ಸಿಡ್ನಿ: ಆಸ್ಟ್ರೇಲಿಯಾದ (Australia) ರನ್ ಮಿಷಿನ್ ಎಂದೇ ಖ್ಯಾತರಾದ ಸ್ಟೀವ್ ಸ್ಮಿತ್ (Steve Smith) ನ್ಯೂಜಿಲೆಂಡ್ (New Zealand) ವಿರುದ್ಧದ ಪಂದ್ಯದಲ್ಲಿ ತಮ್ಮ ಆಟದ ಜೊತೆಗೆ ಮೈದಾನದಲ್ಲಿ ಎಷ್ಟು ಚುರುಕಾಗಿ ಗ್ರಹಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
Advertisement
ಸ್ಮಿತ್ ಆಸ್ಟ್ರೇಲಿಯಾ ಪರ ಮೂರು ಮಾದರಿ ಕ್ರಿಕೆಟ್‍ನಲ್ಲೂ ಮಿಂಚುಹರಿಸಿದ ಆಟಗಾರ. ಸ್ಮಿತ್ ತಮ್ಮ ಆಟದ ಜೊತೆಗೆ ಮೈದಾನದಲ್ಲಿ ತುಂಬಾ ಚುರುಕಾಗಿ ಗ್ರಹಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕುಸಿತಕಂಡಿದ್ದ ಆಸ್ಟ್ರೇಲಿಯಾ ತಂಡವನ್ನು ಆಧರಿಸಿ ಸ್ಮಿತ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು. 38 ಓವರ್ ಎಸೆಯಲು ಬಂದ ಜೆಮ್ಮಿ ನಿಶಾಮ್ ಅವರ ಎಸೆತವೊಂದಕ್ಕೆ ಸ್ಮಿತ್ ಸಿಕ್ಸ್ ಚಚ್ಚಿದರು. ಜೊತೆಗೆ ಕೂಡಲೇ ಅಂಪೈರ್‌ಗೆ ನೋ ಬಾಲ್ (No Ball) ಎಂಬ ಸೂಚನೆ ನೀಡಿದರು. ಇದನ್ನೂ ಓದಿ: T20 ವಿಶ್ವಕಪ್ ಆಡಲು ಬುಮ್ರಾ, ಹರ್ಷಲ್ ಪಟೇಲ್ ಫಿಟ್ – ಜಡೇಜಾ ಆಡಲ್ಲ?
Advertisement
Advertisement
ಇತ್ತ ಸ್ಮಿತ್ ನೋ ಬಾಲ್ ಎಂದು ಹೇಳುತ್ತಿದ್ದಂತೆ ಅಂಪೈರ್ ಯಾಕೆ ಎಂದರು. ಸ್ಮಿತ್ 30 ಯಾರ್ಡ್ ಸರ್ಕಲ್‍ನ ಹೊರಭಾಗದಲ್ಲಿ ನಿಯಮಕ್ಕಿಂತ ಹೆಚ್ಚಿನ ಫೀಲ್ಡರ್‌ಗಳು ನಿಂತಿದ್ದಾರೆ ಹಾಗಾಗಿ ನೋ ಬಾಲ್ ಎಂದರು. ಆ ಬಳಿಕ ಎಚ್ಚೆತ್ತುಕೊಂಡ ಅಂಪೈರ್ ನೋ ಬಾಲ್ ಎಂದರು. ಇದೀಗ ಸ್ಮಿತ್ ಅವರ ಚುರುಕಿನ ಗ್ರಹಿಕೆ, ಬದ್ಧತೆಗೆ ಎಲ್ಲೆಡೆ ಮೆಚ್ಚುಗೆ ಕೇಳಿ ಬರುತ್ತಿದೆ. ಇದನ್ನೂ ಓದಿ: ವಿಶ್ವವಿದ್ಯಾಲಯದ ಪರೀಕ್ಷೆ ಪ್ರವೇಶ ಪತ್ರದಲ್ಲಿ ಮೋದಿ, ಧೋನಿ ಫೋಟೋ – ತನಿಖೆಗೆ ಆದೇಶ
Advertisement
Steve Smith launching a filthy slog over the fence because he knew it was a no-ball due to the number of fielders outside the circle ????#AUSvNZ #PlayOfTheDay pic.twitter.com/T3LFFjsCB8
— cricket.com.au (@cricketcomau) September 11, 2022
ಈ ಪಂದ್ಯದಲ್ಲಿ ಸ್ಮಿತ್ ಏಕದಿನ ಕ್ರಿಕೆಟ್‍ನಲ್ಲಿ ವರ್ಷಗಳ ಬಳಿಕ ಶತಕ 105 ರನ್ (131 ಎಸೆತ) ಸಿಡಿಸಿ ಮಿಂಚಿದರು. ಇದು ಸ್ಮಿತ್ ಅವರ 12 ಏಕದಿನ ಶತಕವಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 40ನೇ ಶತಕ ಸಿಡಿಸಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದರು. 71 ಶತಕ ಸಿಡಿಸಿರುವ ಕೊಹ್ಲಿ (Virat Kohli) ಮೊದಲ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ಗೆ ಆರನ್ ಫಿಂಚ್ ವಿದಾಯ
ಫಿಂಚ್‍ಗೆ ಗೆಲುವಿನ ವಿದಾಯ:
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಮಿತ್ ಅವರ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 267 ರನ್ ಕಲೆಹಾಕಿತು. 268 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ 242 ರನ್‍ಗಳಿಗೆ ಸರ್ವಪತನಕಂಡು ಸೋಲು ಕಂಡಿದೆ. 25 ರನ್‍ಗಳ ಜಯದೊಂದಿಗೆ ಆಸ್ಟ್ರೇಲಿಯಾ ತಂಡ ತನ್ನ ಕೊನೆಯ ಪಂದ್ಯವಾಡಿದ ನಾಯಕ ಆರನ್ ಫಿಂಚ್‍ಗೆ (Aaron Finch) ಗೆಲುವಿನ ವಿದಾಯ ನೀಡಿದೆ.
Live Tv
[brid partner=56869869 player=32851 video=960834 autoplay=true]