ಮೆಲ್ಬರ್ನ್: 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ (Social Media) ಬಳಕೆಗೆ ನಿಷೇಧ ವಿಧಿಸುವ ಮಸೂದೆಯನ್ನು ಆಸ್ಟ್ರೇಲಿಯಾ (Autralia) ಅಂಗೀಕರಿಸಿದೆ.
ಮಸೂದೆಯನ್ನು ಉಭಯಪಕ್ಷೀಯ ಬೆಂಬಲದೊಂದಿಗೆ ಎರಡೂ ಸಂಸದೀಯ ಸದನಗಳು ಅಂಗೀಕರಿಸಿವೆ. ಹದಿಹರೆಯದವರು ಖಾತೆಗಳನ್ನು ಹೊಂದುವುದನ್ನು ತಡೆಯಲು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಶೀಘ್ರದಲ್ಲೇ ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ. ಇದನ್ನೂ ಓದಿ: ಚಿನ್ಮಯ್ ಕೃಷ್ಣ ದಾಸ್ರನ್ನು ಅನ್ಯಾಯವಾಗಿ ಬಂಧಿಸಲಾಗಿದೆ – ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಖಂಡನೆ
Advertisement
Advertisement
ಸಾಮಾಜಿಕ ಮಾಧ್ಯಮ ಸಂಸ್ಥೆಗಳು ನಿಯಮವನ್ನು ಅನುಸರಿಸಲು ವಿಫಲವಾದಲ್ಲಿ 274 ಕೋಟಿ ರೂ. ವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
Advertisement
ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಹೊಸ ನಿಯಮ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರ ಹಿಂದೆ ಬರಲು ಆಸ್ಟ್ರೇಲಿಯಾ ಪೋಷಕರನ್ನು ಒಟ್ಟುಗೂಡಿಸಿದ್ದಾರೆ. ಇದನ್ನೂ ಓದಿ: ಇಸ್ಕಾನ್ ಬ್ಯಾನ್ಗೆ ಒಪ್ಪದ ಬಾಂಗ್ಲಾ ಹೈಕೋರ್ಟ್
Advertisement
ಯುವ ಆಸ್ಟ್ರೇಲಿಯನ್ನರು ತಮ್ಮ ಫೋನ್ಗಳಿಂದ ದೂರವಿರಿ. ಈಜುಕೊಳದಲ್ಲಿ ಈಜಾಡಿ, ಕ್ರಿಕೆಟ್ ಮೈದಾನ, ಟೆನಿಸ್ ಮತ್ತು ನೆಟ್ಬಾಲ್ ಅಂಕಣಗಳಲ್ಲಿ ಆಟವಾಡಿ ಎಂದು ಕರೆ ನೀಡಿದ್ದಾರೆ.