ಸಿಡ್ನಿ: ಈಗಾಗಲೇ ಸಿಡ್ನಿ ನಿವಾಸಿಗಳು 2018ರನ್ನು ಬಣ್ಣದ ಚಿತ್ತಾರಗಳ ಮೂಲಕ ಬರಮಾಡಿಕೊಂಡಿದ್ದಾರೆ. ಸಿಡ್ನಿಯ ಹಾರ್‍ಬರ್ ಬ್ರಿಡ್ಜ್ ಬಳಿ ಸಾವಿರಾರು ಜನರು ಒಂದೆಡೆ ಸೇರಿ 2017ಕ್ಕೆ ವಿದಾಯ ಹೇಳುವ ಮೂಲಕ 2018ನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಹಾರ್‍ಬರ್ ಬ್ರಿಡ್ಜ್ ಬಳಿ ಆಯೋಜನೆ ಮಾಡಿದ್ದ ಹೊಸ ವರ್ಷದ ಸಮಾರಂಭದಲ್ಲಿ ಸ್ಥಳೀಯರು ತಮ್ಮ ಕುಟುಂಬಗಳೊಂದಿಗೆ ಆಗಮಿಸಿದ್ದರು. ಹಾರ್‍ಬರ್ ಬ್ರಿಡ್ಜ್ ಬಳಿ ಸತತವಾಗಿ 12 ನಿಮಿಷಗಳ ಕಾಲ ಲೇಸರ್ ಲೈಟ್‍ಗಳ ಬಾನಂಗಳದಲ್ಲಿ ಚಿತ್ತಾರವನ್ನು ಮೂಡಿಸಿದವು.
Advertisement
ರಾತ್ರಿ 12 ಗಂಟೆಯಾಗುತ್ತಲೇ ಜನರು ಹರ್ಷೋದ್ಗಾರದ ಮೂಲಕ ಕುಣಿದು ಕುಪ್ಪಳಿಸಿದರು. ಸಂಗೀತ ಕಾರಂಜಿ ಕೂಡ ನೋಡುಗರ ಗಮನ ಸೆಳೆಯಿತು, ಸಿಟಿಯ ಜನರು ಒಂದೆಡೆ ಸೇರಿದ್ದರಿಂದ ಸೋಮವಾರ ಬೆಳಗ್ಗೆವರೆಗೂ ಟ್ರಾಫಿಕ್ ಜಾಮ್ ಉಂಟಾಗಲಿದೆ ಎಂದು ಹೇಳಲಾಗಿದೆ.