ಸಿಡ್ನಿ: 2015 ಚಾಂಪಿಯನ್ ತಂಡ ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್ ಹಣಾಹಣಿಗೆ 15 ಆಟಗಾರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಚೆಂಡು ವಿರೂಪಗೊಳಿಸಿ ನಿಷೇಧಕ್ಕೆ ಒಳಗಾಗಿದ್ದ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ತಂಡದಲ್ಲಿ ಸ್ಥಾನ ಪಡೆದು ಕಮ್ ಬ್ಯಾಕ್ ಮಾಡಿದ್ದಾರೆ.
ಸ್ಮಿತ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದರು ಕೂಡ ಫಿಂಚ್ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದು, ಅಲೆಕ್ಸ್ ಕೆರ್ರಿ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ನಿಷೇಧ ಪೂರ್ಣಗೊಂಡ ಬಳಿಕ ಮಾಜಿ ನಾಯಕ ಸ್ಮಿತ್‍ಗೆ ಇದು ಮೊದಲ ಅವಕಾಶವಾಗಿದೆ. ಕಳೆದ ತಿಂಗಳಷ್ಟೇ ಸ್ಮಿತ್ ಮೇಲಿನ ನಿಷೇಧ 1 ವರ್ಷ ಅವಧಿ ಪೂರ್ಣಗೊಂಡಿತ್ತು. ಪಾಕಿಸ್ತಾನ ವಿರುದ್ಧ ನಡೆದ ಸಿಮೀತ ಓವರ್ ಗಳ ಸರಣಿಯ ಅಂತಿಮ 2 ಪಂದ್ಯಗಳಿಗೆ ಇಬ್ಬರು ಆಟಗಾರರು ಅರ್ಹರಾಗಿದ್ದರೂ ಕೂಡ ಆಯ್ಕೆ ಸಮಿತಿ ಅವಕಾಶ ನೀಡಿರಲಿಲ್ಲ.
BREAKING: Australia name their #CWC19 squad! pic.twitter.com/jmz7KhPKxA
— ICC Cricket World Cup (@cricketworldcup) April 15, 2019
ಈಗಾಗಲೇ 5 ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿರುವ ಆಸೀಸ್ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡದಲ್ಲಿ ಒಂದಾಗಿದೆ. ಮೇ 30 ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಆರಂಭವಾಲಿದ್ದು, ಆಸೀಸ್ ಜೂನ್ 01 ರಂದು ಆಫ್ಘಾನಿಸ್ತಾನ ವಿರುದ್ಧ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
ತಂಡ: ಆ್ಯರೋನ್ ಫಿಂಚ್ (ನಾಯಕ), ಉಸ್ಮಾನ್ ಖವಾಜ, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಶೇನ್ ಮಾರ್ಶ್, ಗ್ಲೇನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯ್ನಿಸ್, ಅಲೆಕ್ಸ್ ಕೆರ್ರಿ, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೇ ರಿಚರ್ಡ್ ಚನ್, ನಾಥನ್ ಕೌಲ್ಡರ್ ನೀಲ್, ಜೇಸನ್ ಬೆಹ್ರನ್ ಡ್ರಾಪ್, ನೇಥನ್ ಲಯನ್, ಆ್ಯಡಂ ಜಂಪಾ.