ಕ್ಯಾನ್ಬೆರಾ: ಆಸ್ಟ್ರೇಲಿಯಾದ ಓವಲ್ ಕ್ರಿಕೆಟ್ ಮೈದಾನದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಅಭ್ಯಾಸದ ಪಂದ್ಯದ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಕ್ರಿಕೆಟ್ ಆಟಗಾರರಿಗೆ ನೀರು ಹಾಗೂ ಪಾನೀಯ ವಿತರಿಸುವ ಮೂಲಕ ಡ್ರಿಂಕ್ಸ್ ಬಾಯ್ ಆಗಿ ಕೆಲಸ ಮಾಡಿದ್ದಾರೆ.
Australia's Prime Minister Scott Morrison brought out the drinks in the middle for Prime Minister XI's side during their warm up game against Sri Lanka. WHAT A GESTURE ???? #AUSPMXIVSL #AUSvSL pic.twitter.com/V3BDzoUo4x
— Hoody (@CricketHuddle) October 24, 2019
Advertisement
ಆಸ್ಟ್ರೇಲಿಯಾ ಪ್ರಧಾನಿಗಳ ಇಲೆವನ್ ತಂಡ ಹಾಗೂ ಶ್ರೀಲಂಕಾ ನಡುವಿನ ಅಭ್ಯಾಸದ ಪಂದ್ಯದ ಸಂದರ್ಭದಲ್ಲಿ ಡ್ರಿಂಕ್ಸ್ ಬಾಯ್ ಆಗಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಕಾರ್ಯನಿರ್ವಹಿಸಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.
Advertisement
ಮಾರಿಸನ್ ಪ್ರಧಾನಿಯಾಗಿದ್ದರೂ ಸಹ ತನ್ನ ತಂಡದ ಆಟಗಾರರಿಗೆ ನೀರು ಹಾಗೂ ಪಾನೀಯವನ್ನು ಹೊತ್ತೊಯ್ದಿದ್ದು ಕಂಡು ಬಂತು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದು, ಪ್ರಧಾನಿಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.
Advertisement
@ScottMorrisonMP ???????? https://t.co/BzyHzbAwD1
— ALi RAZA ???????? (@alimughal_am) October 24, 2019
Advertisement
ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‍ಗಳಲ್ಲಿ 8 ವಿಕೆಟ್‍ಗಳ ನಷ್ಟಕ್ಕೆ ಕೇವಲ 130 ರನ್ ಗಳಿಸಲು ಶಕ್ತವಾಯಿತು. ಆರಂಭಿಕ ಆಟಗಾರ ಹ್ಯಾರಿ ನೀಲ್ಸನ್ 50 ಎಸೆತಗಳಲ್ಲಿ 79 ರನ್ ಗಳಿಸಿದರು. ಆದರೆ ವಿಕೆಟ್‍ಗಳು ಬೇಗನೇ ಉರುಳಿದ್ದರಿಂದ 9 ವಿಕೆಟ್‍ಗಳನ್ನು ಕಳೆದುಕೊಂಡಿತು. ಕೊನೆಗೆ 19.5 ಓವರ್ ನಲ್ಲಿ 132 ರನ್ ಗಳಿಸಿ ಗೆಲುವು ದಾಖಲಿಸಿತು.