ಕ್ಯಾನ್‌ಬೆರಾ: ಭಾರತದೊಂದಿಗಿನ ರಕ್ಷಣಾ ಒಪ್ಪಂದವನ್ನು ಮುಂದುವರಿಸುವ ಜೊತೆಗೆ ಅದನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುವ ಸಲುವಾಗಿ ಆಸ್ಟ್ರೇಲಿಯಾ ಉಪಪ್ರಧಾನಿ ಹಾಗೂ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಇದೇ ಜೂನ್ 21, 22ರಂದು ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾರೆ.
ಆಸ್ಟ್ರೇಲಿಯಾದ ಉಪ ಪ್ರಧಾನಿ ಮತ್ತು ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಅವರು ಮುಂದಿನ ವಾರ ಭಾರತದ ಪ್ರವಾಸದಲ್ಲಿದ್ದಾರೆ. ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಆಂಥೋನಿ ಅಲ್ಬನಿಸ್ ಕಳೆದ ತಿಂಗಳು ಅಧಿಕಾರ ವಹಿಸಿಕೊಂಡ ನಂತರ ಅವರ ಸಂಪುಟದಲ್ಲಿ ನೂತನ ರಕ್ಷಣಾ ಸಚಿವರಾಗಿರುವ ರಿಚರ್ಡ್ ಮಾರ್ಲ್ಸ್ ಜೂನ್ 21 ಮತ್ತು 22ರಂದು ದೆಹಲಿಗೆ ಆಗಮಿಸಲಿದ್ದಾರೆ. ಇದನ್ನೂ ಓದಿ: ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಆರೋಪಿ ಭದ್ರತೆಗೆ ಬುಲೆಟ್ ಪ್ರೂಫ್ ವಾಹನ, 100 ಪೊಲೀಸರು
ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದು, ದೇಶದ ರಕ್ಷಣಾ ಪಡೆಗಳಲ್ಲಿ ಸಿಬ್ಬಂದಿ ಬದಲಾವಣೆ ಹಾಗೂ ಕ್ಯಾನ್‌ಬೆರಾ ನಡುವಿನ ರಕ್ಷಣಾ ಬಾಂಧವ್ಯವನ್ನು ಮುಂದುವರಿಸುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಇತ್ತೀಚೆಗೆ ನಡೆದ ಕ್ವಾಡ್ ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾ ಪ್ರಧಾನಿ ಅವರೊಂದಿಗೆ ಜಪಾನಿನ ಟೋಕಿಯೊದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ವೇಳೆ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಅಲ್ಬನಿಸ್ ಅವರಿಗೆ `ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ರಕ್ಷಣಾ ಸಂಬಂಧ ಮುಂದುವರಿಸಲು ನಾನು ಶೀಘ್ರವೇ ಭಾರತಕ್ಕೆ ಭೇಟಿ ನೀಡುವುದನ್ನು ಎದುರು ನೋಡುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಇದಕ್ಕಿಂತ ಮೊದಲು ನಿಜವಾದ ಪ್ರೀತಿ ಅನುಭವಿಸಿಲ್ಲ – ಕಾರಿನ ಜೊತೆ ಲೈಂಗಿಕ ಸಂಬಂಧ ಹೊಂದಿರುವ ವ್ಯಕ್ತಿ
ಅಂತೆಯೇ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ನಂತರ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಭಾರತ, ಆಸ್ಟ್ರೇಲಿಯಾವು ಯುಎಸ್ ಹಾಗೂ ಜಪಾನ್‌ನೊಂದಿಗೆ ರಕ್ಷಣಾ ಕಾರ್ಯಗಳನ್ನು ಹೆಚ್ಚಿಸಿವೆ. ಈ ತಿಂಗಳ ಆರಂಭದಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ಕಣ್ಗಾವಲು ಉಪಕ್ರಮ ಕೈಗೊಂಡವು. ಈ ಉಪಕ್ರಮದ ಅಡಿಯಲ್ಲಿ ರಾಯಲ್ ಆಸ್ಟ್ರೇಲಿಯನ್ ಏರ್‌ಫೋರ್ಸ್ P-8A ಪೋಸಿಡಾನ್ ವಿಮಾನವನ್ನು ಭಾರತಕ್ಕೆ ನಿಯೋಜಿಸಲಾಗಿದೆ.