– ಹೈದರಾಬಾದ್‌ನಲ್ಲಿ ಬಿಕಾಂ ಪದವಿ ಪೂರ್ಣಗೊಳಿಸಿದ್ದ ಸಾಜಿದ್
ಸಿಡ್ನಿ: ಆಸ್ಟ್ರೇಲಿಯಾದ ಬೊಂಡಿ ಬೀಚ್‌ನಲ್ಲಿ(Australia Bondi Beach) ಯಹೂದಿಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ 16 ಜನರನ್ನು ಕೊಂದ ಇಬ್ಬರು ಬಂದೂಕುಧಾರಿಗಳು ತಂದೆ ಮತ್ತು ಮಗ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬೆನ್ನಲ್ಲೇ ಇಬ್ಬರೂ ಭಾರತೀಯ ಮೂಲದವರೇ ಅನ್ನೋದು ಬೆಳಕಿಗೆ ಬಂದಿದೆ.
ಈಗಾಗಲೇ 50 ವರ್ಷದ ಸಾಜಿದ್ ಅಕ್ರಮ್ ಎಂಬಾತನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಆತನ 24 ವರ್ಷದ ಮಗ ನವೀದ್ ಅಕ್ರಮ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಟ್ರೇಲಿಯನ್ ತನಿಖಾಧಿಕಾರಿಗಳು ದಾಳಿಯನ್ನ ಇಸ್ಲಾಮಿಕ್ ಸ್ಟೇಟ್ಸ್ ಗುಂಪಿನಿಂದ ಪ್ರೇರಿತವಾದ ಭಯೋತ್ಪಾದಕ ಕೃತ್ಯ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಉಗ್ರರ ದಾಳಿ – ಪಾಕ್ ಮೂಲದ ತಂದೆ, ಮಗನ ಹುಚ್ಚಾಟಕ್ಕೆ 16 ಬಲಿ
ಈ ನಡುವೆ ಹತ್ಯೆಯಾದ ಸಾಜಿದ್ ಅಕ್ರಮ್ ಮೂಲತಃ ಭಾರತೀಯ ವ್ಯಕ್ತಿ ಅನ್ನೋದು ಬೆಳಕಿಗೆ ಬಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಸಾಜಿದ್ ಮೂಲತಃ ಹೃದರಾಬಾದ್‌ನವನಾಗಿದ್ದು, ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದನಂತೆ. ವಲಸೆ ಹೋಗಿದ್ದರೂ ಆತ ಭಾರತದ ಪಾಸ್‌ಪೋರ್ಟ್ ಹೊಂದಿದ್ದ ಎನ್ನಲಾಗಿದೆ. ಇದನ್ನೂ ಓದಿ: Bondi Beach Attack – ನನ್ನ ಮಗ ಒಳ್ಳೆಯವ್ನು, ಅವನಂತ ಮಗನ್ನ ಪಡೆಯೋಕೆ ಜನ ಬಯಸ್ತಾರೆ: ನವೀದ್ ತಾಯಿಯ ಸಮರ್ಥನೆ!
ಸಾಜಿದ್ ಅಕ್ರಮ್ ಯಾರು?
ಹತ್ಯೆಯಾದ 50 ವರ್ಷದ ಸಾಜಿದ್ ಅಕ್ರಮ್ ಮೂಲತಃ ಹೈದರಾಬಾದ್‌ನವನು. 1998ರ ನವೆಂಬರ್‌ನಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದ. ಉದ್ಯೋಗ ಅರಸಿ ಭಾರತ ತೊರೆಯುವ ಮುನ್ನ ಹೈದರಾಬಾದ್‌ನಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ ಪದವಿ ಪೂರ್ಣಗೊಳಿಸಿದ್ದ ಎಂದು ತೆಲಂಗಾಣ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.
ಅಕ್ರಂ ಸುಮಾರು 27 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದ, ಹೈದರಾಬಾದ್‌ನ ತನ್ನ ಕುಟುಂಬದೊಂದಿಗೂ ಸೀಮಿತ ಸಂಪರ್ಕ ಹೊಂದಿದ್ದ. ಕೌಟುಂಬಿಕ ಕಲಹಗಳಿಂದಾಗಿ ಹೈದರಾಬಾದ್‌ನಲ್ಲಿರುವ ತನ್ನ ಕುಟುಂಬದೊಂದಿಗೆ ಕೆಲ ವರ್ಷಗಳಿಂದ ಸಂಬಂಧ ಕಡಿದುಕೊಂಡಿದ್ದ. 2017ರಲ್ಲಿ ಅಕ್ರಂ ತಂದೆ ತೀರಿಕೊಂಡಾಗಲೂ ಅವನು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಆದ್ರೆ ಆಮೂಲಾಗ್ರ ಬದಲಾವಣೆ ಮಾಡುವ ಅಥವಾ ಭಾರತದಲ್ಲಿ ಉಗ್ರ ಕೃತ್ಯ ಎಸಗುವ ಕಾರ್ಯಾಚರಣೆಯ ಬಗ್ಗೆ ಯಾವುದೇ ಸುಳಿವು, ಅನುಮಾಮನ ಇರಲಿಲ್ಲ ಎಂದು ತೆಲಂಗಾಣದ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಕದನ ವಿರಾಮ ಉಲ್ಲಂಘನೆ; ಥೈಲ್ಯಾಂಡ್ – ಕಾಂಬೋಡಿಯಾ ನಡುವಿನ ಸಂಘರ್ಷಕ್ಕೆ ಕಾರಣವೇನು?
ಅಕ್ರಂ 2022 ರಲ್ಲಿ ಹೈದರಾಬಾದ್‌ಗೆ ಕೊನೆಯ ಬಾರಿಗೆ ಭೇಟಿ ನೀಡಿದ್ದ. ಹಾಗಾಗಿ ಭಾರತೀಯ ಪಾಸ್‌ಪೋರ್ಟ್ ಅನ್ನು ಮುಂದುವರೆಸಿದ್ದ. ಆಸ್ಟ್ರೇಲಿಯಾಕ್ಕೆ ಬಂದ ವಲಸೆ ಬಳಿಕ ವೆನೆರಾ ಗ್ರೊಸೊ ಎಂಬ ಯುರೋಪಿಯನ್ ಮೂಲದ ಮಹಿಳೆಯನ್ನ ವಿವಾಹವಾಗಿದ್ದ. ಅಕ್ರಂಗೆ ಓರ್ವ ಮಗ, ಒಬ್ಬಳು ಮಗಳಿದ್ದಾಳೆ. ಅವರು ಆಸ್ಟ್ರೇಲಿಯಾದ ಪ್ರಜೆಗಳೇ ಆಗಿದ್ದಾರೆ.



