-ಶಕ್ತಿ ಅದಮ್ಯ ಆತ್ಮವಿಶ್ವಾಸದಿಂದ ಹೊಮ್ಮುತ್ತೆ
– ಪಾಕ್ ವಿರುದ್ಧ ಆಸೀಸ್‍ಗೆ ಭರ್ಜರಿ ಗೆಲವು
ಅಡಿಲೇಡ್: ಮಹಾತ್ಮ ಗಾಂಧೀಜಿ ಮಾತನನ್ನು ಹೇಳಿ ಕ್ಯಾಂಡಿಸ್ ವಾರ್ನರ್, ಪತಿ ಡೇವಿಡ್ ವಾರ್ನರ್ ಅವರಿಗೆ ಧೈರ್ಯ ತುಂಬಿದ್ದಾರೆ.
ಟ್ವೀಟ್ ಮಾಡಿರುವ ಕ್ಯಾಂಡಿಸ್ ವಾರ್ನರ್, ಶಕ್ತಿ ದೈಹಿಕ ಬಲದಿಂದ ಹೊರ ಹೊಮ್ಮುವುದಿಲ್ಲ. ಅದು ಅದಮ್ಯ ಆತ್ಮವಿಶ್ವಾಸದಿಂದ ಹೊರ ಬರುತ್ತದೆ ಎಂಬ ಮಹಾತ್ಮ ಗಾಂಧೀಜಿ ಕೋಟ್ ಅನ್ನು ಬಳಸಿದ್ದಾರೆ. ಜೊತೆಗೆ ಇನ್ನೊಬ್ಬರು ನಿನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎನ್ನುವುದು ಮುಖ್ಯವೇ ಅಲ್ಲ. ನಿನ್ನ ಬಗ್ಗೆ ನೀನು ಹೊಂದಿರುವ ವಿಶ್ವಾಸವೇ ಅತಿ ಮುಖ್ಯ ಎಂದು ಕ್ಯಾಂಡಿಸ್ ವಾರ್ನರ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ‘ಬಾಲ್ ಟ್ಯಾಂಪರಿಂಗ್’ ಗುಟ್ಟು ಬಿಚ್ಚಿಟ್ಟಿದ್ದ ವಾರ್ನರ್
Advertisement
Strength does not come from physical capacity. It comes from a indomitable will. (Mahatma Gandhi) It’s not important what other people believe about you. It’s only important what you believe about yourself. @davidwarner31 #335notout pic.twitter.com/Vlg9NVktj0
— Candice Warner (@CandiceWarner31) November 30, 2019
Advertisement
ಪಾಕಿಸ್ತಾನನ ವಿರುದ್ಧ ನಡೆದ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಒಂದು ಇನ್ನಿಂಗ್ಸ್ ಹಾಗೂ 48 ರನ್‍ಗಳಿಂದ ಭರ್ಜರಿ ಗೆಲವು ಸಾಧಿಸಿದೆ. ಪಂದ್ಯ ಶ್ರೇಷ್ಠ ಪ್ರಶಸ್ತಿಗೆ 335 ರನ್ ಸಿಡಿಸಿ ಡೇವಿಡ್ ವಾರ್ನರ್ ಪಾತ್ರರಾಗಿದ್ದಾರೆ.
Advertisement
ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಔಟಾಗದೆ 335 ರನ್( 418 ಎಸೆತ, 39 ಬೌಂಡರಿ, 1 ಸಿಕ್ಸರ್), ಲಬುಶೇನ್ 162 ರನ್(238 ಎಸೆತ, 22 ಬೌಂಡರಿ) ಸಹಾಯದಿಂದ ಮೂರು ವಿಕೆಟ್ ನಷ್ಟಕ್ಕೆ 589 ರನ್ ಸಿಡಿಸಿ 127 ಓವರ್ ನಲ್ಲಿ ಡಿಕ್ಲೇರ್ ಘೋಷಿಸಿತು. ಈ ಬೃಹತ್ ಮೊತ್ತವನ್ನು ಪೇರಿಸುವಲ್ಲಿ ಪಾಕ್ ತಂಡ ವಿಫಲವಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಪಾಕ್ 94.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 302 ಗಳಿಸಿ, ಫಾಲೋಆನ್‍ಗೆ ತುತ್ತಾಗಿತ್ತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡವು 82 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 239 ರನ್ ಗಳಿಸಿತ್ತು. ಈ ಮೂಲಕ ಆಸ್ಟ್ರೇಲಿಯಾ ತಂಡವು ಇನ್ನಿಂಗ್ಸ್ ಹಾಗೂ 48 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಸೆಹ್ವಾಗ್ ನೀಡಿದ್ದ ಸಲಹೆ ನೆರವಾಯ್ತು- ತ್ರಿಶತಕ ವೀರ ವಾರ್ನರ್
Advertisement
Australia sweep series 2-0!
Josh Hazlewood's over yielded the last two wickets and Pakistan are bowled out for 239.
The hosts win by an innings and 48 runs.#AUSvPAK SCORECARD ????https://t.co/hynzrUEFTm pic.twitter.com/0o0mTdZ8kG
— ICC (@ICC) December 2, 2019
ಆಸೀಸ್ ಟೀಂ ನಾಯಕ ಟಿಮ್ ಪೈನ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸುವ ಸಮಯದಲ್ಲಿ, ತಂಡವು 127 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 589ರನ್ ಗಳಿಸಿತ್ತು. ಡೇವಿಡ್ ವಾರ್ನರ್ 418 ಎಸೆತಗಳನ್ನು ಎದುರಿಸಿದ್ದ ವಾರ್ನರ್ 39 ಬೌಂಡರಿ ಹಾಗೂ ಸಿಕ್ಸ್ ನೆರವಿನಿಂದ 335 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಇದರಿಂದಾಗಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಲಾರಾ ಅವರ ದಾಖಲೆಯನ್ನು ಹಿಂದಿಕ್ಕುವ ಅವಕಾಶದಿಂದ ವಾರ್ನರ್ ವಂಚಿತರಾದರು. ಬ್ರಿಯಾನ್ ಲಾರಾ ಏಪ್ರಿಲ್ 2004ರಲ್ಲಿ ಇಂಗ್ಲೆಂಡ್ ವಿರುದ್ಧದ ಆಂಟಿಗುವಾದಲ್ಲಿ ನಡೆದ ಟೆಸ್ಟ್ ನಲ್ಲಿ 582 ಎಸೆತಗಳನ್ನು ಎದುರಿಸಿ ಅಜೇಯ 400 ರನ್ ಗಳಿಸಿದ್ದರು.
David Warner finds himself in elite company after that epic knock against Pakistan! #AUSvPAK pic.twitter.com/DejHN7JO3S
— ICC (@ICC) November 30, 2019