ವಾಷಿಂಗ್ಟನ್: ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಉಪನ್ಯಾಸ ನೀಡಲು ಹೊರಟಿದ್ದ ಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಅವರ ಮೇಲೆ ದಾಳಿ ನಡೆದಿದ್ದು, ಚಾಕು ಇರಿತಕ್ಕೆ ಒಳಗಾಗಿದ್ದಾರೆ.
ಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಅವರು ಶುಕ್ರವಾರ ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಉಪನ್ಯಾಸ ನೀಡಲು ಹೊರಟಿದ್ದರು. ಚೌಟ ಸಂಸ್ಥೆಯ ವೇದಿಕೆಯಲ್ಲಿ ತಮ್ಮನ್ನು ಪರಿಚಯಿಸಿಕೊಳ್ಳುತ್ತಿದ್ದಂತೆ ವೇದಿಕೆಗೆ ನುಗ್ಗಿದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: 411 ಕೋಟಿ ರೂ. ಅನವಾಲ ಏತ ನೀರಾವರಿ ಯೋಜನೆಗೆ ಸಂಪುಟ ಅನುಮೋದನೆ
ಸಲ್ಮಾನ್ ರಶ್ದಿಯ ಮೇಲೆ ದಾಳಿ ಮಾಡಿದ ನಂತರ ದಾಳಿಕೋರರನ್ನು ತಡೆಹಿಡಿಯಲಾಗಿದೆ. ದಾಳಿ ನಡೆಸಿದ ಕೆಲವೇ ಹೊತ್ತಿನಲ್ಲಿ ಪೊಲೀಸರು ಓರ್ವವನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿದಿದೆ. ಇದನ್ನೂ ಓದಿ: ನೂಪುರ್ ಶರ್ಮಾ ಹತ್ಯೆಗೆ ಪಾಕ್ ಸಂಘಟನೆಗಳಿಂದ ಸುಪಾರಿ ಪಡೆದಿದ್ದ ಉಗ್ರ ಅರೆಸ್ಟ್
https://twitter.com/NotThatRKelly/status/1558110761217654787
ಸಲ್ಮಾನ್ ರಶ್ದಿಯವರ ‘ದಿ ಸೈಟಾನಿಕ್ ವರ್ಸಸ್’ ಪುಸ್ತವು ಮುಸ್ಲಿಮರ ಧರ್ಮನಿಂದನೆಯಾಗಿದೆ ಎಂಬ ಕಾರಣದಿಂದ 1988 ರಿಂದ ಇರಾನ್‌ನಲ್ಲಿ ನಿಷೇಧಿಸಲಾಗಿದೆ.