ನವದೆಹಲಿ: ಜಗತ್ತಿನ ಹಲವು ದೇಶಗಳಲ್ಲಿ ಮತ್ತೆ ಕೋವಿಡ್ ವಿಜೃಂಭಿಸುತ್ತಿದೆ. ಲಾಕ್‍ಡೌನ್ ದಿನಗಳು ಮರುಕಳಿಸುತ್ತಿದೆ. ಆಸ್ಟ್ರೀಯಾದಲ್ಲಿ ಕೊರೊನಾ ಸೋಂಕು ಮಿತಿಮೀರುತ್ತಿದ್ದು ನಾಳೆಯಿಂದ ಲಾಕ್‍ಡೌನ್ ಜಾರಿಗೆ ಬರುತ್ತಿದೆ.
Advertisement
ಆಸ್ಟ್ರೀಯಾದಲ್ಲಿ ಕೊರೊನಾ ಸೋಂಕು ಹೆಚ್ಚಾದ ಪರಿಣಾಮ ಅಲ್ಲಿನ ಸರ್ಕಾರ ಲಾಕ್‍ಡೌನ್ ಮಾಡಲು ಸಿದ್ಧತೆಮಾಡಿಕೊಂಡಿದೆ. ಈ ನಡುವೆ ಆಸ್ಟ್ರೀಯಾದ ಈ ನಡೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರೊಂದಿಗೆ ನೆದರ್ ಲ್ಯಾಂಡ್ ನ ರೋಟರ್‍ಡ್ಯಾಂನಲ್ಲಿ ಕೊರೊನಾ ಲಾಕ್‍ಡೌನ್ ವಿರೋಧಿಸಿ ನಡೆದ ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ರಾಜಧಾನಿ ವಿಯೆನ್ನಾದಲ್ಲಿ ನಿನ್ನೆ 35 ಸಾವಿರ ಮಂದಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರೊಟೆಸ್ಟ್ ಮಾಡಲು ಬೀದಿಗೆ ಇಳಿದವರು ಮಾಸ್ಕ್ ಕೂಡ ಧರಿಸಿರಲಿಲ್ಲ. ಸ್ವಿಟ್ಜರ್ಲೆಂಡ್, ಕ್ರೊವೇಶಿಯಾ, ಇಟಲಿಯಲ್ಲಿಯೂ ಲಾಕ್‍ಡೌನ್‍ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ರೂಪಿಸಿದ ಕಾನೂನಿಗೆ ತೀವ್ರ ವಿರೋಧ ಕೇಳಿ ಬಂದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 247 ಕೊರೊನಾ ಕೇಸ್, 1 ಸಾವು
Advertisement
Advertisement
ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 10,488 ಪಾಸಿಟಿವ್ ಕೇಸ್ ದಾಖಲಾಗಿದ್ದು, 313 ಮಂದಿ ಮರಣ ಹೊಂದಿದ್ದಾರೆ. 12,329 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಭಾಷಣದಲ್ಲಿಂದು ಪೂರ್ತಿ ಮೋದಿ ‘ಜೀ’ ಮಯ
Advertisement