ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಇತಿಹಾಸ ಸೃಷ್ಟಿ ಮಾಡಿದೆ. ಇದೇ ವೇಳೆ ನಾಯಕ ವಿರಾಟ್ ಕೊಹ್ಲಿ ಸರಣಿ ಗೆಲುವಿಗೆ ತಂಡದ ಆಟಗಾರ ಸಂಘಟಿತ ಹೋರಾಟ ಕಾರಣ ಎಂದು ತಿಳಿಸಿದ್ದು, ಈ ಸರಣಿಯಲ್ಲಿ ದಾಖಲಾದ ಐದು ಅತ್ಯುತ್ತಮ ಕ್ಯಾಚ್ ಗಳ ಮಾಹಿತಿ ಇಲ್ಲಿದೆ.
ರಹಾನೆ: ಟೀಂ ಇಂಡಿಯಾ ಉಪ ನಾಯಕ ಸಿಡ್ನಿ ಟೆಸ್ಟ್ ಪಂದ್ಯ ವೇಳೆ ಮೊದಲ ಇನ್ನಿಂಗ್ಸ್ ನ ಶಮಿ ಎಸೆದ 52ನೇ ಓವರಿನ ನಾಲ್ಕನೇಯ ಎಸೆತದಲ್ಲಿ ಮಾರ್ನಸ್ ಲ್ಯಾಬುಶಾನೆ ಕ್ಯಾಚ್ ಪಡೆದು ಗಮನ ಸೆಳೆದರು. ಶಾರ್ಟ್ ಮಿಡ್ ವಿಕೆಟ್‍ನತ್ತ ಸಿಡಿದ ಚೆಂಡನ್ನು ರಹಾನೆ ಅತ್ಯುತ್ತಮವಾಗಿ ಕ್ಯಾಚ್ ಹಿಡಿದು ಆಸ್ಟ್ರೇಲಿಯಾದ ಹಿನ್ನಡೆಗೆ ಕಾರಣರಾಗಿದ್ದರು. ಈ ವೇಳೆ 38 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಮಾರ್ನಸ್ ಲ್ಯಾಬುಶಾನೆ ಪೆವಿಲಿಯನ್ ಸೇರಿದರು.
Advertisement
A ripper from Rahane for another breakthrough on day three.#AUSvIND | @bet365_aus pic.twitter.com/AloLI08vB9
— cricket.com.au (@cricketcomau) January 5, 2019
Advertisement
ಮಯಾಂಕ್ ಅಗರ್ವಾಲ್: ಆಸೀಸ್ ಟೆಸ್ಟ್ ಸರಣಿಗೆ ಆಯ್ಕೆ ಆಗಿ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್‍ನಲ್ಲೂ ಕಮಲ್ ಮಾಡಿದ್ದರು. 3ನೇ ಟೆಸ್ಟ್ ಪಂದ್ಯದ ಆಸೀಸ್ ಇನ್ನಿಂಗ್ಸ್ ವೇಳೆ 11ನೇ ಓವರ್ ಎಸೆದಿದ್ದ ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ 8 ರನ್ ಗಳಿಸಿದ್ದ ಫಿಂಚ್, ಶಾರ್ಟ್ ಮಿಡ್‍ವಿಕೆಟ್ ನತ್ತ ಸಿಡಿಸಿದ್ದ ಚೆಂಡನ್ನು ಮಯಾಂಕ್ ಡೈವ್ ಮಾಡಿ ಕ್ಯಾಚ್ ಪಡೆದಿದ್ದರು.
Advertisement
https://twitter.com/telegraph_sport/status/1078441138674167809?
Advertisement
ವಿರಾಟ್ ಕೊಹ್ಲಿ: ಟೆಸ್ಟ್ ಸರಣಿಯ ಉದ್ದಕ್ಕೂ ಆಕ್ರಮಣಕಾರಿ ಪ್ರವೃತ್ತಿಯಿಂದೇ ಆಸೀಸ್ ವಿರುದ್ಧ ಸವಾರಿ ಮಾಡಿದ್ದ ನಾಯಕ ವಿರಾಟ್ ಕೊಹ್ಲಿ, 2ನೇ ಟೆಸ್ಟ್ ಪಂದ್ಯದ ವೇಳೆ ಹ್ಯಾಡ್ಸ್‍ಕಾಂಬ್ ಕ್ಯಾಚ್ ಪಡೆದು ಮಿಂಚಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್ ನ ಇಶಾಂತ್ ಶರ್ಮಾ ಎಸೆದ 54ನೇ ಓವರ್ ನಲ್ಲಿ 7 ರನ್ ಗಳಿಸಿದ್ದ ಹ್ಯಾಡ್ಸ್ ಕಾಂಬ್ ಸ್ಲಿಪ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ದರು.
TAKE A BOW @IMVKOHLI ????????????
A piece of genius from #KingKohli in the slips https://t.co/EM9t1uPKGo #Kohli #ViratKohli pic.twitter.com/64WGLLKDKM
— Telegraph Sport (@telegraph_sport) December 14, 2018
ಹ್ಯಾಂಡ್ಸ್ ಕಾಂಬ್: ಯುವ ವಿಕೆಟ್ ಕೀಪರ್ ರಿಷಬ್ ಪಂತ್ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ನಾಥನ್ ಲಯನ್ ಬ್ಯಾಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ದರು. 54ನೇ ಓವರ್ ನ 3ನೇ ಎಸೆತದಲ್ಲಿ ನಾಥನ್ ಲಯನ್ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ ಪಂತ್‍ರನ್ನು ಹ್ಯಾಂಡ್ಸ್ ಕಾಂಬ್ ಉತ್ತಮವಾಗಿ ಕ್ಯಾಚ್ ಹಿಡಿದು ಔಟ್ ಮಾಡಿಸಿದರು.
ಖವಾಜಾ: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ನಾಯಕ ವಿರಾಟ್ ಕೊಹ್ಲಿ ಅವರನ್ನು ಕಟ್ಟಿ ಹಾಕಲು ಪ್ರಯತ್ನಿಸಿದ್ದ ಆಸೀಸ್ ಬೌಲರ್ ಗಳು ಕೊಹ್ಲಿ ವಿಕೆಟ್ ಪಡೆಯಲು ಪೈಪೋಟಿ ನಡೆಸಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪಡೆದ ಕಮ್ಮಿನ್ಸ್ ಸಾಧನೆಗೆ ಗಲ್ಲಿಯಲ್ಲಿ ನಿಂತಿದ್ದ ಖವಾಜಾ ಕಾರಣರಾಗಿದ್ದರು. 10ನೇ ಓವರ್ ನ 3ನೇ ಎಸೆತದಲ್ಲಿ ಡ್ರೈವ್ ಮಾಡಲು ಕೊಹ್ಲಿ ಯತ್ನಿಸುತ್ತಿದ್ದಂತೆ ಸಿಡಿದ ಚೆಂಡನ್ನು ಖವಾಜಾ ಒಂದೇ ಕೈಯಲ್ಲಿ ಹಿಡಿದಿದ್ದರು.
Plenty of classic catches in the #AUSvIND series – here are the top five! pic.twitter.com/R2Xgqpr20H
— cricket.com.au (@cricketcomau) January 7, 2019
ಸರಣಿಯಲ್ಲಿ ಟೀಂ ಇಂಡಿಯಾ ತಂಡವನ್ನು ಆಕ್ರಮಣಕಾರಿಯಾಗಿ ಮುನ್ನಡೆಸಿದ್ದ ಕೊಹ್ಲಿ ಫಿಲ್ಡಿಂಗ್ ನಲ್ಲೂ ಇದೇ ತಂತ್ರವನ್ನು ಬಳಸಿದ್ದರು. ಎದುರಾಳಿ ಆಟಗಾರರಿಗೆ ಬ್ಯಾಟ್ ಬೀಸಲು ಅವಕಾಶ ನೀಡಿ ಕ್ಯಾಚ್ ಆಗುವಂತಹ ಸನ್ನಿವೇಶ ಸೃಷ್ಟಿಸಿ ವಿಕೆಟ್ ಪಡೆಯುತ್ತಿದ್ದರು. ಹಲವು ಬಾರಿ ಪಂದ್ಯದ ನಡುವೆ ಕೊಹ್ಲಿ ಫಿಲ್ಡಿಂಗ್ ನಲ್ಲಿ ಮಾಡಿದ್ದ ಬದಲಾವಣೆಗಳು ತಂಡಕ್ಕೆ ವರವಾಗಿ ಪರಿಣಮಿಸಿದ್ದವು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv