– ಲಾರಾ ದಾಖಲೆಯನ್ನ ರೋಹಿತ್ ಮುರಿಯುತ್ತಾರೆ
– ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದ ನಿರ್ಧಾರ ಸರಿಯಾಗಿದೆ
ಅಡಿಲೇಡ್: ಐಪಿಎಲ್ ಟೂರ್ನಿ ವೇಳೆ ವೀರೇಂದ್ರ ಸೆಹ್ವಾಗ್ ನೀಡಿದ ಸಲಹೆ ತ್ರಿಶತಕ ಗಳಿಸುವಲ್ಲಿ ನೆರವಾಯಿತು ಎಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಿಳಿಸಿದ್ದಾರೆ.
ತ್ರಿಶತಕ ಸಿಡಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಐಪಿಎಲ್‍ನಲ್ಲಿ ಡೆಲ್ಲಿ ಡೇರ್‍ಡೆವಿಲ್ಸ್ ತಂಡದ ಜೊತೆ ಆಡುತ್ತಿದ್ದಾಗ ಸೆಹ್ವಾಗ್ ತನಗೆ ನೀಡಿದ್ದ ಸಲಹೆಯನ್ನು ತಿಳಿಸಿದರು. ಇದನ್ನೂ ಓದಿ: 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್, ಯಾಸಿರ್ ಶಾ ಶತಕ- ಪಾಕಿಸ್ತಾನಕ್ಕೆ ಫಾಲೋಆನ್, ಆರಂಭಿಕ ಆಘಾತ
Advertisement
Advertisement
ನಾನು ಟಿ-20 ಕ್ರಿಕೆಟಿಗ್‍ಗಿಂತ ಟೆಸ್ಟ್‍ಗೆ ಉತ್ತಮ ಬ್ಯಾಟ್ಸ್‌ಮನ್ ಎಂದು ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದರು. ಆ ಸಮಯದಲ್ಲಿ ಅವರ ಹೇಳಿಕೆಯನ್ನು ನಾನು ನಂಬಲಿಲ್ಲ. ಏಕೆಂದರೆ ನಾನು ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಲಿಲ್ಲ. ಆದರೆ ಅವರು ತಿಳಿಸಿದ್ದ ಕೆಲವು ಸಲಹೆಗಳು ಇಂದು ನನ್ನ ತ್ರಿಶತಕ ಸಾಧನೆಗೆ ಸಹಾಯವಾಯಿತು ಎಂದು ಹೇಳಿದರು.
Advertisement
ಟೆಸ್ಟ್ ನಲ್ಲಿ ಸ್ಲಿಪ್ ಮತ್ತು ಗಲ್ಲಿ ಇರುತ್ತೆ. ಕವರ್ ಓಪನ್ ಆಗಿರುತ್ತದೆ. ಮಿಡನ್ ಮತ್ತು ಮಿಡಾಫ್ ಅಪ್ ಆಗಿರುತ್ತದೆ. ಇದರಿದಾಗಿ ದಿನಪೂರ್ತಿ ಬಾಲನ್ನು ಆಡುವ ಸಾಮಥ್ರ್ಯ ನಿನ್ನ ಬಳಿ ಇದೆ ಎಂದು ಹೇಳಿದ್ದರು. ಈ ವಿಚಾರ ನನ್ನ ತಲೆಯಲ್ಲಿ ಯಾವಾಗಲೂ ಇರುತಿತ್ತು. ಚರ್ಚೆಯ ವೇಳೆ ಸೆಹ್ವಾಗ್ ನೀಡಿದ ಟಿಪ್ಸ್ ನನಗೆ ಬಹಳ ಬೇಗ ಅರ್ಥವಾಯಿತು ಎಂದು ತಿಳಿಸಿದರು.
Advertisement
Well, @virendersehwag knew ????https://t.co/riOviBz4BU
— ICC (@ICC) December 1, 2019
ವೆಸ್ಟ್ ಇಂಡೀಸ್‍ನ ಬ್ರಿಯಾನ್ ಲಾರಾ ಅವರ ಟೆಸ್ಟ್ ದಾಖಲೆಯನ್ನು ಮುರಿಯುವ ಸಾಮಥ್ರ್ಯ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರಿಗೆ ಎಂದು ಆಸ್ಟ್ರೇಲಿಯಾದ ಬ್ಯಾಟ್ಸ್‍ಮನ್ ಡೇವಿಡ್ ವಾರ್ನರ್ ಅಭಿಪ್ರಾಯಪಟ್ಟರು.
ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಲಾರಾ ದಾಖಲೆ ಮುರಿಯುವುದಕ್ಕೆ ವಾರ್ನರ್ ಸನಿಹದಲ್ಲಿದ್ದರು. ಆದರೆ ನಾಯಕ ಟಿಮ್ ಪೈನೆ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದ್ದರಿಂದ ಲಾರಾ ದಾಖಲೆಯನ್ನು ಮುರಿಯಲು ಅವರಿಗೆ ಸಾಧ್ಯವಾಗಲಿಲ್ಲ. ಈ ವಿಚಾರದ ಬಗ್ಗೆ ಸಾಮಾಜಿಜ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
David Warner finds himself in elite company after that epic knock against Pakistan! #AUSvPAK pic.twitter.com/DejHN7JO3S
— ICC (@ICC) November 30, 2019
ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಅಡಿಲೇಡ್‍ನಲ್ಲಿ ಹವಾಮಾನ ವರದಿಯ ಪ್ರಕಾರ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ನಾನು ಯಾವಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುತ್ತಾರೆ ಎಂದು ತಂಡವನ್ನು ನೋಡುತ್ತಿದ್ದೆ. ಕ್ರೀಸ್ ನಲ್ಲಿದ್ದಾಗ ಸ್ಪಿತ್ ಜೊತೆ ಯಾವಾಗ ತಂಡ ಡಿಕ್ಲೇರ್ ಮಾಡಿಕೊಳ್ಳುತ್ತದೆ ಎಂದು ಪ್ರಶ್ನಿಸಿದ್ದೆ. ಟೀ ಬ್ರೇಕ್ ವೇಳೆ ನಾನು ಯಾವಾಗ ಡಿಕ್ಲೇರ್ ಆಗುತ್ತದೆ ಎಂದಾಗ ತಂಡದಿಂದ ಸಂಜೆ 5:40ಕ್ಕೆ ಎಂಬ ಉತ್ತರ ಬಂತು. ಸಂಜೆ 5:40ರ ವೇಳೆ ನಾಯಕ ಪೈನೆ ಡಿಕ್ಲೇರ್ ಮಾಡಿಕೊಂಡರು. ಇದು ಮೊದಲೇ ಪೂರ್ವ ನಿರ್ಧಾರವಾಗಿತ್ತು ಎಂದು ತಿಳಿಸಿದರು.
ಟಿಮ್ ಪೈನ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸುವ ಸಮಯದಲ್ಲಿ, ತಂಡವು 127 ಓವರ್‍ನಲ್ಲಿ 3 ವಿಕೆಟ್ ನಷ್ಟಕ್ಕೆ 589ರನ್ ಗಳಿಸಿತ್ತು. ಡೇವಿಡ್ ವಾರ್ನರ್ 418 ಎಸೆತಗಳನ್ನು ಎದುರಿಸಿದ್ದ ವಾರ್ನರ್ 39 ಬೌಂಡರಿ ಹಾಗೂ ಸಿಕ್ಸ್ ನೆರವಿನಿಂದ 335 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ವೆಸ್ಟ್ ಇಂಡೀಸ್ ಬ್ಯಾಟ್ಸ್‍ಮನ್ ಲಾರಾ ಏಪ್ರಿಲ್ 2004ರಲ್ಲಿ ಇಂಗ್ಲೆಂಡ್ ವಿರುದ್ಧದ ಆಂಟಿಗುವಾದಲ್ಲಿ ನಡೆದ ಟೆಸ್ಟ್ ನಲ್ಲಿ 582 ಎಸೆತಗಳನ್ನು ಎದುರಿಸಿ ಅಜೇಯ 400 ರನ್ ಗಳಿಸಿದ್ದರು.
ರೋಹಿತ್ ಶರ್ಮಾ ಇದುವರೆಗೆ 32 ಟೆಸ್ಟ್ ಪಂದ್ಯಗಳಲ್ಲಿ 46.54 ಸರಾಸರಿಯಲ್ಲಿ 2,141 ಮತ್ತು 218 ಏಕದಿನ ಪಂದ್ಯಗಳಲ್ಲಿ 48.52 ರ ಸರಾಸರಿಯಲ್ಲಿ 8,686 ರನ್ ಗಳಿಸಿದ್ದಾರೆ. ಈ ವರ್ಷ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‍ನಲ್ಲಿ ತಮ್ಮ ಮೊದಲ ಡಬಲ್ ಸೆಂಚುರಿ ಗಳಿಸಿದ್ದಾರೆ. ಅವರು ಏಕದಿನದಲ್ಲಿ ಮೂರು ಡಬಲ್ ಶತಕಗಳನ್ನು ಗಳಿಸಿದ್ದಾರೆ. ಸೀಮಿತ ಓವರ್‍ಗಳ ಕ್ರಿಕೆಟ್‍ನಲ್ಲಿ ಅವರ ಅತ್ಯುತ್ತಮ ಸ್ಕೋರ್ 264 ರನ್ ಆಗಿದ್ದು, 2014 ರ ನವೆಂಬರ್‍ನಲ್ಲಿ ಕೋಲ್ಕತ್ತಾದಲ್ಲಿ ಶ್ರೀಲಂಕಾ ವಿರುದ್ಧ ಈ ರನ್ ಹೊಡೆದಿದ್ದರು.