– ಅಗ್ರ ಮೂವರು ಬ್ಯಾಟರ್‌ಗಳಿಂದಲೂ ಸಿಡಿದ ಸೆಂಚುರಿ
ಮೆಕೆ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ತಂಡ ಅಬ್ಬರಿಸಿ ಬೊಬ್ಬರಿದಿದೆ. ಅಕ್ರಮಾಂಕದ ಮೂವರು ಬ್ಯಾಟರ್‌ಗಳು ಶತಕ ಸಿಡಿಸುವ ಮೂಲಕ ಹರಿಣರ ಮೇಲೆ ಸವಾರಿ ಮಾಡಿದರು. ಭರ್ಜರಿ ಆಟದಲ್ಲಿ ಆಸೀಸ್ ಪರ ಒಟ್ಟು 18 ಸಿಕ್ಸರ್ ಹಾಗೂ 36 ಬೌಂಡರಿಗಳು ದಾಖಲಾದವು.
THE POWER STRIKING OF CAMERON GREEN. pic.twitter.com/gqyJR9Ly2i
— Mufaddal Vohra (@mufaddal_vohra) August 24, 2025
ಆಸ್ಟ್ರೇಲಿಯಾದ ಮೆಕೆಯಲ್ಲಿರುವ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ ಕ್ರೀಡಾಂಗಣದಲ್ಲಿಂದು ನಡೆದ ಕೊನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 431 ರನ್ ಗಳಿಸಿದೆ. ಇದು 19 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನ (ODI Cricket) ಇನ್ನಿಂಗ್ಸ್‌ವೊಂದರಲ್ಲಿ ಆಸೀಸ್ ಗಳಿಸಿದ 2ನೇ ಗರಿಷ್ಠ ರನ್ ಆಗಿದೆ. 2006ರಲ್ಲಿ ದಕ್ಷಿಣ ಆಫಿಕಾ ವಿರುದ್ಧವೇ ಆಸ್ಟ್ರೇಲಿಯಾ 434 ರನ್ ಸಿಡಿಸಿತ್ತು. ಆದ್ರೆ ಆ ಪಂದ್ಯದಲ್ಲಿ ಸೋಲು ಕಂಡಿತ್ತು. ಇಂದಿಗೂ ಇದೊಂದು ಐತಿಹಾಸಿಕ ಪಂದ್ಯವಾಗಿದೆ. ಇದನ್ನೂ ಓದಿ: Retirement | ಎಲ್ಲ ಮಾದರಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ಗುಡ್‌ಬೈ
ಆಸ್ಟ್ರೇಲಿಯಾ ಅತಿಹೆಚ್ಚು ರನ್ ಗಳಿಸಿದ ಟಾಪ್-5 ಇನ್ನಿಂಗ್ಸ್
* 434 ರನ್ – ದಕ್ಷಿಣ ಆಫ್ರಿಕಾ ವಿರುದ್ಧ – 2006 ರಲ್ಲಿ
* 431 ರನ್ – ದಕ್ಷಿಣ ಆಫ್ರಿಕಾ ವಿರುದ್ಧ – 2025 ರಲ್ಲಿ
* 417 ರನ್ – ಅಫ್ಘಾನಿಸ್ತಾನದ ವಿರುದ್ಧ – 2015ರಲ್ಲಿ
* 399 ರನ್ – ನೆದರ್ಲೆಂಡ್ ವಿರುದ್ಧ – 2023 ರಲ್ಲಿ
* 392 ರನ್ – ದಕ್ಷಿಣ ಆಫ್ರಿಕಾ ವಿರುದ್ಧ – 2023 ರಲ್ಲಿ
ಗ್ರೀನ್ ಶೈನ್
ಇನ್ನೂ ಆಸೀಸ್ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕ್ಯಾಮರೂನ್ ಗ್ರೀನ್ (Cameron Green) ಕೇವಲ 47 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. ಇದು ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ 2ನೇ ವೇಗದ ಶತಕದವೂ ಆಗಿದೆ. 2023ರಲ್ಲಿ ನೆದರ್ಲೆಂಡ್ ವಿರುದ್ಧ 40 ಎಸೆತಗಳಲ್ಲಿ ಶತಕ ಸಿಡಿಸಿದ ಮ್ಯಾಕ್ಸ್‌ವೆಲ್ ಅಗ್ರ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡಲ್ಲ: ಸಚಿವ ಮನ್ಸುಖ್ ಮಾಂಡವಿಯಾ
ಅಬ್ಬರಿಸಿ ಬೊಬ್ಬಿರಿದ ಆಸೀಸ್
ಮೊದಲು ಬ್ಯಾಟಿಂಗ್ ಆರಂಭಿಸಿದ ಆಸೀಸ್ ಪರ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಜೋಡಿ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿತು. ಹೆಡ್ 103 ಎಸೆತಗಳಲ್ಲಿ 142 ರನ್ (5 ಸಿಕ್ಸರ್, 17 ಬೌಂಡರಿ) ಚಚ್ಚಿದ್ರೆ, ಮಾರ್ಷ್ 106 ಎಸೆತಗಳಲ್ಲಿ 100 ರನ್ (5 ಸಿಕ್ಸರ್, 6 ಬೌಂಡರಿ) ಬಾರಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಗ್ರೀನ್ ಕೇವಲ 47 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದರು. ಒಟ್ಟು 55 ಎಸೆತಗಳಲ್ಲಿ 118 ರನ್ (8 ಸಿಕ್ಸರ್, 6 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ಇದರೊಂದಿಗೆ ಅಲೆಕ್ಸ್ ಕ್ಯಾರಿ 37 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿ ಮಿಂಚಿದರು.
ಸರಣಿ ಗೆದ್ದ ಆಫ್ರಿಕಾ
ಆಸೀಸ್ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಆಸೀಸ್ 135 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ಆದರೆ ಮೂರು ಪಂದ್ಯಗಳ ಸರಣಿಯಲ್ಲಿ ಆರಂಭಿಕ 2 ಪಂದ್ಯಗಳನ್ನ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಇದನ್ನೂ ಓದಿ: ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಅರ್ಜೆಂಟಿನಾದ ಫುಟ್‌ಬಾಲ್ ಆಟಗಾರ ಮೆಸ್ಸಿ