ರಾಂಚಿ: ಟೀಂ ಇಂಡಿಯಾ ನಾಯಕ ಕೊಹ್ಲಿ ಶತಕ (123 ರನ್, 95 ಎಸೆತ, 16 ಬೌಂಡರಿ, 1 ಸಿಕ್ಸರ್)ದ ನಡುವೆಯೂ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 32 ರನ್‍ಗಳ ಗೆಲುವು ಪಡೆದಿದೆ. ಈ ಮೂಲಕ ಸರಣಿಯಲ್ಲಿ 1-2 ಅಂತರವನ್ನು ಕಾಯ್ದುಕೊಂಡು ಟೂರ್ನಿಯನ್ನು ಜೀವಂತವಾಗಿಸಿದೆ.
ಆಸ್ಟೇಲಿಯಾದ 314 ರನ್‍ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 48.2 ಓವರ್ 281 ರನ್ ಗಳಲ್ಲಿ ಅಲೌಟ್ ಆಯಿತು. ಭಾರತದ ನೆಲದಲ್ಲಿ ಆಸೀಸ್ 50ನೇ ಏಕದಿನ ಪಂದ್ಯವನ್ನು ಗೆದ್ದ ಸಾಧನೆಯನ್ನು ಮಾಡಿದೆ. ಆಸ್ಟ್ರೇಲಿಯಾ 89 ಏಕದಿನ ಪಂದ್ಯಗಳನ್ನು ಭಾರತದಲ್ಲಿ ಆಡಿದ್ದು, ಇದರಲ್ಲಿ 50 ಗೆಲುವು 34 ರಲ್ಲಿ ಪಂದ್ಯದಗಳಲ್ಲಿ ಸೋಲು ಕಂಡಿದೆ.
Advertisement
Advertisement
ಟೀಂ ಇಂಡಿಯಾ ಪರ ಆರಂಭಿಕರಿಬ್ಬರು ಮತ್ತೆ ವಿಫಲ ಆನುಭವಿಸಿದರು. ಧವನ್ 1 ರನ್, ರೋಹಿತ್ ಶರ್ಮಾ 14 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಅಂಬಟಿ ರಾಯುಡು ಕೂಡ ಕೇವಲ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. 6.2 ಓವರ್ ಗಳಲ್ಲಿ 27 ರನ್ ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು.
Advertisement
ಈ ಹಂತದಲ್ಲಿ ಒಂದಾದ ನಾಯಕ ಕೊಹ್ಲಿ ಹಾಗೂ ಧೋನಿ ರಕ್ಷಣಾತ್ಮಕ ಆಟಕ್ಕೆ ಮುಂದಾಗಿ ರನ್ ವೇಗಕ್ಕೆ ಶಕ್ತಿ ತುಂಬಲು ಯತ್ನಿಸಿದರು. 4ನೇ ವಿಕೆಟ್‍ಗೆ 59 ರನ್ ಜೊತೆಯಾಟ ನೀಡಿದ ಈ ಜೋಡಿ ಪಂದ್ಯದ ತಂಡದ ಹಿಡಿತ ತಪ್ಪದಂತೆ ನೋಡಿಕೊಂಡರು. ಆದರೆ ಉತ್ತಮವಾಗಿ ಆಡುತ್ತಿದ್ದ 26 ರನ್ ಗಳಿಸಿ ಆಡುತ್ತಿದ್ದ ಧೋನಿರನ್ನು ಜಂಪಾ ಔಟ್ ಮಾಡಿ ಪೆವಿಲಿಯನ್‍ಗಟ್ಟಿದರು. ಆ ಬಳಿಕ ನಾಯಕ ಕೊಹ್ಲಿರನ್ನು ಕೂಡಿಕೊಂಡ ಉತ್ತಮ ಸಾಥ್ ನೀಡಿದರು. ಇಬ್ಬರ ಆಟದಲ್ಲಿ 88 ರನ್ ಜೊತೆಯಾಟ ಮೂಡಿಬಂತು. ಆದರೆ ಜಾಧವ್ 26 ರನ್ ಗಳಿಸಿದ್ದ ವೇಳೆ ಜಂಪಾಗೆ ವಿಕೆಟ್ ಒಪ್ಪಿಸಿದರು. ಮಹತ್ವದಲ್ಲಿ ಹಂತದಲ್ಲಿ ಟೀಂ ಇಂಡಿಯಾದ ಎರಡು ವಿಕೆಟ್ ಪಡೆದ ಜಂಪಾ ಆಸೀಸ್ ಗೆಲುವಿನ ಆಸೆ ಮೂಡುವಂತೆ ಮಾಡಿದ್ರು.
Advertisement
ಕೊಹ್ಲಿ ಶತಕ ವೈಭವ: ವಿಕೆಟ್ ಉರುಳುತ್ತಿದ್ದರು ಕೂಡ ಏಕಾಂಗಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 52 ಎಸೆತಗಳಲ್ಲಿ ಅರ್ಧ ಶತಕ ಹಾಗು ಬಳಿಕ 35 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ 85 ಎಸೆತಗಳಲ್ಲಿ ಏಕದಿನ ಕ್ರಿಕೆಟ್‍ನಲ್ಲಿ 41ನೇ ಶತಕ ಸಿಡಿಸಿದರು. ಸರಣಿಯಲ್ಲಿ ಕೊಹ್ಲಿ ಸಿಡಿಸಿದ 2ನೇ ಶತಕ ಇದಾಗಿದೆ. ಅಲ್ಲದೇ ಏಕದಿನ ಕ್ರಿಕೆಟಿನಲ್ಲಿ ನಾಯಕನಾಗಿ ವೇಗವಾಗಿ 4 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. ಕೊಹ್ಲಿ ಕೇವಲ 63 ಇನ್ನಿಂಗ್ಸ್ ನಲ್ಲಿ 4 ಸಾವಿರ ರನ್ ಗಳಿಸಿ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿವಿಲಿಯರ್ಸ್ ದಾಖಲೆ ಮುರಿದರು. ಎಬಿಡಿ 77 ಇನ್ನಿಂಗ್ಸ್ ಗಳಲ್ಲಿ 4 ಸಾವಿರ ರನ್ ಪೂರೈಸಿದ್ದರು.
95 ಎಸೆತಗಳಲ್ಲಿ 16 ಬೌಂಡರಿ, ಸಿಕ್ಸರ್ ಮೂಲಕ ಶತಕ ಸಿಡಿಸಿದ ಕೊಹ್ಲಿರನ್ನು ಜಂಪಾ ಬೌಲ್ಡ್ ಮಾಡಿ ಕೊಹ್ಲಿ ಹೋರಾಟಕ್ಕೆ ಅಂತ್ಯವಾಡಿದರು. ಬಳಿಕ ಬಂದ ಯುವ ಆಟಗಾರ ವಿಜಯ್ ಶಂಕರ್ 32 ರನ್ ಹಾಗೂ ರವೀಂದ್ರ ಜಡೇಜಾ 24 ರನ್, ಶಮಿ 8 ರನ್ ಗಳಿಸಿ ನಿರ್ಗಮಿಸಿದರು. ಅಂತಿಮವಾಗಿ ತಂಡ ಓವರ್ ಗಳಲ್ಲಿ 281 ರನ್ ಗಳಿಗೆ ಅಲೌಟ್ ಆಯ್ತು.
That's that from Ranchi.
Australia win by 32 runs. The series now stands at 2-1
Scorecard – https://t.co/DQCJoMdrym #INDvAUS pic.twitter.com/95SOevYBx8
— BCCI (@BCCI) March 8, 2019
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡದ ಪರ ಉಸ್ಮಾನ್ ಖವಾಜ 104, ಫಿಂಚ್ 93, ಮ್ಯಾಕ್ಸ್‍ವೆಲ್ 47, ಸ್ಟೋಯ್ನಿಸ್ 31 ರನ್ ಬಾರಿಸಿದರು. ಪರಿಣಾಮ 5 ವಿಕೆಟ್ ನಷ್ಟಕ್ಕೆ ಆಸೀಸ್ 313 ರನ್ ಪೇರಿಸಿತ್ತು. ಆಸೀಸ್ ಪರ ಜಂಪಾ, ಕಮ್ಮಿನ್ಸ್, ರಿಚಡ್ರ್ಸನ್ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಲಯನ್ 1 ವಿಕೆಟ್ ಪಡೆದರು.
ಟೀಂ ಇಂಡಿಯಾ ಆಟಗಾರರು ಸೇನೆಗೆ ಗೌರವ ಸಲ್ಲಿಸುವ ಸಲುವಾಗಿ ಆರ್ಮಿ ಕ್ಯಾಪ್ ಧರಿಸಿ ಮೈದಾನಕ್ಕಿಳಿದಿದ್ದರು. ಅಲ್ಲದೇ ಪಂದ್ಯದ ಸಂಭಾವನೆಯ ಸೇನೆ ನಿಧಿಗೆ ನೀಡುವುದಾಗಿ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv