– ಅಧಿಕೃತ ಪಟ್ಟಿ ಬಿಡುಗಡೆಗೊಳಿಸಿದ ಐಪಿಎಲ್ ಮಂಡಳಿ
ಮುಂಬೈ: 16 ಆವೃತ್ತಿ ಕಳೆದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಬಾರಿ ಬಲಿಷ್ಠ ಆಟಗಾರರ ಪಡೆ ಕಟ್ಟಿ, ಟ್ರೋಫಿ ಗೆಲ್ಲಲು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಕಳೆದ ಆವೃತ್ತಿಯಲ್ಲಿದ್ದ 11 ಆಟಗಾರರಿಗೆ ಗೇಟ್ ಪಾಸ್ ನೀಡಿದ್ದು, 18 ಆಟಗಾರರನ್ನ ತಂಡದಲ್ಲಿ ಉಳಿಸಿಕೊಂಡಿದೆ.
Bengaluru’s Greenery ???? Green’s monstrous hits – time to make safety helmets at the Cubbon Park mandatory.
You’ll enjoy the love of the best fans in the world, Greeny! ❤️#PlayBold #ನಮ್ಮRCB #IPL2024 @CameronGreen_ pic.twitter.com/VXo8Df2VfC
— Royal Challengers Bangalore (@RCBTweets) November 27, 2023
Advertisement
ಅಲ್ಲದೇ ಪರ್ಸ್‌ನಲ್ಲಿ 40.75 ಕೋಟಿ ರೂ. ಉಳಿಸಿಕೊಂಡಿದ್ದ ಆರ್‌ಸಿಬಿ, ಟ್ರೇಡ್ ವಿಂಡೋ (T) ನಿಯಮದಲ್ಲಿ ಮುಂಬೈ ತಂಡದಿಂದ 17.5 ಕೋಟಿ ರೂ.ಗೆ ಕ್ಯಾಮರೂನ್ ಗ್ರೀನ್ (Cameron Green) ಅವರನ್ನು ಖರೀದಿ ಮಾಡಿದೆ. ಇದರಿಂದ ಆರ್‌ಸಿಬಿ (RCB) ಪರ್ಸ್ ಮೊತ್ತ 23.25 ಕೋಟಿ ರೂ.ಗೆ ಇಳಿಕೆಯಾಗಿದೆ. ಇದನ್ನೂ ಓದಿ: IPL 2024 Retention: 10 ತಂಡಗಳಲ್ಲಿ 173 ಜನ ಸೇಫ್ – 50 ಆಟಗಾರರಿಗೆ ಗೇಟ್‌ಪಾಸ್ – ಇಲ್ಲಿದೆ ಡಿಟೇಲ್ಸ್
Advertisement
Advertisement
ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸಿರುವ ಬಗ್ಗೆ ಆರ್‌ಸಿಬಿ ಕೂಡ ತನ್ನ ಅಧಿಕೃತ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಗ್ರೀನ್ ಕೂಡ ಇದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. 2023ರಲ್ಲಿ ಐಪಿಎಲ್ (IPL 2023) ಪ್ರವೇಶಿಸಿದ ಗ್ರೀನ್ 16 ಪಂದ್ಯಗಳಿಂದ 50.22 ಸರಾಸರಿಯಲ್ಲಿ 425 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ, 2 ಅರ್ಧಶತಕಗಳೂ ಸೇರಿವೆ. ಬೌಲಿಂಗ್‌ನಲ್ಲಿ 9.50 ಎಕಾನಮಿಯಲ್ಲಿ 6 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: IPL 2024 Retention: ಭಾರೀ ಹೈಡ್ರಾಮಾ ಬಳಿಕ ಪಾಂಡ್ಯ ಮುಂಬೈಗೆ
Advertisement
ಯಾವ ಫ್ರಾಂಚೈಸಿಯಲ್ಲಿ ಎಷ್ಟು ಹಣ ಬಾಕಿಯಿದೆ?
ಚೆನ್ನೈ ಸೂಪರ್ ಕಿಂಗ್ಸ್
ಖರ್ಚು ಮಾಡಿದ ಒಟ್ಟು ಹಣ – 68.6 ಕೋಟಿ
ಬಾಕಿ ಉಳಿದಿರುವ ಹಣ – 31.4 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 6
ಡೆಲ್ಲಿ ಕ್ಯಾಪಿಟಲ್ಸ್
ಖರ್ಚು ಮಾಡಿದ ಒಟ್ಟು ಹಣ – 71.05 ಕೋಟಿ
ಬಾಕಿ ಉಳಿದಿರುವ ಹಣ – 28.95 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 9
ಗುಜರಾತ್ ಟೈಟಾನ್ಸ್
ಖರ್ಚು ಮಾಡಿದ ಒಟ್ಟು ಹಣ – 61.85 ಕೋಟಿ
ಬಾಕಿ ಉಳಿದಿರುವ ಹಣ – 38-15 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 8
ಕೋಲ್ಕತ್ತಾ ನೈಟ್‌ರೈಡರ್ಸ್
ಖರ್ಚು ಮಾಡಿದ ಒಟ್ಟು ಹಣ – 67.3 ಕೋಟಿ
ಬಾಕಿ ಉಳಿದಿರುವ ಹಣ – 32.7 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 12
ಲಕ್ನೋ ಸೂಪರ್ ಜೈಂಟ್ಸ್
ಖರ್ಚು ಮಾಡಿದ ಒಟ್ಟು ಹಣ – 86.85 ಕೋಟಿ
ಬಾಕಿ ಉಳಿದಿರುವ ಹಣ – 13.15 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 6
ಮುಂಬೈ ಇಂಡಿಯನ್ಸ್
ಖರ್ಚು ಮಾಡಿದ ಒಟ್ಟು ಹಣ - 82.25 ಕೋಟಿ
ಬಾಕಿ ಉಳಿದಿರುವ ಹಣ – 17.75 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 8
ಪಂಜಾಬ್ ಕಿಂಗ್ಸ್
ಖರ್ಚು ಮಾಡಿದ ಒಟ್ಟು ಹಣ – 70.9 ಕೋಟಿ
ಬಾಕಿ ಉಳಿದಿರುವ ಹಣ – 29.1 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 8
ಆರ್‌ಸಿಬಿ
ಖರ್ಚು ಮಾಡಿದ ಒಟ್ಟು ಹಣ – 76.75
ಬಾಕಿ ಉಳಿದಿರುವ ಹಣ – 23.25
ಲಭ್ಯವಿರುವ ಸ್ಲಾಟ್‌ಗಳು – 6
ರಾಜಸ್ಥಾನ್ ರಾಯಲ್ಸ್
ಖರ್ಚು ಮಾಡಿದ ಒಟ್ಟು ಹಣ – 85.5 ಕೋಟಿ
ಬಾಕಿ ಉಳಿದಿರುವ ಹಣ – 14.5 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 8
ಸನ್ ರೈಸರ್ಸ್ ಹೈದರಾಬಾದ್
ಖರ್ಚು ಮಾಡಿದ ಒಟ್ಟು ಹಣ – 66 ಕೋಟಿ
ಬಾಕಿ ಉಳಿದಿರುವ ಹಣ – 34 ಕೋಟಿ
ಲಭ್ಯವಿರುವ ಸ್ಲಾಟ್‌ಗಳು – 6
10 ತಂಡಗಳ ಲೆಕ್ಕಾಚಾರ
ತಂಡಗಳಿಗೆ ನಿಗದಿ ಮಾಡಿದ ಹಣ – 100 ಕೋಟಿ (ತಲಾ)
ಒಟ್ಟು ಖರ್ಚು ಮಾಡಿರುವ ಹಣ – 737.05 ಕೋಟಿ
ಬಾಕಿ ಉಳಿಸಿಕೊಂಡಿರುವ ಹಣ – 262.95 ಕೋಟಿ
ಬಾಕಿ ಉಳಿದಿರುವ ಸ್ಲಾಟ್‌ಗಳು – 77