ಕ್ಯಾನ್‌ಬೆರ್ರಾ: ಆಸ್ಟ್ರೇಲಿಯಾದ ಅಥ್ಲೀಟ್ ಒಬ್ಬರು ಕೇವಲ ಒಂದು ಗಂಟೆಯಲ್ಲಿ 3,182 ಪುಷ್-ಅಪ್‌ಗಳನ್ನು ಮಾಡಿ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ತಮ್ಮ ವಿಶಿಷ್ಟ ಸಾಧನೆ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಅಥ್ಲೀಟ್ ಸ್ಕಾಲಿ ಕೇವಲ ಒಂದು ಗಂಟೆಯಲ್ಲಿ 3,182 ಪುಷ್-ಅಪ್‌ಗಳನ್ನು ಮಾಡಿ ದಾಖಲೆ ಬರೆದಿದ್ದಾರೆ. 2021 ರಲ್ಲಿ ಆಸ್ಟ್ರೇಲಿಯನ್ ಜರಾಡ್ ಯಂಗ್ ಅವರು ಗಂಟೆಗೆ 3,054 ಪುಷ್-ಅಪ್‌ಗಳನ್ನು ಮಾಡಿ ದಾಖಲೆ ಬರೆದಿದ್ದರು. ಈಗ ಸ್ಕಾಲಿ ಆ ದಾಖಲೆಯನ್ನು ಮುರಿದಿದ್ದಾರೆ ಎಂದು ಜಿಡಬ್ಲ್ಯೂಆರ್ ತಿಳಿಸಿದೆ. ಇದನ್ನೂ ಓದಿ: ಸೈಕಲ್‌ನಿಂದ ಬಿದ್ದ ವಿಶ್ವದ ದೊಡ್ಡಣ್ಣ
Advertisement
Advertisement
GWR ಶುಕ್ರವಾರ ತನ್ನ ಅಧಿಕೃತ ಯೂಟ್ಯೂಬ್ ಹ್ಯಾಂಡಲ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಸ್ಕಾಲಿ ಅವರು ತಮ್ಮ ಜೀವನ ಮತ್ತು ಸಾಧನೆ ಕುರಿತು ಹೇಳಿಕೊಂಡಿದ್ದಾರೆ.
Advertisement
ಸ್ಕಾಲಿ ತನ್ನ 12 ನೇ ವಯಸ್ಸಿನಲ್ಲಿ ಬಿದ್ದು ಕೈ ಮುರಿದುಕೊಂಡಿದ್ದರು. ಆಗಿನಿಂದ ಸಿಆರ್‌ಪಿಎಸ್ (ಕಾಂಪ್ಲೆಕ್ಸ್ ರೀಜನಲ್ ಪೇಯ್ನ್ ಸಿಂಡ್ರೋಮ್) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗುಣಪಡಿಸಲಾಗದ ನೋವಿನಿಂದಾಗಿ ಅವರು ಆಗಾಗ್ಗೆ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು GWR ತಿಳಿಸಿದೆ.