ನನ್ನ ಜೀವನದ ಮರೆಯಲಾಗದ ಕ್ಷಣ: ಅಲ್ಲು ಅರ್ಜುನ್
ಹಾಸಿಂ ಖಾನ್ ಮುಂಜಾನೆ ಗೋವಿಂದಪುರಿ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ಹೆಂಡತಿಯನ್ನು ಕೊಂದಿರುವುದಾಗಿ ತಿಳಿಸಿದ್ದಾರೆ. ನಂತರ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದಾಗ ಪತ್ನಿ ಶಾಹೀನ್ ಖಾನ್ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿರುವುದು ಕಂಡು ಬಂದಿದೆ.
ಸಲ್ಮಾನ್ ಎಂಬಾತನೊಂದಿಗೆ ಶಾಹೀನ್ ಖಾನ್ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆರೋಪಿ ಆಕೆಯ ತಲೆಗೆ ಕುಕ್ಕರ್ ಹಾಗೂ ಸಿಲಿಂಡರ್‌ನಿಂದ ಹೊಡೆದಿದ್ದಾನೆ. ಇದೀಗ ಪೊಲೀಸರು ಕುಕ್ಕರ್ ಹಾಗೂ ಸಿಲಿಂಡರ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
2018ರ ಜೂನ್‍ನಲ್ಲಿ ಹಾಸಿಮ್ ಮತ್ತು ಶಾಹೀನ್ ವಿವಾಹವಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲ ಮತ್ತು ಆರೋಪಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್ ಮೂಲಕ ಮಂತ್ರಿಗಿರಿಗೆ ರಮೇಶ್ ಜಾರಕಿಹೊಳಿ ಲಾಬಿ