– ಕೊನೆಗೆ ಕಿವೀಸ್, ಆಸೀಸ್ ಸರಣಿ ರದ್ದು
– ಕೊರೊನಾ ಎಫೆಕ್ಟ್: ಖಾಲಿ ಮೈದಾನದಲ್ಲಿ ನಡೆದ ಪಂದ್ಯ
– ಆಸೀಸ್‍ಗೆ 71 ರನ್‍ಗಳಿಂದ ಜಯ
ಸಿಡ್ನಿ: ಮಹಾಮಾರಿ ಕೊರೊನಾವೈರಸ್ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ 3 ಏಕದಿನ ಸರಣಿಯನ್ನು ರದ್ದುಗೊಳಿಸಲಾಗಿದೆ.
ಸಿಡ್ನಿಯ ಖಾಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 71 ರನ್‍ಗಳಿಂದ ಜಯ ಸಾಧಿಸಿತು. ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಇಂದು ಖಾಲಿ ಮೈದಾನದಲ್ಲಿ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಿತು. ಆದರೆ ಬೌಂಡರಿ ಹಾಗೂ ಸಿಕ್ಸ್ ದಾಟಿದ ಬಾಲ್ ಕೊಡುವವರೆ ಇರಲಿಲ್ಲ. ಇದರಿಂದಾಗಿ ಆಟಗಾರರು ಭಾರೀ ಫಜೀತಿಗೆ ಸಿಲುಕಿದರು. ಪರಿಣಾಮ ಕೊನೆಗೆ ಸರಣಿಯನ್ನೇ ರದ್ದುಗೊಳಿಸಲಾಯಿತು.
Advertisement
https://twitter.com/kickstarkiran/status/1238342029744025602
Advertisement
ಸರಣಿ ರದ್ದಾದ ನಂತರ ಕಿವಿ ತಂಡವು ತಮ್ಮ ದೇಶಕ್ಕೆ ಮರಳಿತು. ಸಿಡ್ನಿ ಮೈದಾನದಲ್ಲಿ ನ್ಯೂಜಿಲೆಂಡ್ ತಂಡವು ಸತತ ಆರನೇ ಏಕದಿನ ಪಂದ್ಯವನ್ನು ಕಳೆದುಕೊಂಡಿತು. ಮತ್ತೊಂದೆಡೆ, ಸತತ 5 ಏಕದಿನ ಪಂದ್ಯಗಳನ್ನು ಸೋತ ನಂತರ ಆಸ್ಟ್ರೇಲಿಯಾ ಪಂದ್ಯವನ್ನು ಗೆದ್ದುಕೊಂಡಿತು.
Advertisement
ಸಿಡ್ನಿ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್‍ಗೆ 258 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು 187 ರನ್‍ಗೆ ಸರ್ವಪತನ ಕಂಡಿತು. ಆಸೀಸ್ ವೇಗದ ಬೌಲರ್ ಮಿಚೆಲ್ ಮಾರ್ಷ್ 7 ಓವರ್ ಬೌಲಿಂಗ್ ಮಾಡಿ 27 ರನ್ ನೀಡಿ 3 ವಿಕೆಟ್ ಪಡೆದು ಪಂದ್ಯ ಶ್ರೇಷ್ಠಕ್ಕೆ ಭಾಜನರಾದರು.
Advertisement
Homeward bound. Lockie Ferguson has also been cleared to fly and will return to New Zealand tomorrow. #AUSvNZ pic.twitter.com/QGpTVmIKku
— BLACKCAPS (@BLACKCAPS) March 14, 2020
ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 67 ರನ್ (88 ಎಸೆತ, 9 ಬೌಂಡರಿ) ಮತ್ತು ಆರನ್ ಫಿಂಚ್ 60 ರನ್ (75 ಎಸೆತ, 3 ಬೌಂಡರಿ, 2 ಸಿಕ್ಸರ್) ಚಚ್ಚಿದರು. ಆದರೆ ಇವರ ಬಳಿಕ ಬಂದ ಇಬ್ಬರು ಬ್ಯಾಟ್ಸ್‍ಮನ್‍ಗಳು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ ನಾಲ್ಕನೇ ವಿಕೆಟ್‍ಗಳಿಗೆ ಆಸೀಸ್ 165 ರನ್ ಗಳಿಸಿತು. ಬಳಿಕ ಮಾರ್ನಸ್ ಲ್ಯಾಬುಸ್ಚಾಗ್ನೆ 56 ರನ್ ಮತ್ತು ಮಿಚೆಲ್ ಮಾರ್ಷ್ 27 ರನ್ ಗಳಿಸಿ ತಂಡದ ರನ್ ಮೊತ್ತವನ್ನು ಹೆಚ್ಚಿಸಿದರು.
ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಬಹಳ ನಿಧಾನವಾಗಿ ಆಟ ಆರಂಭಿಸಿತು. ತಂಡವು ಮೊದಲ 10 ಓವರ್ ಗಳಲ್ಲಿ ಕೇವಲ 28 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತು. ಮಾರ್ಟಿನ್ ಗುಪ್ಟಿಲ್ 40 ರನ್ (73 ಎಸೆತ, 1 ಸಿಕ್ಸ್, 1 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು. 96 ರನ್‍ಗಳಿಗೆ ಐದು ವಿಕೆಟ್‍ಗಳನ್ನು ಕಳೆದುಕೊಂಡಿದ್ದ ಕಿವೀಸ್ ಪಡೆಗೆ ಲಾಥಮ್ ಮತ್ತು ಗ್ರ್ಯಾಂಡ್‍ಹೋಮ್ ಆಸರೆಯಾದರು. ಈ ಜೋಡಿಯು ವಿಕೆಟ್‍ಗೆ 51 ರನ್ ಪೇರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿತು.
International + gully cricket#ausvsnz pic.twitter.com/gm9gJ5vdEv
— नवदीप कुमार (@_Oyegabbar) March 13, 2020
ಲಾಥಮ್ 38 ರನ್ ಹಾಗೂ ಗ್ರ್ಯಾಂಡ್‍ಹೋಮ್ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಆಟಗಾರರು ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ಮರಳಿದರು. ಪರಿಣಾಮ ನ್ಯೂಜಿಲೆಂಡ್ 41 ಓವರ್ ಗಳಲ್ಲಿ 187 ರನ್‍ಗಳಿಗೆ ಸರ್ವಪತನ ಕಂಡಿತು.
Nope, still not over this!#AUSvNZ pic.twitter.com/MJUXuJVrAj
— ICC (@ICC) March 14, 2020