ಟೀಂ ಇಂಡಿಯಾ ದಾಖಲೆ ಕನಸು ಭಗ್ನ -ಬೆಂಗಳೂರಲ್ಲಿ ಕೊಹ್ಲಿ ಪಡೆಗೆ ಸೋಲು

Public TV
2 Min Read
DK0tRpwWkAE8SnC

ಬೆಂಗಳೂರು: ಟೀಂ ಇಂಡಿಯಾದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 21 ರನ್ ಗಳಿಂದ ಸೋಲಿಸಿತು. ಈ ಮೂಲಕ ಸತತ 10 ಗೆಲುವಿನ ಸವಿಯ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾ ಕನಸು ಕನಸಾಗಿಯೇ ಉಳಿಯಿತು.

50 ಓವರ್ ಗಳಲ್ಲಿ ಗೆಲ್ಲಲು 335 ಟಾರ್ಗೆಟ್ ಬೆನ್ನತ್ತಿದ ಭಾರತ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಮಹೇಂದ್ರ ಸಿಂಗ್ ಧೋನಿ ಔಟಾಗುವವರೆಗೆ ಟೀಂ ಇಂಡಿಯಾ ಗೆಲುವಿನ ನಿರೀಕ್ಷೆಯಲ್ಲಿತ್ತು.

DKv2BjSUMAAKU J

ಅಜಿಂಕ್ಯಾ ರಹಾನೆ ಹಾಗೂ ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ನೀಡಿದರು. ಮಧ್ಯದಲ್ಲಿ ಬಂದ ಹಾರ್ದಿಕ್ ಪಾಂಡ್ಯ 3 ಸಿಕ್ಸರ್ ಗಳನ್ನು ಸಿಡಿಸಿದರೂ ಭಾರತದ ಗೆಲುವಿಗೆ ಇದು ಸಾಕಾಗಲಿಲ್ಲ. ರಹಾನೆ 53, ರೋಹಿತ್ ಶರ್ಮಾ 65, ವಿರಾಟ್ ಕೊಹ್ಲಿ 21, ಪಾಂಡ್ಯ 41, ಕೇದಾರ್ ಜಾಧವ್ 67, ಮನೀಷ್ ಪಾಂಡೆ 33, ಧೋನಿ 13, ಅಕ್ಷರ್ ಪಟೇಲ್ 5, ಮೊಹಮ್ಮದ್ ಶಮಿ 6 ಹಾಗೂ ಉಮೇಶ್ ಯಾದವ್ 2 ರನ್ ಗಳಿಸಿದರು.

ಆಸ್ಟ್ರೇಲಿಯಾ ಪರವಾಗಿ ರಿಚಡ್ರ್ಸನ್ 3, ಕಾಲ್ಟರ್‍ನೈಲ್2, ಕಮಿನ್ಸ್ ಹಾಗೂ ಝಂಪಾ ತಲಾ 1 ವಿಕೆಟ್ ಗಳಿಸಿದರು.

DK0tRp2XoAETdlh

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕಿಳಿಯಿತು. ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶತಕ ಬಾರಿಸಿದರು. 119 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರವಿನಿಂದ 124 ರನ್ ಗಳಿಸಿದರು. ಆಸ್ಟ್ರೇಲಿಯಾದ ಆಕ್ರಮಣಕಾರಿ ಆಟ ಎಷ್ಟಿತ್ತೆಂದರೆ ತಂಡದ ಮೊದಲ ವಿಕೆಟ್ ಪತನವಾಗಿದ್ದತ 35ನೇ ಓವರ್ ನಲ್ಲಿ. 35ನೇ ಓವರ್ ನ ಕೊನೆಯ ಎಸೆತದಲ್ಲಿ ತಂಡದ ಮೊತ್ತ 231 ರನ್ ಆಗಿದ್ದಾಗ ಡೇವಿಡ್ ವಾರ್ನರ್ ಔಟಾದರು. ವಾರ್ನರ್ ಗೆ ಫಿಂಚ್ ಉತ್ತಮ ಜೊತೆಯಾಟ ನೀಡಿದರೂ ಶತಕ ವಂಚಿತರಾದರು. 96 ಎಸೆತಗಳಲ್ಲಿ ಫಿಂಚ್ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 94 ರನ್ ಗಳಿಸಿ ಔಟಾದರು. ಹೆಡ್ 29, ಸ್ಮಿತ್ 3, ಹ್ಯಾಂಡ್ಸ್ ಕಾಂಬ್ 43, ಸ್ಟಾಯ್ನಿಸ್ 15, ವೇಡ್ 3 ರನ್ ಗಳಿಸಿದರು.

ಟೀಂ ಇಂಡಿಯಾ ಪರವಾಗಿ ಉಮೇಶ್ ಯಾದವ್ 4 ಹಾಗೂ ಕೇದಾರ್ ಜಾಧವ್ 1 ವಿಕೆಟ್ ಪಡೆದರು. ನಿಗದಿತ 50 ಓವರ್ ಗಳು ಮುಗಿದಾಗ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿತ್ತು.

https://twitter.com/BCCI_Tv/status/913429402817613824

Share This Article
Leave a Comment

Leave a Reply

Your email address will not be published. Required fields are marked *