ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್, ಸ್ಫೋಟಕ ಬ್ಯಾಟ್ಸ್‌ಮನ್ ಆಂಡ್ರ್ಯೂ ಸೈಮಂಡ್ಸ್(46) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಆಲಿಸ್ ನದಿ ಸೇತುವೆ ಬಳಿ ಇರುವ ಹರ್ವೆ ರೇಂಜ್ ರಸ್ತೆಯಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.
ಮಾರ್ಚ್‌ನಲ್ಲಿ ಶೇನ್ ವಾರ್ನ್ ಮತ್ತು ರಾಡ್ ಮಾರ್ಷ್ ಅವರ ದುರಂತ ಸಾವಿನ ನಂತರ ಈ ವರ್ಷ ಹಠಾತ್ ನಿಧನರಾದ ಮೂರನೇ ಆಸ್ಟ್ರೇಲಿಯಾದ ಕ್ರಿಕೆಟರ್ ಆಗಿದ್ದಾರೆ. ಇದನ್ನೂ ಓದಿ: IPLಗೆ ಗುಡ್ ಬೈ ಹೇಳಿದ CSK ಸ್ಟಾರ್ ಅಂಬಾಟಿ ರಾಯುಡು?
ಶನಿವಾರ ರಾತ್ರಿ 11 ಗಂಟೆಯ ವೇಳೆ ಸೇತುವೆ ಬಳಿ ಸಂಚರಿಸುತ್ತಿದ್ದಾಗ ಸೈಮಂಡ್ಸ್ ಕಾರು ರಸ್ತೆಯಿಂದ ಉರುಳಿದೆ ಎಂದು ಕ್ವೀನ್ಸ್‌ಲ್ಯಾಂಡ್ ಪೊಲೀಸರು ತಿಳಿಸಿದ್ದಾರೆ. ದುರಂತ ಸಂಭವಿಸುವ ಸಮಯದಲ್ಲಿ ಸೈಮಂಡ್ಸ್ ಒಬ್ಬರೇ ಕಾರಿನಲ್ಲಿ ಸಂಚರಿಸುತ್ತಿದ್ದರು.
1999 ಮತ್ತು 2007 ರ ಅವಧಿಯಲ್ಲಿ ಸೈಮಂಡ್ಸ್ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. 198 ಏಕದಿನ, 26 ಟೆಸ್ಟ್, 14 ಟಿ 20 ಪಂದ್ಯಗಳನ್ನು ಸೈಮಂಡ್ಸ್ ಆಡಿದ್ದರು. ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದರು.