ಸಿಡ್ನಿ: ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲಾಗಿರುವ ಚೀನಾ (China) ನಿರ್ಮಿತ ಭದ್ರತಾ ಕ್ಯಾಮೆರಾಗಳನ್ನು ಸುರಕ್ಷತೆ ದೃಷ್ಟಿಯಿಂದ ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ಆಸ್ಟ್ರೇಲಿಯಾದ (Australia) ರಕ್ಷಣಾ ಸಚಿವಾಲಯ ತಿಳಿಸಿದೆ.
ಯುನೈಟೆಡ್ ಸ್ಟೇಟ್ಸ್ (US) ಮತ್ತು ಬ್ರಿಟನ್‌ನಲ್ಲಿ (Britain) ಇದೇ ರೀತಿಯ ಕ್ರಮಗಳನ್ನು ಅನುಸರಿಸಲಾಗಿದೆ. ಇವೆರಡೂ ಸರ್ಕಾರಿ ಇಲಾಖೆಗಳು ಸೂಕ್ಷ್ಮ ಕಚೇರಿಗಳಲ್ಲಿ ಚೀನೀ ನಿರ್ಮಿತ ಕ್ಯಾಮೆರಾಗಳನ್ನು ಅಳವಡಿಸುವುದಂತೆ ಕ್ರಮವಹಿಸಲಾಗಿದೆ. ಇದನ್ನೂ ಓದಿ: Spy Balloon Rowː ಚೀನಾದೊಂದಿಗೆ ಸಂಘರ್ಷಕ್ಕಿಳಿಯುವುದಿಲ್ಲ ಎಂದ ಜೋ ಬೈಡನ್
Advertisement
Advertisement
ಚೀನಾದ ಕಂಪನಿಗಳಿಗೆ ಬೀಜಿಂಗ್‌ನ ಭದ್ರತಾ ವಲಯ ಗುಪ್ತಚರ ಮಾಹಿತಿ ಹಂಚಿಕೊಳ್ಳುವಂತೆ ಒತ್ತಾಯಿಸಬಹುದು ಎಂಬ ಭಯದಿಂದ ಕಳೆದ ವರ್ಷದ ನವೆಂಬರ್‌ನಲ್ಲಿ ಬ್ರಿಟನ್ ಈ ಕಾರ್ಯಾರಂಭ ಮಾಡಿತು ಎನ್ನಲಾಗಿದೆ.
Advertisement
200 ಕ್ಕೂ ಹೆಚ್ಚು ಆಸ್ಟ್ರೇಲಿಯನ್ ಸರ್ಕಾರಿ ಕಟ್ಟಡಗಳಲ್ಲಿ ಭದ್ರತಾ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆಸ್ಟ್ರೇಲಿಯನ್ ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್ ಅವರು ರಕ್ಷಣಾ ಇಲಾಖೆಯ ಕಚೇರಿಗಳಲ್ಲಿರುವ ಕ್ಯಾಮೆರಾಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು ಕ್ರಮಕೈಗೊಂಡಿದ್ದಾರೆ. ಇದನ್ನೂ ಓದಿ: Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ
Advertisement
ಕ್ಯಾಮೆರಾಗಳನ್ನು ಹಿಕ್ವಿಷನ್ ಮತ್ತು ಡಹುವಾ ಕಂಪನಿಗಳು ತಯಾರಿಸಿವೆ. ಇವೆರಡನ್ನೂ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಚೀನಾದ ಈ ಕಂಪನಿಗಳು ತಯಾರಿಸಿದ ಸಿಸಿಟಿವಿ ಕ್ಯಾಮೆರಾಗಳ ಆಮದನ್ನು ಅಮೆರಿಕಾ ನಿಷೇಧಿಸಿತು. ರಾಷ್ಟ್ರೀಯ ಭದ್ರತೆಗೆ ಇವು ಸ್ವೀಕಾರಾರ್ಹವಲ್ಲ ಎಂದು ಅಮೆರಿಕ ಅಭಿಪ್ರಾಯಪಟ್ಟಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k