ಸಿಡ್ನಿ: ಕಾಂಗರೂಗಳು, ಭಯ ಹುಟ್ಟಿಸೋ ಜೇಡಗಳು, ಭಾರಿ ಗಾತ್ರದ ಹಾವು, ಶಾರ್ಕ್‍ಗಳಿಗೆ ಆಸ್ಟ್ರೇಲಿಯಾ ಹೆಸರುವಾಸಿ. ಇದಕ್ಕೆಲ್ಲಾ ಭಯ ಬೀಳೋರು ಆಸ್ಟ್ರೇಲಿಯಾಗೆ ಹೋಗೋಕೆ ಹಿಂದೇಟು ಹಾಕ್ತಾರೆ. ಇಷ್ಟೆಲ್ಲಾ ಸಾಕಾಗಿಲ್ಲ ಅಂದ್ರೆ ಈ ವೈರಲ್ ಫೋಟೋ ನೋಡಿದ್ಮೇಲಂತೂ ಆಸ್ಟ್ರೇಲಿಯಾಗೆ ಪ್ರವಾಸ ಹೋಗೋ ಮುನ್ನ ಒಮ್ಮೆ ಗುಂಡಿಗೆ ಗಟ್ಟಿ ಮಾಡಿಕೊಳ್ಬೇಕು.
ಹೌದು. ಇಲ್ಲಿನ ಕ್ವೀನ್ಸ್‍ಲ್ಯಾಂಡ್‍ನ ಪೊಲೀಸರೊಬ್ಬರು ದೈತ್ಯ ಹೆಬ್ಬಾವು ರಸ್ತೆ ದಾಟಲು ಕಾದು ನಿಂತಿದ್ದ ಫೋಟೋ ಇದೀಗ ವೈರಲ್ ಆಗಿದೆ. ಇಲ್ಲಿನ ವುಜುಲ್ ವುಜುಲ್ ಬಳಿ ಇಬ್ಬರು ಪೊಲೀಸ್ ಅಧಿಕಾರಿಗಳು ರಾತ್ರಿ ಗಸ್ತಿನಲ್ಲಿದ್ದರು. ಈ ವೇಳೆ ಅತೀ ಉದ್ದದ ಹೆಬ್ಬಾವೊಂದನ್ನ ನೋಡಿದ್ದಾರೆ. ಹೆಬ್ಬಾವು ರಸ್ತೆ ದಾಟುತ್ತಿತ್ತು ಅಷ್ಟೇ.
Advertisement
ಫೋಟೋ ತೆಗೆಯೋಕೆ ಇದು ಸರಿಯಾದ ಚಾನ್ಸ್ ಎಂದುಕೊಂಡು ಸರ್ಜೆಂಟ್ ಬೆನ್ ಟೋಮ್ ತನ್ನ ಸಹೋದ್ಯೋಗಿಯಾದ ಕ್ರಿಸ್ ಕೆನ್ನಿಯನ್ನ ಕಾರಿನಿಂದ ಕೆಳಗಿಳಿಸಿ ದೈತ್ಯ ಹೆಬ್ಬಾವಿನ ಪಕ್ಕ ನಿಲ್ಲಲು ಹೇಳಿದ್ದಾರೆ. ಹಾವು ಕೂಡಲೇ ಪೊಲೀಸರಿಂದ ದೂರ ಹೋಗಿದೆ. ಆದ್ರೆ ಪೊಲೀಸರು ಅಷ್ಟರಲ್ಲಿ ಫೋಟೋ ತೆಗೆದಿದ್ರು.
Advertisement
ಈ ಫೋಟೋವನ್ನ ಕ್ವೀನ್ಸ್‍ಲ್ಯಾಂಡ್ ಪೊಲೀಸರು ಫೇಸ್‍ಬುಕ್‍ನಲ್ಲೂ ಹಂಚಿಕೊಂಡಿದ್ದಾರೆ. ಬಾಸ್, ನಮಗೆ ಇನ್ನೂ ಉದ್ದದ ಏಣಿ ಬೇಕು. ವಿಜುಲ್ ವುಜುಲ್ ಬಳಿ ರಾತ್ರಿ ಗಸ್ತಿನ ವೇಳೆ ಅಧಿಕಾರಿಗಳು ಈ ಹೆಬ್ಬಾವು ರಸ್ತೆ ದಾಟೋವರೆಗೆ ಕಾಯಬೇಕಾಯ್ತು ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.
Advertisement
ಈ ಫೋಟೋಗೆ ಈವರೆಗೆ 32 ಸಾವಿರ ರಿಯಾಕ್ಷನ್ಸ್ ಹಾಗೂ 11 ಸಾವಿರ ಕಮೆಂಟ್ಸ್ ಬಂದಿದ್ದು, 19 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಫೋಟೋ ನೋಡಿದವರು ಒಮ್ಮೆ ಹೌಹಾರಿ, ಆ ಕಡೆ ನಾನು ಹೋಗದಂತೆ ಖಚಿತಪಡಿಸಿಕೊಳ್ಳೋಕೆ ನನಗೆ ಈ ಪ್ರದೇಶದ ಮ್ಯಾಪ್ ಬೇಕು ಅಂತ ಕಮೆಂಟ್ ಮಾಡಿದ್ದಾರೆ.
Advertisement
ಈ ಹಾವು ಸ್ಕ್ರಬ್ ಪೈಥಾನ್ ಜಾತಿಗೆ ಸೇರಿದ್ದು, ಆಸ್ಟ್ರೇಲಿಯಾದಲ್ಲಿ ಇವು ಸಾಮಾನ್ಯ. ಈ ಹಾವು ಸುಮಾರು 16 ಅಡಿ(5 ಮೀಟರ್) ಉದ್ದವಿತ್ತು ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ಹಾವುಗಳು 26 ಅಡಿ(8 ಮೀಟರ್)ನಷ್ಟು ಉದ್ದ ಬೆಳೆಯುತ್ತವೆ. ಇವು ವಿಷಕಾರಿಯಲ್ಲ, ಆದ್ರೆ ತನ್ನ ಬೇಟೆಯನ್ನ ಗಟ್ಟಿಯಾಗಿ ಸುತ್ತುವರಿದು ಕೊಲ್ಲಬಹುದಾಗಿವೆ ಎಂದು ವರದಿಯಾಗಿದೆ.