ಕ್ಯಾನ್ಬೆರಾ: ಆಟಗಾರರು ಮೈದಾನದಲ್ಲಿ ಕ್ರಿಕೆಟ್ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅಂಪೈರ್ ದಂಡ ವಿಧಿಸುವುದು ಸಾಮಾನ್ಯ. ಹಾಗೆಯೇ ಆಸ್ಟ್ರೇಲಿಯಾ ದೇಶಿಯಾ ಕ್ರಿಕೆಟ್ ಟೂರ್ನಿಯ ವೇಳೆ ಸ್ಲಿಪ್ ನಲ್ಲಿದ್ದ ಆಟಗಾರ ವಿಕೆಟ್ ಕೀಪರ್ ಗ್ಲೌಸ್ ಧರಿಸಿ ಫೀಲ್ಡಿಂಗ್ ಮಾಡಿದ್ದಕ್ಕೆ ಅಂಪೈರ್ ಪೆನಾಲ್ಟಿಯಾಗಿ 5 ರನ್ ನೀಡಿದ್ದಾರೆ.
ಆಸ್ಟ್ರೇಲಿಯಾ ದೇಶಿಯಾ ಕ್ರಿಕೆಟ್ ತಂಡಗಳಾದ ಕ್ವೀನ್ಸ್ ಲ್ಯಾಂಡ್ ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾ ತಂಡಗಳ ನಡುವೆ ಶುಕ್ರವಾರ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.
Advertisement
Advertisement
ಕ್ವೀನ್ಸ್ ಲ್ಯಾಂಡ್ ತಂಡದ ವಿಕೆಟ್ ಕೀಪರ್ ಜಿಮ್ಮಿ ಪೀರ್ಸನ್ ಬ್ಯಾಟ್ಸ್ ಮನ್ ಹೊಡೆದ ಬಾಲ್ ಅನ್ನು ಹಿಡಿಯಲು ಹೋಗುವಾಗ ತಮ್ಮ ಕೈಯಲ್ಲಿ ಧರಿಸಿದ್ದ ಗ್ಲೌಸ್ ಅನ್ನು ವಿಕೆಟ್ ಬಳಿ ಎಸೆದು ಒಡಿದ್ದರು. ಈ ವೇಳೆ ಸ್ಲಿಪ್ ನಲ್ಲಿದ್ದ ಮ್ಯಾಥ್ಯೂ ರೆನ್ಷಾ ಕೀಪರ್ ಗ್ಲೌಸ್ ಧರಿಸಿ ಬಾಲನ್ನು ಹಿಡಿದಿದ್ದಾರೆ. ಇನ್ನು ಗಮನಿಸಿದ ಫೀಲ್ಡ್ ನಲ್ಲಿದ್ದ ಅಂಪೈರ್ ಕ್ವೀನ್ಸ್ ಲ್ಯಾಂಡ್ ತಂಡಕ್ಕೆ 5 ರನ್ ಪೆನಾಲ್ಟಿ ನೀಡಿದ್ದಾರೆ.
Advertisement
ಕ್ರಿಕೆಟ್ ನಿಯಮ 27.1 ರ ಪ್ರಕಾರ ಆಟದ ಮೈದಾನದಲ್ಲಿ ವಿಕೆಟ್ ಕೀಪರ್ ಮಾತ್ರ ಗ್ಲೌಸ್ ಧರಿಸಿ ಕ್ಷೇತ್ರ ರಕ್ಷಣೆ ಮಾಡಲು ಅವಕಾಶವಿದೆ. ಇಲ್ಲಿ ಈ ನಿಯಮ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಅಂಪೈರ್ ಐದು ರನ್ ಪೆನಾಲ್ಟಿ ನೀಡಿದ್ದಾರೆ.
Advertisement
ಈ ಕುರಿತು ಪಂದ್ಯದ ನಂತರ ಪ್ರತಿಕ್ರಿಯಿಸಿದ ಮ್ಯಾಥ್ಯೂ ರೆನ್ಷಾ, ಆಟದ ವೇಳೆ ತಮಾಷೆಗಾಗಿ ಗ್ಲೌಸ್ ಧರಿಸಿ ಬಾಲ್ ಪಡೆದೆ. ಇದು ಕ್ರಿಕೆಟ್ ನಿಯಮಗಳ ಉಲ್ಲಂಘನೆ ಎಂದು ತಿಳಿದಿರಲಿಲ್ಲ. ಆದರೆ ನಾನು ಹಾಗೇ ಮಾಡಬಾರದಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಪಂದ್ಯವನ್ನು ಕ್ವೀನ್ಸ್ ಲ್ಯಾಂಡ್ 215 ರನ್ ಗಳಿಂದ ಗೆದ್ದಿದ್ದರೂ 5 ರನ್ ಪೆನಾಲ್ಟಿ ನೀಡಿದ ಪರಿಣಾಮ ಗೆಲುವಿನ ಅಂತರ 211 ರನ್ ಗೆ ಇಳಿದಿತ್ತು. ದೇಶಿಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮ್ಯಾಥ್ಯೂ ರೆನ್ಷಾ ಆಸ್ಟ್ರೇಲಿಯಾದ ತಂಡಕ್ಕೆ ಮತ್ತೆ ಮರಳುವ ವಿಶ್ವಾಸದಲ್ಲಿದ್ದಾರೆ.
#Renshaw pic.twitter.com/LPpy7ChFhX
— Kyran Pick (@kyranpick) March 9, 2018