ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಆಸ್ಟನ್ ಅಗರ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ತಮ್ಮ ಈ ಸಾಧನೆಯನ್ನು ಆಸ್ಟನ್ ಅಗರ್ ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ ಜಡೇಜಾ ಅವರಿಗೆ ಸಲ್ಲಿಸಿದ್ದಾರೆ.
ಜೋಹಾನ್ಸ್‌ಬರ್ಗ್ ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಇನ್ನಿಂಗ್ಸ್ ನ 8ನೇ ಓವರಿನಲ್ಲಿ ಆಸ್ಟನ್ ಅಗರ್ ಅವರು ಮೂರು ಎಸೆತಗಳಲ್ಲಿ ಫ್ಲಾಫ್ ಡು ಪ್ಲೆಸಿಸ್, ಆಂಡಿಲೆ ಫೆಹ್ಲುಕ್ವೇವೊ ಮತ್ತು ಡೇಲ್ ಸ್ಟೇನ್‍ರ ವಿಕೆಟ್‍ಗಳನ್ನು ಪಡೆದರು. ಟಿ20 ಕ್ರಿಕೆಟ್‍ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಆಸ್ಟನ್ ಅಗರ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ 2007ರಲ್ಲಿ ಈ ಸಾಧನೆ ಮಾಡಿದ್ದರು.
Advertisement
Advertisement
ಪಂದ್ಯದ ನಂತರ ಮಾತನಾಡಿದ ಆಸ್ಟನ್ ಅಗರ್, ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ ಜಡೇಜಾ ಅವರಿಗೆ ನನ್ನ ಈ ಸಾಧನೆ ಸಲ್ಲುತ್ತದೆ. ಜಡೇಜಾ ಅವರು ನನ್ನ ನೆಚ್ಚಿನ ಕ್ರಿಕೆಟಿಗ. ಭಾರತದಲ್ಲಿ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಅನೇಕ ವಿಷಯಗಳನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ.
Advertisement
ಆಸ್ಟ್ರೇಲಿಯಾ ತಂಡವು ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಮೂರು ಟಿ20 ಪಂದ್ಯಗಳ ಸರಣಿ ನಡೆಯುತ್ತಿದ್ದು, ಅಗರ್ ಮೊದಲ ಪಂದ್ಯದಲ್ಲಿ 4 ಓವರ್ ಗಳಲ್ಲಿ 24 ರನ್‍ಗಳಿಗೆ 5 ವಿಕೆಟ್ ಪಡೆದರು. ಆತಿಥೇಯರನ್ನು ಆಸ್ಟ್ರೇಲಿಯಾ 107 ರನ್‍ಗಳಿಂದ ಮಣಿಸಿತು. 196ರ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ತಂಡವನ್ನು ಕೇವಲ 89 ರನ್‍ಗಳಿಗೆ ಕಟ್ಟಿಹಾಕಿತ್ತು. ಅಗರ್ ಪಂದ್ಯಶ್ರೇಷ್ಠರಾಗಿದ್ದಾರೆ.
Advertisement
ರವೀಂದ್ರ ಜಡೇಜಾ ರಾಕ್‍ಸ್ಟಾರ್:
ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಗರ್, ‘ನಾನು ಜಡೇಜಾ ಅವರನ್ನು ರಾಕ್‍ಸ್ಟಾರ್ ಎಂದು ಪರಿಗಣಿಸುತ್ತೇನೆ. ಅವರು ನನ್ನ ನೆಚ್ಚಿನ ಆಟಗಾರ. ನಾನು ಅವರಂತೆ ಆಲ್‍ರೌಂಡರ್ ಆಗಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.
ಜಡೇಜಾರಿಂದ ಮಾತ್ರ ಸ್ಫೂರ್ತಿ:
ಭಾರತ ವಿರುದ್ಧದ ಸರಣಿಯಲ್ಲಿ ನಾನು ಜಡೇಜಾ ಅವರೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದೆ. ಅವರು ನನಗೆ ಬಹಳ ಮುಖ್ಯವಾದ ವಿಷಯಗಳನ್ನು ಹೇಳಿದ್ದರು. ಅವರು ಕ್ರಿಕೆಟ್ ಜಗತ್ತಿನಲ್ಲಿ ನನ್ನ ನೆಚ್ಚಿನ ಆಟಗಾರ. ನಾನು ಅವರಂತೆ ಆಡಲು ಬಯಸುತ್ತೇನೆ. ಜಡೇಜಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ ಎಂದು ಮೆಚ್ಚುಗೆ ಮಾತನಾಡಿದ್ದಾರೆ.
"I'm lost for words" – Hat-trick hero Ashton Agar reflects on a remarkable night at The Wanderers #SAvAUS pic.twitter.com/tcaHcahibf
— cricket.com.au (@cricketcomau) February 21, 2020