ಅಹಮದಾಬಾದ್: ಭಾರತ (India) – ಆಸ್ಟ್ರೇಲಿಯಾ (Australia) ವಿಶ್ವಕಪ್ (World Cup) ಫೈನಲ್ (Final) ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಆಸೀಸ್‌ಗೆ ಭಾರತದ ಈ ಆಟಗಾರನದ್ದೆ ಫುಲ್ ಟೆನ್ಶನ್. ಟೀಂ ಇಂಡಿಯಾದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ (Virat Kohli) ವಿಕೆಟ್ ಪಡೆಯೋದೆ ಆಸಿಸ್‌ನ ಫಸ್ಟ್ ಟಾರ್ಗೆಟ್. ವಿರಾಟ್ ಕೊಹ್ಲಿ ವಿಶ್ವಕಪ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆಸಿಸ್‌ಗೆ ನಡುಕ ಹುಟ್ಟಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಪೂರೈಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದ ಕ್ರಿಕೆಟ್ ಲೋಕದ ಸರದಾರ ವಿರಾಟ್ ಕೊಹ್ಲಿ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಮತ್ತು 50+ ಸ್ಕೋರ್‌ಗಳ ದಾಖಲೆಗಳಲ್ಲಿ ಕೊಹ್ಲಿ, ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಕ್ರಿಕೆಟ್‌ನ ಮತ್ತೊಬ್ಬ ದೇವರು ಎನಿಸಿಕೊಂಡಿದ್ದಾರೆ. ಇದೇ ಕಿಂಗ್ ಕೊಹ್ಲಿ ಇದೀಗ ಆಸ್ಟ್ರೇಲಿಯಾ ಪಾಲಿಗೆ ದ್ವಿಸ್ವಪ್ನವಾಗಿ ಕಾಡುತ್ತಿದ್ದಾರೆ. ಇಂದು ನಡೆಯುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ರನ್ ಮಿಷನ್ ವಿರಾಟ್ ಕೊಹ್ಲಿಯದ್ದೆ ಟೆನ್ಶನ್. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯ ವಿಕೆಟ್ ಕಬಳಿಸೋಕೆ ಆಸೀಸ್‌ನ ಬೌಲರ್‌ಗಳು ರಣತಂತ್ರ ಹಣೆಯುತ್ತಿದ್ದು, ವಿರಾಟ್ ಕೊಹ್ಲಿಯೇ ಆಸೀಸ್ ತಂಡದ ಮೊದಲ ಟಾರ್ಗೆಟ್ ಆಗಿದ್ದಾರೆ. ಇದನ್ನೂ ಓದಿ: ಬರೊಬ್ಬರಿ 20 ವರ್ಷದ ಮುಯ್ಯಿಗೆ ಕಾದಿದೆ ಟೀಂ ಇಂಡಿಯಾ!
Advertisement
Advertisement
2023ರ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಉಗ್ರ ರೂಪಕ್ಕೆ ಎದುರಾಳಿ ಬೌಲರುಗಳು ಪತರುಗಟ್ಟಿ ಹೋಗಿದ್ದಾರೆ. ಒಟ್ಟು 10 ಪಂದ್ಯಗಳಲ್ಲಿ, 90.68 ರನ್ ಸ್ಟ್ರೈಕ್ ರೇಟ್‌ನೊಂದಿಗೆ 711 ರನ್ ಗಳಿಸಿ, 2023ರ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಇಳಿದು, ಆಡಿದ 10 ಇನ್ನಿಂಗ್ಸ್ನಲ್ಲಿ 711 ರನ್ ಗಳಿಸಿದ್ದು, ಇದರಲ್ಲಿ ಮೂರು ಶತಕ, 5 ಅರ್ಧಶತಕ ಸೇರಿದೆ. 10 ಇನ್ನಿಂಗ್ಸ್ಗಳಲ್ಲಿ 64 ಬೌಂಡರಿ, 9 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಕಿಂಗ್ ಕೊಹ್ಲಿಯ ಈ ಬೆಂಕಿಯಂತಹ ಪರ್ಫಾಮೆನ್ಸ್ ನೋಡಿಯೇ ಕಾಂಗಾರುಗಳಿಗೆ ನಡುಕ ಶುರುವಾಗಿದೆ. ಇದನ್ನೂ ಓದಿ: World Cup 2023: ಟೀಂ ಇಂಡಿಯಾಗೆ 3ನೇ ಪ್ರಶಸ್ತಿ ಗೆಲ್ಲುವ ಕನಸು- ಆಸೀಸ್‍ಗೆ 6ನೇ ಟ್ರೋಫಿ ಮೇಲೆ ಕಣ್ಣು
Advertisement
Advertisement
ಮೊದಲ ಬ್ಯಾಟಿಂಗ್ ಮಾಡಿದರೂ ಕೊಹ್ಲಿ ಸರಾಗವಾಗಿ ರನ್ ಗಳಿಕೆ ಮಾಡುತ್ತಾರೆ. ಒಂದೊಮ್ಮೆ ಭಾರತಕ್ಕೆ ಎಷ್ಟೇ ಟಾರ್ಗೆಟ್ ನೀಡಿದರೂ ಕೊಹ್ಲಿ ಕ್ರಿಸ್‌ನಲ್ಲಿದ್ದರೆ ಚೇಸ್ ಮಾಡಿ, ಭಾರತವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಅದೇನೆ ಆಗಲಿ, ವಿರಾಟ್ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ವಿಶ್ವಕಪ್ ಗೆಲ್ಲಲಿ ಅನ್ನೋದು ಕೋಟ್ಯಂತರ ಭಾರತೀಯರ ಪ್ರಾರ್ಥನೆ, ಹಾರೈಕೆ. ಇದನ್ನೂ ಓದಿ: ಇಂದು IND Vs AUS ಸಮರ – 12 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವ ತವಕ